ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ಮೊದಲ 4 ವರ್ಷದ ಆಡಳಿತದಲ್ಲಿ ಸೆನ್ಸೆಕ್ಸ್ ಶೇ.41ರಷ್ಟು ಏರಿಕೆಯನ್ನು ಕಂಡಿದ್ದು, ಹೂಡಿಕೆದಾರರು ರೂ.72ಲಕ್ಷ ಕೋಟಿಗಳೊಂದಿಗೆ ಶ್ರೀಮಂತರಾಗಿದ್ದಾರೆ.
2014ರ ಮೇ ತಿಂಗಳಲ್ಲಿ ಎನ್ಡಿಎ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಇಂಡೆಕ್ಸ್ 10,207.99 ಪಾಯಿಂಟ್ಗಳನ್ನು ಅಥವಾ ಶೇ.41.29ರಷ್ಟು ಗಳಿಕೆಯನ್ನು ಕಂಡಿದೆ. ಬಿಎಸ್ಇ ಬ್ಲೂ ಚಿಪ್ ಈ ವರ್ಷದ ಜನವರಿ 29ರಂದು 36,443.98 ಅಂಕಗಳ ಮೂಲಕ ಸಾರ್ವಕಾಲೀಕ ಏರಿಕೆ ಕಂಡಿದೆ.
ಒಟ್ಟಾರೆ ಷೇರು ಮಾರುಕಟ್ಟೆ ರೂ.75 ಲಕ್ಷ ಕೋಟಿಗಿಂತ ರೂ.147 ಲಕ್ಷ ಕೋಟಿಗೆ ಏರಿಕೆಯಾಗಿದೆ.
‘ಮೋದಿ ಆಡಳಿತದಲ್ಲಿ ಷೇರು ಮಾರುಕಟ್ಟೆ ಏರಿಳಿತಗಳನ್ನು ಕಂಡಿದೆ. ಕೆಲ ನಿಯಮಗಳ ಯೋಜನೆ ಮತ್ತು ಅನುಷ್ಠಾನದಲ್ಲಿ ಮೋದಿ ಸರ್ಕಾರ ಗಮನಾರ್ಹ ಸಾಧನೆ ಮಾಡಿದೆ’ ಎಂದು ಸ್ಟಾಕ್ ನೋಟ್ ಸಿಇಓ ಜಮೀತ್ ಮೋದಿ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.