ನವದೆಹಲಿ: ಭಾರತದ ಲೆಜೆಂಡರಿ ನೃತ್ಯಗಾರ್ತಿ ಮೃನಾಲಿನಿ ಸಾರಾಭಾಯ್ ಅವರ 100ನೇ ಜನ್ಮ ಶತಮಾನೋತ್ಸವದ ಅಂಗವಾಗಿ ಗೂಗಲ್ ಡೂಡಲ್ ಗೌರವ ಸಮರ್ಪಿಸಿದೆ.
ಪದ್ಮಶ್ರೀ, ಪದ್ಮಭೂಷಣ ಪ್ರಶಸ್ತಿ ಪುರಷ್ಕೃತೆ ಸಾರಾಭಾಯ್ ಅವರು 1918ರ ಮೇ11ರಂದು ಜನಿಸಿದರು. ಭರತನಾಟ್ಯಂ, ಕಥಕ್ಕಳಿ, ಮೋಹಿನಿಯಾಟ್ಯಂನಲ್ಲಿ ಇವರು ಪರಿಣಿತೆಯಾಗಿದ್ದರು. ರವೀಂದ್ರ ನಾಥ ಠಾಗೂರರ ಶಾಂತಿ ನಿಕೇತನದಲ್ಲಿ ಶಿಕ್ಷಣ ಪಡೆದ ಇವರು, ಅನೇಕ ಕಾದಂಬರಿ, ಕವಿತೆ, ಮಕ್ಕಳಿಗಾಗಿ ಕಥೆಗಳನ್ನು ರಚಿಸಿದ್ದಾರೆ.
1948ರಲ್ಲಿ ಅಹ್ಮದಾಬಾದ್ನಲ್ಲಿ ದರ್ಪಣಾ ಅಕಾಡಮಿಯನ್ನು ಸ್ಥಾಪಿಸಿ ಕಲಾ ಶಿಕ್ಷಣ ನೀಡಿದರು, ಇಲ್ಲಿ ನೃತ್ಯ, ನಾಟಕ, ಸಂಗೀತಗಳನ್ನು ಕಲಿಸಿಕೊಡಲಾಗುತ್ತದೆ. ಸುಮಾರು 18 ಸಾವಿರ ವಿದ್ಯಾರ್ಥಿಗಳಿಗೆ ಭರತನಾಟ್ಯಂ, ಕಥಕ್ಕಳಿ ಕಲಿಸಿದ ಹೆಮ್ಮೆ ಇವರದ್ದು.
ಭಾರತದ ಬಾಹ್ಯಾಕಾಶ ಶಿಲ್ಪಿ ಎಂದೇ ಖ್ಯಾತರಾದ ವಿಜ್ಞಾನಿ ವಿಕ್ರಂ ಸಾರಾಭಾಯ್ ಅವರನ್ನು 1942ರಲ್ಲಿ ಇವರು ವಿವಾಹವಾದರು. ಇವರ ಮಕ್ಕಳಾದ ಕಾರ್ತಿಕೇಯ ಮತ್ತು ಮಲ್ಲಿಕಾ ತಾಯಿಯಂತೆ ನೃತ್ಯಪಟು, ನಾಟಕಪಟುಗಳಾಗಿ ಮೆರೆದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.