ಮುಂಬಯಿ: ತನ್ನ ಜನಪ್ರಿಯ ಕಾರ್ಯಕ್ರಮ ‘ಸತ್ಯಮೇವ ಜಯತೆ’ಯಲ್ಲಿ ಕೇಂದ್ರ ಸರ್ಕಾರದ ಅನುಮತಿಯನ್ನು ಪಡೆಯದೆ ಭಾರತದ ಲಾಂಛನವನ್ನು ಬಳಕೆ ಮಾಡಿರುವುದಕ್ಕಾಗಿ ಬಾಲಿವುಡ್ ನಟ ಅಮೀರ್ ಖಾನ್ ಅವರಿಗೆ ನೋಟಿಸ್ ನೀಡಲಾಗಿದೆ.
ಹೋರಾಟಗಾರ ಮನೋರಂಜನ್ ರಾಯ್ ಎಂಬುವವರು ಅಮೀರ್ಗೆ ಈ ಬಗ್ಗೆ ಲೀಗಲ್ ನೋಟಿಸ್ ನೀಡಿದ್ದಾರೆ.
ಭಾರತದ ಲಾಂಛನದಲ್ಲಿ ‘ಸತ್ಯಮೇವ ಜಯತೆ’ ಎಂಬ ವಾಕ್ಯವಿದೆ, ಈ ವಾಕ್ಯವನ್ನು ಅಮೀರ್ ಖಾನ್ ಕೇಂದ್ರದ ಅನುಮತಿ ಪಡೆಯದೆ ತಮ್ಮ ಕಾರ್ಯಕ್ರಮ ಟೈಟಲ್ ಆಗಿ ಮಾಡಿಕೊಂಡಿದ್ದಾರೆ ಎಂದು ರಾಯ್ ಆರೋಪಿಸಿದ್ದಾರೆ.
ಲಾಂಛನ ಬಳಸಲು ಅನುಮತಿ ಪಡೆದಿದ್ದರೆ ಆ ಅನುಮತಿಯ ಪ್ರತಿಯನ್ನು ಬಹಿರಂಗಪಡಿಸಿ, ಇಲ್ಲವಾದರೆ ಕಾನೂನು ವಿಚಾರಣೆ ಎದುರಿಸಲು ಮುಂದಾಗಿ ಎಂದು ನೋಟಿಸ್ನಲ್ಲಿ ಸೂಚನೆ ನೀಡಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.