ರಾಜೌರಿ: ಜಮ್ಮು ಕಾಶ್ಮೀರದಲ್ಲಿ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ ಸೇರಿ ‘ಪಕ್ಕಾ ಮನೆ’ಗಳನ್ನು ನಿರ್ಮಿಸಿಕೊಟ್ಟಿದೆ. ಉತ್ತಮ ಗುಣಮಟ್ಟದ ಸಾಮಾಗ್ರಿಗಳನ್ನು ಬಳಸಿ ತಯಾರಿಸಿದ ಮನೆಗಳಿಗೆ ಪುಕ್ಕಾ ಮನೆಗಳು ಎನ್ನುತ್ತಾರೆ.
ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಕಣಿವೆ ರಾಜ್ಯದಲ್ಲಿ ಬಡವರಿಗೆ ಇಂತಹ ಹಲವಾರು ಮನೆಗಳನ್ನು ನಿರ್ಮಿಸಿಕೊಡಲಾಗುತ್ತಿದೆ.
‘ಪಕ್ಕಾ ಮನೆ’ಗಳನ್ನು ಪಡೆದ ಕಣಿವೆಯ ಬಡವರು ತಮ್ಮ ಸಂತಸವನ್ನು ಹಂಚಿಕೊಂಡು ರಾಜ್ಯ ಸರ್ಕಾರ ಮತ್ತು ಕೇಂದ್ರಕ್ಕೆ ಧನ್ಯವಾದಗಳನ್ನು ತಿಳಿಸಿದ್ದಾರೆ.
‘ಆವಾಸ್ ಯೋಜನೆ ನಮಗೆ ಕೇವಲ ಇಟ್ಟಿಕೆ ಮತ್ತು ಮೋರ್ಟರ್ ವಿಷಯವಲ್ಲ, ಅದು ಗುಣಮಟ್ಟದ ಜೀವನ ಮತ್ತು ಕನಸು ಸಾಕಾರದ ವಿಷಯ’ ಎಂದು ಇತ್ತೀಚಿಗೆ ಪ್ರಧಾನಿ ಹೇಳಿದ್ದರು. 2022ರ ವೇಳೆಗೆ ಪ್ರತಿ ಭಾರತೀಯನೂ ವಸತಿ ಹೊಂದಿರಬೇಕು ಎಂಬ ಗುರಿಯ ಸಾಕಾರಕ್ಕೆ ನಮ್ಮ ಸರ್ಕಾರ ಕಾರ್ಯೋನ್ಮುಖಗೊಂಡಿರುವುದಾಗಿ ತಿಳಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.