ಹುಬ್ಬಳ್ಳಿ: ಪ್ರಧಾನಿ ನರೇಂದ್ರ ಮೋದಿಯವರ ಮಹತ್ವಾಕಾಂಕ್ಷೆಯ ಉಡಾನ್ ಯೋಜನೆ ಬಡವರ ಹಾರುವ ಕನಸನ್ನು ನನಸಾಗಿಸುತ್ತಿದೆ. ಮುಗಿಲೆತ್ತರದಲ್ಲಿ ಹಾದು ಹೋಗುತ್ತಿದ್ದ ವಿಮಾನವನ್ನು ನೆಲದ ಮೇಲೆ ನಿಂತು ಕಣ್ತುಂಬಿಕೊಳ್ಳುತ್ತಿದ್ದ ಬಡ ಜೀವಗಳಿಗೆ ಇಂದು ವಿಮಾನ ಹಾರಾಟ ಬಲು ಹತ್ತಿರ ಎನಿಸಿದೆ.
2016ರ ಅಕ್ಟೋಬರ್ನಲ್ಲಿ ಕಡಿಮೆ ದರದಲ್ಲಿ ದೇಶೀಯ ವಿಮಾನ ಹಾರಾಟಕ್ಕೆ ಅವಕಾಶ ಕಲ್ಪಿಸುವ ಉಡಾನ್ ಯೋಜನೆಗೆ ನರೇಂದ್ರ ಮೋದಿ ಚಾಲನೆ ನೀಡಿದ್ದರು. ಈ ಯೋಜನೆ ವಿಮಾನ ಹಾರಾಟ ಒಂದು ಕನಸು ಎಂದುಕೊಂಡಿದ್ದವರಿಗೆ ಹಾರುವ ಅವಕಾಶವನ್ನು ಕಲ್ಪಿಸಿಕೊಟ್ಟಿದೆ.
ಹುಬ್ಬಳ್ಳಿಯ 82 ವರ್ಷದ ವೃದ್ಧೆ ಸಂಗವ್ವ ಗಡ್ಡಿ ತಮ್ಮ ಜೀವನದಲ್ಲೇ ಮೊತ್ತ ಮೊದಲ ಬಾರಿಗೆ ವಿಮಾನವೇರಿ ಮಗನೊಂದಿಗೆ ಪ್ರಯಾಣಿಸಿದ್ದಾರೆ. ಅವರ ಹಾರುವ ಕನಸನ್ನು ನನಸಾಗಿಸಿದ್ದು ಮೋದಿಯವರ ಇದೇ ಉಡಾನ್ ಯೋಜನೆ. ಈ ಬಗೆಗಿನ ತಮ್ಮ ಸಂತಸವನ್ನು ಅವರು ಸಂಸದ ಪ್ರಹ್ಲಾದ್ ಜೋಶಿಯವರ ಬಳಿ ಹಂಚಿಕೊಂಡಿದ್ದಾರೆ.
ಈ ಬಗ್ಗೆ ಟ್ವಿಟ್ ಮಾಡಿರುವ ಜೋಶಿ, ‘ಹುಬ್ಬಳ್ಳಿ ನಾಗರಿಕರ ಪರವಾಗಿ ವಿಮಾನಯಾನ ಸಚಿವ ಜಯಂತ್ ಸಿನ್ಹಾ ಅವರಿಗೆ ಧನ್ಯವಾದ ಅರ್ಪಿಸುತ್ತೇನೆ. ಪ್ರಧಾನಿ ನರೇಂದ್ರ ಮೋದಿಯವರು ನಮ್ಮ ಹುಬ್ಬಳ್ಳಿ ಸಿಟಿ ಏರ್ಪೋರ್ಟ್ ಸೇರಿದಂತೆ ದೇಶದ ನಾನಾ ಭಾಗಗಳಿಂದ ಜನರಿಗೆ ಕಡಿಮೆ ದರದಲ್ಲಿ ವಿಮಾನ ಹಾರಾಟ ನಡೆಸುವ ಅವಕಾಶ ಕಲ್ಪಿಸಿದ್ದಾರೆ’ ಎಂದಿದ್ದಾರೆ.
On behalf of citizens of this region I’m thankful to you @jayantsinha ji,@MoCA_GoI ,@narendramodi ji providing apportunity to fly with lowest fare by including my Hubballi city airport in UDAN ,@BJP4Karnataka @BSYBJP @JagadishShettar @bjparvind https://t.co/tfZ9CV2eht
— Pralhad Joshi (@JoshiPralhad) June 7, 2018
Thanks to PM @narendramodi‘s path breaking initiative UDAN, 82 yr old Sangavva Gaddi from Hubli, travels for the first time in her life by an airplane!
True ‘Hawai Chappal se Hawai Jahaz tak’ moment! pic.twitter.com/yK9jld1Oc7
— Keertivardhan Joshi (@KeertiJoshi) June 6, 2018
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.