ನವದೆಹಲಿ: ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿಯವರ ಫಿಟ್ನೆಸ್ ಚಾಲೆಂಜ್ನ್ನು ಸ್ವೀಕರಿಸಿರುವ ಪ್ರಧಾನಿ ನರೇಂದ್ರ ಮೋದಿ, ಬುಧವಾರ ತಮ್ಮ ಬೆಳಗಿನ ವ್ಯಾಯಾಮದ 1.49 ನಿಮಿಷಗಳ ವೀಡಿಯೋವನ್ನು ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ.
ಈ ವೀಡಿಯೋದಲ್ಲಿ ಅವರು ಹಲವಾರು ಉಸಿರಾಟಕ್ಕೆ ಸಂಬಂಧಿಸಿದ ವ್ಯಾಯಾಮ, ಕೆಲವೊಂದು ಯೋಗಾಸನಗಳನ್ನು ನಡೆಸಿದ್ದಾರೆ. ಅಲ್ಲದೇ ಪ್ರಕೃತಿಯ ‘ಪೃಥ್ವಿ, ಜಲ, ಅಗ್ನಿ, ವಾಯು, ಆಕಾಶ’ ಪಂಚತತ್ವಗಳಿಂದ ಸ್ಫೂರ್ತಿ ಪಡೆದ ಟ್ರ್ಯಾಕ್ ನಡಿಗೆಯನ್ನು ಅವರು ಮಾಡಿದ್ದಾರೆ. ಈ ವ್ಯಾಯಾಮ ನವೋಲ್ಲಾಸ, ನವ ಚೈತನ್ಯ ನೀಡುತ್ತದೆ ಎಂದಿದ್ದಾರೆ.
ಅಷ್ಟೇ ಅಲ್ಲದೇ ಕರ್ನಾಟಕ ಸಿಎಂ ಎಚ್ಡಿ ಕುಮಾರಸ್ವಾಮಿ ಅವರನ್ನು ಮತ್ತು ಕಾಮನ್ವೆಲ್ತ್ ಬಂಗಾರದ ಪದಕ ವಿಜೇತ ಮಣಿಕಾ ಬಾತ್ರಾ ಅವರನ್ನು ಫಿಟ್ನೆಸ್ ಚಾಲೆಂಜ್ಗೆ ಆಹ್ವಾನಿಸಿದ್ದಾರೆ.
Here are moments from my morning exercises. Apart from Yoga, I walk on a track inspired by the Panchtatvas or 5 elements of nature – Prithvi, Jal, Agni, Vayu, Aakash. This is extremely refreshing and rejuvenating. I also practice
breathing exercises. #HumFitTohIndiaFit pic.twitter.com/km3345GuV2— Narendra Modi (@narendramodi) June 13, 2018
I am delighted to nominate the following for the #FitnessChallenge:
Karnataka’s CM Shri @hd_kumaraswamy.
India’s pride and among the highest medal winners for India in the 2018 CWG, @manikabatra_TT.
The entire fraternity of brave IPS officers, especially those above 40.
— Narendra Modi (@narendramodi) June 13, 2018
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.