ದುಬೈ: ವಿಶ್ವ ಪರಿಸರ ದಿನದ ಸಂದರ್ಭದಲ್ಲಿ ಕೇರಳ ಮೂಲದ ದುಬೈನಲ್ಲಿ ರೈತರಾಗಿರುವ ವ್ಯಕ್ತಿಯೊಬ್ಬರು 5 ಸಾವಿರ ಸಸಿಗಳನ್ನು ಹಂಚುವ ಮೂಲಕ ಗಿನ್ನಿಸ್ ದಾಖಲೆಯ ಪುಟ ಸೇರಿದ್ದಾರೆ.
ವ್ಯಕ್ತಿಯೊಬ್ಬ ಇಷ್ಟೊಂದು ಸಂಖ್ಯೆಯ ಸಸಿಗಳನ್ನು ಹಂಚಿದ್ದು ವಿಶ್ವದಲ್ಲಿ ಇದೇ ಮೊದಲು ಎನ್ನಲಾಗಿದೆ.
ಶಾರ್ಜಾದಲ್ಲಿ ವಾಸಿಸುತ್ತಿರಯವ ಸುಧೀಶ್ ಗುರುವಾಯೂರು ಅವರು ಈ ಸಾಧನೆ ಮಾಡಿದ್ದು, ತಾವೇ ಸಾವಯವ ಮಾದರಿಯಲ್ಲಿ ಬೆಳಸಿದ್ದ 5 ಸಾವಿರ ಕರಿ ಬೇವಿನ ಸಸಿಗಳನ್ನು ಇವರು ಇಲ್ಲಿನ ಇಂಡಿಯನ್ ಸ್ಕೂಲ್ ವಿದ್ಯಾರ್ಥಿಗಳಿಗೆ ಮತ್ತು ಇತರ ನಾಗರಿಕರಿಗೆ ವಿತರಿಸಿದ್ದಾರೆ.
ಈ ಹಿಂದೆ ದಹಲಿಯ ಗುರುನಾನಕ್ ದರ್ಬಾರ್ ಎಂಬುವವರು 3 ಬಗೆಯ 2,083 ಸಸಿಗಳನ್ನು ವಿತರಿಸುವ ಮೂಲಕ ಗಿನ್ನಿಸ್ ದಾಖಲೆ ಮಾಡಿದ್ದರು. ಆ ದಾಖಲೆಯನ್ನು ಸುಧೀಶ್ ಮುರಿದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.