ಚೆನ್ನೈ: ಭಾರತೀಯ ವಿಜ್ಞಾನಿಗಳು ಬಾಹ್ಯಾಕಾಶ ವಿಜ್ಞಾನವನ್ನು ಒಂದು ಹಂತ ಮುಂದಕ್ಕೆ ಕೊಂಡೊಯ್ದು ಮಹತ್ತರ ಸಾಧನೆ ಮಾಡಿದ್ದಾರೆ. ಅಹ್ಮದಾಬಾದ್ನ ಫಿಸಿಕಲ್ ರಿಸರ್ಚ್ ಲ್ಯಾಬೋರೇಟರಿಯ ವಿಜ್ಞಾನಿಗಳ ತಂಡ ಭೂಮಿಯಿಂದ 600 ಜ್ಯೋತಿರ್ವರ್ಷ ದೂರದಲ್ಲಿನ ಗ್ರಹವೊಂದನ್ನು ಪತ್ತೆ ಮಾಡಿದೆ.
ಈ ಗ್ರಹವು ಶನಿ ಗ್ರಹಕ್ಕಿಂತ ಸ್ವಲ್ಪ ಚಿಕ್ಕದಾಗಿದೆ ಮತ್ತು ನೆಪ್ಚೂನ್ಗಿಂತ ದೊಡ್ಡದಾಗಿದೆ. ಇದು ಭೂಮಿ ದ್ರವ್ಯರಾಶಿಯ 27 ಪಟ್ಟು, ಭೂಮಿ ತ್ರಿಜ್ಯಕ್ಕಿಂದ ಆರು ಪಟ್ಟು ಹೆಚ್ಚು ದೊಡ್ಡದಾಗಿದೆ.
ಈ ಗ್ರಹ ಸೂರ್ಯನನ್ನು ಒಂದು ಬಾರಿ ಸುತ್ತಲು 19.5 ದಿನಗಳನ್ನು ತೆಗೆದುಕೊಳ್ಳುತ್ತದೆ. ವಿಜ್ಞಾನಿಗಳು ಈ ಗ್ರಹಕ್ಕೆ EPIC 211945201b or K2-236b ಎಂದು ಹೆಸರಿಟ್ಟಿದ್ದಾರೆ.
ಮೌಂಟ್ ಅಬುವಿನಲ್ಲಿರುವ ಪಿಆರ್ಎಲ್ನ ಗುರುಶಿಖರ್ ವೀಕ್ಷಣಾಲಯದಲ್ಲಿ 1.2 ಮೀ. ದೂರದರ್ಶಕದೊಂದಿಗೆ ಸಂಯೋಜಿತವಾಗಿರುವ ಅಡ್ವಾನ್ಸ್ ರೇಡಿಯಲ್-ವೆಲಾಸಿಟಿ ಅಬು-ಸ್ಕೈ ಸರ್ಚ್ (ಪಿಎಆರ್ಎಎಸ್) ಸ್ಪೆಕ್ಟ್ರೋಗ್ರಾಫ್ ಬಳಸಿಕೊಂಡು ಈ ಗ್ರಹವನ್ನು ಪತ್ತೆಮಾಡಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.