ಬೆಂಗಳೂರು: ಮತದಾನ ಎಂಬುದು ಪ್ರಜಾಪ್ರಭುತ್ವ ವ್ಯವಸ್ಥೆ ನಮಗೆ ನೀಡಿರುವ ಅತೀದೊಡ್ಡ ಹಕ್ಕು. ಮತ ಚಲಾಯಿಸಿದಾಗ ಮಾತ್ರ ನಾವು ನಮ್ಮ ಸರ್ಕಾರವನ್ನು, ನಾಯಕರನ್ನು ಪ್ರಶ್ನಿಸುವ, ಟೀಕಿಸುವ ನೈತಿಕ ಹಕ್ಕನ್ನು ಪಡೆಯುತ್ತೇವೆ.
ಮತದಾನವನ್ನು ಉತ್ತೇಜಿಸವ ಸಲುವಾಗಿ ಬೆಂಗಳೂರಿನ ಕೆಫೆವೊಂದರಲ್ಲಿ ಮೊದಲ ಬಾರಿ ಮತದಾನ ಮಾಡಿದವರಿಗೆ ಉಚಿತ ದೋಸೆ ಮತ್ತು ಎಲ್ಲಾ ಮತದಾರರಿಗೆ ಕಾಫಿಯನ್ನು ಉಚಿತವಾಗಿ ನೀಡಲಾಗುತ್ತಿದೆ.
ನಿಸರ್ಗ ಗ್ರ್ಯಾಂಡ್ ಹೋಟೆಲ್ ಮಾಲೀಕ ಕೃಷ್ಣ ರಾಜ್ ಅವರು ಈ ಕಾರ್ಯವನ್ನು ಮಾಡುತ್ತಿದ್ದು, ಜನರನ್ನು ಮತದಾನ ಮಾಡುವಂತೆ ಪ್ರೇರೇಪಿಸುವ ಉದ್ದೇಶ ಅವರದ್ದಾಗಿದೆ.
ಮತದಾನದ ಗುರುತು ಇರುವ ಬೆರಳನ್ನು ತೋರಿಸಿ ಇಲ್ಲಿ ಉಚಿತ ದೋಸೆ ಅಥವಾ ಕಾಫಿಯನ್ನು ಪಡೆದುಕೊಳ್ಳಬಹುದು. ಬೆಂಗಳೂರಿನಲ್ಲಿ ಅತೀ ಕಡಿಮೆ ಪ್ರಮಾಣದಲ್ಲಿ ಮತದಾನವಾಗುವುದನ್ನು ಗಮನಿಸಿ ಅವರು ಈ ಆಫರ್ನ್ನು ಮತದಾರರಿಗೆ ನೀಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.