ನವದೆಹಲಿ: ಬಿಸಿಲನ ತಾಪ ಏರಿಕೆಯಾಗುತ್ತಿದೆ, ಇದರಿಂದ ಜನರು ಮಾತ್ರವಲ್ಲ ಪ್ರಾಣಿಗಳು ಕೂಡ ಸಂಕಷ್ಟಕ್ಕೆ ಸಿಲುಕಿವೆ. ಹೀಗಾಗಿ ದೇಶದಾದ್ಯಂತ ನ್ಯಾಷನಲ್ ಪಾರ್ಕ್, ಝೂಗಳಲ್ಲಿ ಹಲವಾರು ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ.
ಹಲವಾರು ನ್ಯಾಷನಲ್ ಪಾರ್ಕ್, ಝೂಗಳಲ್ಲಿ ಕೂಲರ್ ಮತ್ತು ಸ್ಪ್ರಿಂಕ್ಲರ್ಗಳನ್ನು ಅಳವಿಡಿಸಿ, ಪ್ರಾಣಿಗಳನ್ನು ತಂಪಾಗಿ ಇಡುವ ಪ್ರಯತ್ನ ಮಾಡಲಾಗುತ್ತಿದೆ. ಬೇಸಿಗೆಯ ಪ್ರತಾಪಕ್ಕೆ ಹುಲಿ, ಕರಡಿಗಳ ವರ್ತನೆ ಬದಲಾಗದಿರಲಿ ಎಂಬ ಕಾರಣಕ್ಕೆ ಅವುಗಳ ವಿಶ್ರಾಂತಿ ಸ್ಥಳಗಳನ್ನು ತಂಪಾಗಿ ಇಡಲಾಗುತ್ತಿದೆ.
ಪ್ರಾಣಿಗಳ ಆಹಾರ ಕ್ರಮವನ್ನೂ ಬದಲಾಯಿಸಲಾಗುತ್ತಿದೆ. ವೈದ್ಯರನ್ನೂ ಅಲರ್ಟ್ನಲ್ಲಿ ಇರುವಂತೆ ಸೂಚಿಸಲಾಗಿದೆ. ನೀರು ಕುಡಿಯುವ ಜಾಗ, ಮುಂತಾದ ಕಡೆ ನೆರಳು ಬರುವಂತೆ ಮಾಡಲಾಗುತ್ತಿದೆ. ಕೂಲರ್, ಖಸ್ ಖಸ್ ಕರ್ಟೇನ್ಗಳನ್ನು ಅಳವಡಿಸಲಾಗಿದೆ ಎಂದು ಭೋಪಾಲ್ ನ್ಯಾಷನಲ್ ಪಾರ್ಕ್ನ ನಿರ್ದೇಶಕರು ಹೇಳಿದ್ದಾರೆ.
ಕೆಲವೊಂದು ಕಡೆ ಪ್ರಾಣಿಗಳನ್ನು ಎರಡು ಮೂರು ಬಾರಿ ಸ್ನಾನ ಮಾಡಿಸಲಾಗುತ್ತಿದೆ. ಬಿಸಿಲನ ತಾಪ ಅವುಗಳ ಆರೋಗ್ಯ, ಮನಸ್ಸನ್ನು ಹಾಳುಗೆಡವದಂತೆ ಎಚ್ಚರಿಕೆ ವಹಿಸಲಾಗುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.