ವಾಷಿಂಗ್ಟನ್: ಭಾರತೀಯ ಮಕ್ಕಳು ಇತರ ಧರ್ಮಗಳ ಆಚರಣೆ, ನಿಯಮಗಳ ಬಗ್ಗೆ ಸೌಹಾರ್ದತೆಯನ್ನು ಬೆಳೆಸಿಕೊಂಡಿದ್ದಾರೆ ಎಂಬುದಾಗಿ ನೂತನ ಅಧ್ಯಯನವೊಂದು ತಿಳಿಸಿದೆ.
ಯೂನಿವಸಿಟಿ ಆಫ್ ಕ್ಯಾಲಿಫೋರ್ನಿಯಾದ ಸಂತಕ್ರೂಸ್ ಅಧ್ಯಯನ ಹೇಳುವಂತೆ, ‘ಭಾರತದ ಮಕ್ಕಳು ಹಿಂದೂಗಳು ಹಿಂದೂ ಪದ್ಧತಿಗಳನ್ನು, ಮುಸ್ಲಿಂರು ಮುಸ್ಲಿಂ ಪದ್ಧತಿಯನ್ನು ಅನುಸರಿಸಬೇಕೆಂಬ ನಿಲುವನ್ನು ಹೊಂದಿದ್ದಾರೆ. ಹಲವು ವರ್ಷಗಳಿಂದ ಧಾರ್ಮಿಕ ಸಂಘರ್ಷ ಎದುರಿಸುತ್ತಾ ಬಂದಿರುವ ಭಾಗಗಳಲ್ಲೂ ಮಕ್ಕಳು ಧಾರ್ಮಿಕ ಸೌಹಾರ್ದತೆಯನ್ನು ಉತ್ತಮ ರೀತಿಯಲ್ಲಿ ಬೆಳೆಸಿಕೊಂಡಿದ್ದಾರೆ’ ಎಂದಿದೆ.
‘ಭಾರತದ ಮಕ್ಕಳು ಆಯಾ ಧರ್ಮಿಯರು ಆಯಾ ಧರ್ಮವನ್ನು ಪಾಲಿಸಬೇಕು ಎಂಬ ನಿಲುವನ್ನು ಹೊಂದಿದ್ದಾರೆ. ಇದು ಉತ್ತಮ ಆಶಾದಾಯಕ ಆರಂಭ’ ಎಂದು ಅಧ್ಯಯನದ ರುವಾರಿ ಅಡನ್ ದಹಲ್ ಹೇಳಿದ್ದಾರೆ.
‘ಮಕ್ಕಳು ತಮ್ಮ ಧರ್ಮದ ನಿಯಮಗಳನ್ನು ಸಂತೊಷದಿಂದ ಪಾಲಿಸುತ್ತಿದ್ದಾರೆ, ಆದರೆ ಇತರರು ಅವರ ಧರ್ಮದ ನಿಯಮ ಪಾಲಿಸುವುದರ ಬಗ್ಗೆ ಅವರಿಗೆ ಯಾವುದೇ ತಿರಸ್ಕಾರ ಭಾವ ಇಲ್ಲ. ಇಂತಹ ಸೌಹಾರ್ದ ಮನೋಭಾವವೇ ಶ್ರೇಷ್ಠ ಸಾಮರಸ್ಯದ ಆರಂಭ’ ಎಂದಿದ್ದಾರೆ.
9 ರಿಂದ 15 ವರ್ಷದೊಳಗಿನ 100 ಮಕ್ಕಳನ್ನು ಸಮೀಕ್ಷೆಗೆ ಒಳಪಡಿಸಲಾಗಿದ್ದು, ಗೋಮಾಂಸ, ಮೂರ್ತಿ ಪೂಜೆಯಂತಹ ಪ್ರಶ್ನೆಗಳನ್ನು ಅವರಿಗೆ ಕೇಳಲಾಗಿದೆ. ಆದರೆ ಮಕ್ಕಳು ಇನ್ನೊಂದು ಧರ್ಮದ ಆಚರಣೆ ಬಗ್ಗೆ ತಿರಸ್ಕಾರವಿಲ್ಲದೆ ಉತ್ತರಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.