ವಿಶಾಖಪಟ್ಟಣ: ಆಂಧ್ರಪ್ರದೇಶದ ವಿಶಾಖಪಟ್ಟಣಂ ಏರ್ಪೋರ್ಟ್ನಲ್ಲಿ ಮಿಲಿಟರಿ ವೈಮಾನಿಕ ಕಾರ್ಯಾಚರಣೆಗಳಿಗೆ ಸಮಯಾವಕಾಶವನ್ನು ನಿಗದಿ ಮಾಡುವಂತೆ ಭಾರತೀಯ ನೌಕಾಪಡೆ ಪ್ರಸ್ತಾಪ ಮಾಡಿದೆ.
ಗೋವಾ ಮತ್ತು ಪುಣೆಗಳಲ್ಲಿನ ಸಿವಿಲ್-ಮಿಲಿಟರಿ ಜಂಟಿ ವೈಮಾನಿಕ ಕಾರ್ಯಾಚರಣೆಗಳಿಗೆ ಮಾಡಿರುವ ವ್ಯವಸ್ಥೆಗಳಿಗೆ ಅನುಗುಣವಾಗಿಯೇ ವಿಶಾಖಪಟ್ಟಣಂನಲ್ಲೂ ವ್ಯವಸ್ಥೆ ಮಾಡಿಕೊಡುವಂತೆ ನೌಕೆ ಪ್ರಸ್ತಾಪವಿಟ್ಟಿದೆ.
ಸೋಮವಾರದಿಂದ ಶುಕ್ರವಾರ ಬೆಳಿಗ್ಗೆ 9.30ರಿಂದ 12.30ರವರೆಗೆ, ಮಂಗಳವಾರ ಮತ್ತು ಗುರುವಾರ ಸಂಜೆ 3ರಿಂದ 5 ಮತ್ತು ಸಂಜೆ 7ರಿಂದ 9ರವರೆಗೆ ಮಿಲಿಟರಿ ಕಾರ್ಯಾಚರಣೆಗೆ ಸಮಯ ನೀಡಬೇಕು ಎಂದು ಪ್ರಸ್ತಾವನೆ ಸಲ್ಲಿಸಲಾಗಿದೆ.
ನಾಗರಿಕ ವಿಮಾನಯಾನಕ್ಕೆ ಕಿರಿಕಿರಿ ಉಂಟಾಗದಂತೆ ಮಿಲಿಟರಿ ವೈಮಾನಿಕ ಕಾರ್ಯಾಚರಣೆಗೆ ಸಮಯವನ್ನು ನಿಗದಿಪಡಿಸಬೇಕಾಗುತ್ತದೆ. ಈ ಬಗ್ಗೆ ವಿಮಾನಯಾನ ಸಚಿವಾಲಯದ ಅಧಿಕಾರಿಗಳು, ನಾಕಾ ಅಧಿಕಾರಿಗಳೊಂದಿಗೆ ಮಾತುಕತೆ ನಡೆದ ಬಳಿಕವಷ್ಟೇ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.