ನವದೆಹಲಿ: ಹೊಸ ಸ್ಟೀಲ್ ನಿಯಮದ ಅನುಷ್ಠಾನದಿಂದಾಗಿ ಕಳೆದ ಒಂದು ವರ್ಷದಿಂದ ಭಾರತಕ್ಕೆ ರೂ.5 ಸಾವಿರ ಕೋಟಿ ಉಳಿತಾಯವಾಗಿದೆ. ಕಳೆದ ನಾಲ್ಕು ವರ್ಷಗಳಿಂದ 25 ಮಿಲಿಯನ್ ಟನ್ಗಳಷ್ಟು ಕಚ್ಛಾ ಸ್ಟೀಲ್ ಸಾಮರ್ಥ್ಯ ವೃದ್ಧಿಯಾಗಿದೆ ಎಂದು ಸ್ಟೀಲ್ ಕಾರ್ಯದರ್ಶಿ ಅರುಣಾ ಶರ್ಮಾ ತಿಳಿಸಿದ್ದಾರೆ.
ಅಲ್ಲದೇ ಭಾರತವು ಜಪಾನನ್ನು ಹಿಂದಿಕ್ಕಿ ವಿಶ್ವದ ಎರಡನೇ ಅತೀದೊಡ್ಡ ಸ್ಟೀಲ್ ಉತ್ಪಾದಕನಾಗಿ ಹೊರಹೊಮ್ಮಿದೆ ಎಂದಿದ್ದಾರೆ.
ಕಳೆದ ವರ್ಷ ರಾಷ್ಟ್ರೀಯ ಸ್ಟೀಲ್ ನಿಯಮ(ಎನ್ಎಸ್ಪಿ) ಜಾರಿಗೊಂಡಿದ್ದು, ಇದರಡಿ 2030ರ ವೇಳೆಗೆ ಸ್ಟೀಲ್ ಸಾಮರ್ಥ್ಯವನ್ನು 300 ಎಂಟಿ ಮತ್ತು ಕಚ್ಛಾ ಸ್ಟೀಲ್ ಉತ್ಪಾದನೆಯನ್ನು 250 ಎಂಟಿಗೆ ಏರಿಕೆಗೊಳಿಸುವ ಟಾರ್ಗೆಟ್ ರೂಪಿಸಲಾಗಿದೆ.
ಸ್ಟೀಲ್ ನಿಯಮದಿಂದ ಇದುವರೆಗೆ ಭಾರತ ರೂ.5 ಸಾವಿರ ಕೋಟಿ ಗಳಿಸಿದೆ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.