ಮುಂಬಯಿ: ಮಹಾರಾಷ್ಟ್ರ ಲೆಜಿಸ್ಲೇಟಿವ್ ಕೌನ್ಸಿಲ್ನ ಒಸ್ಮಾನಾಬಾದ್-ಬೀಡ್-ಲಾತೂರ್ ಸ್ಥಳಿಯಾಡಳಿತ ಸ್ಥಾನವನ್ನು ಬಿಜೆಪಿ ಅಭ್ಯರ್ಥಿ ಸುರೇಶ್ ಧಾಸ್ ಗೆದ್ದುಕೊಂಡಿದ್ದಾರೆ.
ಧಾಸ್ ಮಹಾರಾಷ್ಟ್ರದ ಮಾಜಿ ಸಚಿವನಾಗಿದ್ದು, ಎನ್ಸಿಪಿ ಬೆಂಬಲಿತ ಅಶೋಕ್ ಜಗ್ದಲೆ ಅವರನ್ನು 74 ಮತಗಳ ಅಂತರದಿಂದ ಸೋಲಿಸಿದ್ದಾರೆ.
ಒಟ್ಟು 1003 ಮತಗಳು ಬಿದ್ದಿದ್ದು, ಧಾಸ್ ಅವರಿಗೆ 526 ಮತಗಳು ಬಿದ್ದಿವೆ. ಜಗ್ದಲೆ ಅವರಿಗೆ 452 ಮತಗಳು ಬಿದ್ದಿವೆ. 25 ಮತಗಳು ಅಸಿಂಧು ಎಂದು ಪರಿಗಣಿಸಲಾಗಿದೆ.
ಮೇ.24ರಂದು 5 ಸ್ಥಳಿಯಾಡಳಿತ ಸ್ಥಾನಗಳ ಮತ ಎಣಿಕೆ ನಡೆದಿದ್ದು, ಬಿಜೆಪಿ ಮತ್ತು ಶಿವಸೇನಾ ತಲಾ ಎರಡು ಸ್ಥಾನಗಳನ್ನು ಗೆದ್ದಿವೆ. ಎನ್ಸಿಪಿ 1 ಸ್ಥಾನ ಗೆದ್ದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.