ಶ್ರೀನಗರ: ಸೌದಿಗೆ ತೆರಳುವ ಸಲುವಾಗಿ ಶುಕ್ರವಾರ ಪಾಸ್ಪೋಟ್ ಫಾರ್ಮ್ ಭರ್ತಿ ಮಾಡಿರುವ ಕಾಶ್ಮೀರದ ಪ್ರತ್ಯೇಕವಾದಿ ನಾಯಕ ಸೈಯದ್ ಅಲಿ ಶಾ ಗಿಲಾನಿ, ತಾನು ಭಾರತೀಯ ಎಂದು ಬರೆದುಕೊಂಡಿದ್ದಾನೆ.
ಆದರೆ ಪಾಸ್ಪೋರ್ಟ್ ಕಛೇರಿಯಿಂದ ಹೊರ ಬರುತ್ತಿದ್ದಂತೆ ಹೇಳಿಕೆ ನೀಡಿರುವ ಆತ, ನಾನು ಹುಟ್ಟು ಭಾರತೀಯನಲ್ಲ ಎಂದಿದ್ದಾನೆ.
ಗಿಲಾನಿಗೆ ಭಾರತೀಯ ಪಾಸ್ಪೋರ್ಟ್ ನೀಡುವುದಕ್ಕೆ ಜಮ್ಮು ಕಾಶ್ಮೀರದ ಮೈತ್ರಿ ಸರ್ಕಾರದ ಭಾಗವಾಗಿರುವ ಬಿಜೆಪಿ ತೀವ್ರ ಆಕ್ಷೇಪವನ್ನು ವ್ಯಕ್ತಪಡಿಸಿದೆ. ಅಲ್ಲದೇ ಭಾರತ ವಿರೋಧಿ ಕೃತ್ಯಗಳಿಗೆ ಕ್ಷಮೆಯಾಚನೆ ಮಾಡಿದ ಬಳಿಕವಷ್ಟೇ ಆತನಿಗೆ ಪಾಸ್ಪೋರ್ಟ್ ನೀಡಬೇಕು ಎಂದಿದೆ.
ಸೌದಿಯಲ್ಲಿನ ಅನಾರೋಗ್ಯ ಪೀಡಿತ ಮಗಳನ್ನು ನೋಡುವ ಸಲುವಾಗಿ ಆತ ಪಾಸ್ಪೋರ್ಟ್ಗೆ ಅರ್ಜಿ ಹಾಕಿದ್ದಾನೆ. ಮಾನವೀಯತೆಯ ಆಧಾರದಲ್ಲಿ ಪಾಸ್ಪೋರ್ಟ್ ನೀಡುತ್ತೇವೆ ಎಂದಿದೆ.
ಕಾಶ್ಮೀರದಲ್ಲಿ ಪಾಕ್ ಧ್ವಜ ಹಾರಿಸುವುದನ್ನು ಸಮರ್ಥಿಸಿಕೊಳ್ಳುತ್ತಿರುವ ಗಿಲಾನಿಗೆ ಭಾರತೀಯ ಪಾಸ್ಪೋರ್ಟ್ ನೀಡುವುದು ಭಾರತೀಯರ ಆಕ್ರೋಶಕ್ಕೆ ಕಾರಣವಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.