ನವದೆಹಲಿ: ಮ್ಯಾಗಿ ವಿವಾದದ ಭಾರತದಲ್ಲಿ ಭುಗಿಲೇಳುತ್ತಿರುವ ಹಿನ್ನಲೆಯಲ್ಲಿ ಹೇಳಿಕೆ ನೀಡಿದರುವ ನೆಸ್ಲೆ ಕಂಪನಿಯ ಜಾಗತಿಕ ಸಿಇಓ ಪೌಲ್ ಬುಲ್ಕೆ, ಮ್ಯಾಗಿ ತಿನ್ನಲು ಸುರಕ್ಷಿತವಾಗಿದ ಉತ್ಪನ್ನ ಎಂದು ವಾದಿಸಿದ್ದಾರೆ.
ಕಳೆದ ಕೆಲ ದಿನಗಳಿಂದ ಸುಮಾರು 1000 ನೂಡಲ್ಸ್ ಸ್ಯಾಂಪಲ್ಗಳನ್ನು ಪರೀಕ್ಷೆಗೊಳಪಡಿಸಿದ್ದೇವೆ, ಅವೆಲ್ಲವೂ ಮ್ಯಾಗಿ ತಿನ್ನಲು ಯೋಗ್ಯವಾದ ನೂಡಲ್ಸ್ ಎಂಬುದು ಸಾಬೀತುಪಡಿಸಿವೆ ಎಂದು ಬುಲ್ಕೆ ಹೇಳಿದ್ದಾರೆ.
ಅಲ್ಲದೇ ಮ್ಯಾಗಿಯಲ್ಲಿ ಮೋನೋಸೋಡಿಯಂ ಗ್ಲುಟಮೇಟನ್ನು ಬಳಕೆ ಮಾಡಿಲ್ಲ ಎಂದಿರುವ ಅವರು, ಎಲ್ಲಾ ರಾಷ್ಟ್ರಗಳಿಗೆ ಒಂದೇ ತರನಾದ ಗುಣಮಟ್ಟ ಮತ್ತು ಸುರಕ್ಷತಾ ಪ್ರಕ್ರಿಯೆಗಳನ್ನು ಅಳವಡಿಸುತೇವೆ ಎಂದು ಹೇಳಿಕೊಂಡಿದ್ದಾರೆ.
ಮ್ಯಾಗಿ ಬಳಕೆಗೆ ಯೋಗ್ಯವಾದ ಆಹಾರ, ಹೀಗಾಗೀ 30 ವರ್ಷದಿಂದ ಜನರ ನಂಬಿಕೆಯನ್ನು ಗಳಿಸಿಕೊಂಡಿದೆ, ಇದೀಗ ಗೊಂದಲ ಉಂಟಾಗಿರುವುದರಿಂದ ಜನರ ನಂಬಿಕೆ ಕುಂಠಿತವಾಗಿದೆ, ಗ್ರಾಹಕರನ್ನು ಗಮನದಲ್ಲಿಟ್ಟುಕೊಂಡು ಸಮಸ್ಯೆಯನ್ನು ಬಗೆಹರಿಸುತ್ತೇವೆ ಎಂದು ಬುಲ್ಕೆ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.