ಪಾಟ್ನಾ: ಬಡ ವಿದ್ಯಾರ್ಥಿಗಳಿಗೆ ಉಚಿತ ಕೋಚಿಂಗ್ ನೀಡಿ ಅವರಿಗೆ ಐಐಟಿಗೆ ಪ್ರವೇಶ ಸಿಗುವಂತೆ ಮಾಡುವ ಬಿಹಾರದ ಸೂಪರ್ 30 ಬಗ್ಗೆ ಯಾರಿಗೆ ತಾನೇ ಗೊತ್ತಿಲ್ಲ? ಈ ಬಾರಿಯೂ ಇಲ್ಲಿ ಕೋಚಿಂಗ್ ಪಡೆದ 30 ವಿದ್ಯಾರ್ಥಿಗಳ ಪೈಕಿ 26ದ್ಯಾರ್ಥಿಗಳು ಐಐಟಿ-ಜಿಇಇ(ಅಡ್ವಾನ್ಸ್ಡ್) ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರೆ.
ಗಣಿತ ಪರಿಣಿತ ಆನಂದ್ ಕುಮಾರ್ 2002ರಲ್ಲಿ ಸೂಪರ್ 30 ಸ್ಥಾಪನೆ ಮಾಡಿದ್ದು, ಇದರನ್ವಯ 30 ಪ್ರತಿಭಾನಿತ್ವ ಬಡ ವಿದ್ಯಾರ್ಥಿಗಳಿಗೆ ಕೋಚಿಂಗ್ ನೀಡಿ ಅವರನ್ನು ಐಐಟಿ-ಜಿಇಇ ಪರೀಕ್ಷೆಗೆ ಸಜ್ಜುಗೊಳಿಸುತ್ತಾರೆ.
ಅಭಿವೃದ್ಧಿಯನ್ನೇ ಕಾಣದ ಕುಗ್ರಾಮಗಳ ವಿದ್ಯಾರ್ಥಿಗಳು ಇವರಲ್ಲಿ ಕೋಚಿಂಗ್ ಪಡೆದು ನಗರದ ವಿದ್ಯಾರ್ಥಿಗಳಿಗೆ ಸ್ಪರ್ಧೆಯೊಡ್ಡುತ್ತಾರೆ.
ಮುಂದಿನ ವರ್ಷದಿಂದ 90 ವಿದ್ಯಾರ್ಥಿಗಳನ್ನು ಐಐಟಿ-ಜಿಇಇ ಪರೀಕ್ಷೆಗೆ ತಯಾರು ಮಾಡುವ ಮಹತ್ತರವಾದ ಆಶಯವನ್ನು ಆನಂದ್ ಹೊಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.