ನವದೆಹಲಿ: ಭಾರತವು ಚೀನಾದ ಮಹತ್ವಾಕಾಂಕ್ಷೆಯ ಬೆಲ್ಟ್ ಆಂಡ್ ರೋಡ್ ಯೋಜನೆಯನ್ನು ಪುರಸ್ಕರಿಸಲು ನಿರಾಕರಿಸಿದೆ. 8 ರಾಷ್ಟ್ರಗಳನ್ನೊಳಗೊಂಡ ಶಾಂಘೈ ಕೋ-ಅಪರೇಶನ್ ಆರ್ಗನೈಝೇಶನ್ನಲ್ಲಿ ಈ ಯೋಜನೆಯನ್ನು ತಿರಸ್ಕರಿಸಿದ ಏಕೈಕ ರಾಷ್ಟ್ರ ಭಾರತ.
‘ಬೆಲ್ಟ್ ಆಂಡ್ ರೋಡ್’ ಯೋಜನೆಗಾಗಿ ಚೀನಾ ಸುಮಾರು 80 ರಾಷ್ಟ್ರಗಳೊಂದಿಗೆ ಒಪ್ಪಂದಕ್ಕೆ ಸಹಿ ಮಾಡಿಕೊಂಡಿದೆ.
ಶಾಂಘೈ ಕೋ-ಅಪರೇಶನ್ ಆರ್ಗನೈಝೇಶನ್ನ ಸಮಿತ್ನ ಎರಡನೇ ದಿನ ಈ ಬಗ್ಗೆ ಪ್ರಕಟನೆ ಹೊರಡಿಸಲಾಗಿದ್ದು, ರಷ್ಯಾ, ಪಾಕಿಸ್ಥಾನ, ಕಝಕೀಸ್ಥಾನ, ಉಜ್ಬೇಕಿಸ್ತಾನ್, ಕಿರ್ಗಿಸ್ತಾನ್, ತಜಕೀಸ್ತಾನ ಚೀನಾದ ಬೆಲ್ಟ್ ಆಂಡ್ ರೋಡ್ ಯೋಜನೆಗೆ ಬೆಂಬಲ ನೀಡಿವೆ.
ಸಮಿತ್ನಲ್ಲಿ ಮಾತನಾಡಿದ ಮೋದಿ, ‘ಈ ಮೆಗಾ ಕನೆಕ್ಟಿವಿಟಿ ಯೋಜನೆ ಎಲ್ಲಾ ರಾಷ್ಟ್ರಗಳ ಸಾರ್ವಭೌಮತೆ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ಗೌರವಿಸಬೇಕು, ಅಂತರ್ಗತತೆಯ ಭರವಸೆ ನೀಡುವ ಯೋಜನೆಗಳಿಗೆ ಮಾತ್ರ ಭಾರತ ಸಂಪೂರ್ಣ ಸಹಕಾರ ನೀಡುತ್ತದೆ’ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.