ಘಾಜಿಯಾಬಾದ್ : ಪ್ರತಿನಿತ್ಯ ದೇಶದಲ್ಲಿ ನೂರಾರು ಮಕ್ಕಳು ನಾಪತ್ತೆಯಾಗುತ್ತಾರೆ. ಅವರನ್ನು ಅಪಹರಿಸಿ ಕಳ್ಳಸಾಗಾಣೆ ಮಾಡುವ ದಂಧೆಗಳು ಕೆಲವೊಂದು ಕಡೆ ಸಕ್ರಿಯವಾಗಿವೆ. ಅದರಲ್ಲೂ 18 ವರ್ಷ ಕಡಿಮೆ ವಯಸ್ಸಿನ ಹೆಣ್ಣುಮಕ್ಕಳನ್ನು ಅಪಹರಿಸಿ ವೇಶ್ಯಾವಾಟಿಕೆಗೂ ದೂಡಲಾಗುತ್ತದೆ.
ಇಂತಹ ಪರಿಸ್ಥಿತಿಯಲ್ಲಿ ನಮ್ಮ ಕಾನೂನು ವ್ಯವಸ್ಥೆ ತುಂಬಾ ಜಾಗರೂಕವಾಗಿ ಕಾರ್ಯನಿರ್ವಹಿಸಬೇಕಿದೆ, ಮಾತ್ರವಲ್ಲ ಮಕ್ಕಳ ಪೋಷಕರು ಅತೀ ಹೆಚ್ಚು ಜಾಗೃತರಾಗಬೇಕು.
ಘಾಜಿಯಾಬಾದ್ನ ತಾಯಿಯೊಬ್ಬರು ತಮ್ಮ ಬುದ್ಧಿವಂತಿಕೆಯಿಂದಾಗಿ ತನ್ನ 12 ವರ್ಷದ ಮಗಳು ಅಪಹರಣವಾಗುವುದರಿಂದ ತಪ್ಪಿಸಿದ್ದಾರೆ. ಮಗಳಿಗೆ ಅವರು ಹೇಳಿಕೊಟ್ಟ ‘ಸೀಕ್ರೆಟ್ ಕೋಡ್’ ಆಕೆಯನ್ನು ಉಳಿಸಿದೆ.
ಹೌದು, ಬಾಲಕಿ ಅಂಗಡಿಯೊಂದರಲ್ಲಿ ತಿಂಡಿ ಖರೀದಿ ಮಾಡುತ್ತಿದ್ದ ವೇಳೆ ವ್ಯಕ್ತಿಯೊಬ್ಬ ಬಂದು ನಿನ್ನ ತಂದೆಗೆ ಅಪಘಾತವಾಗಿದೆ, ಬೇಗ ನನ್ನೊಂದಿಗೆ ಬಾ ಎಂದಿದ್ದಾನೆ. ತಕ್ಷಣವೇ ಆ ಬಾಲಕಿ ಆತನಿಗೆ ಸೀಕ್ರೆಟ್ ಕೋಡ್ ಹೇಳುವಂತೆ ಕೇಳಿದ್ದಾಳೆ. ಇದರಿಂದ ವಿಚಲಿತಗೊಂಡ ವ್ಯಕ್ತಿ ತಕ್ಷಣವೇ ಅಲ್ಲಿಂದ ಕಾಲ್ಕಿತ್ತಿದ್ದಾನೆ. ಅಸಲಿಗೆ ಆಕೆಯ ತಂದೆಗೆ ಅಪಘಾತವಾಗಿರಲಿಲ್ಲ, ಬಾಲಕಿಗೆ ಅಪಾಯ ಮಾಡುವುದೇ ಆತನ ಉದ್ದೇಶವಾಗಿತ್ತು ಎಂಬುದು ತಿಳಿದು ಬಂದಿದೆ.
ಹೌದು! ಮಕ್ಕಳಿಗೆ ಪೋಷಕರು ಸೀಕ್ರೆಟ್ ಕೋಡ್ಗಳನ್ನು ಹೇಳಿಕೊಟ್ಟಿರಬೇಕು, ತಮ್ಮ ಅನುಪಸ್ಥಿತಿಯಲ್ಲಿ ಬಂಧುಗಳು ಅಥವಾ ಅಪರಿಚಿತರು ಬಂದು ಅಪ್ಪ ಅಥವಾ ಅಮ್ಮ ಕರೆಯುತ್ತಿದ್ದಾರೆ ಬಾ ಎಂದಾಗ ಮಗು ಅವರಲ್ಲಿ ಸೀಕ್ರೆಟ್ ಕೋಡ್ ಕೇಳುವಂತಿರಬೇಕು, ಇದರಿಂದ ಮಗು ಸುರಕ್ಷಿತವಾಗಿರುತ್ತದೆ. ಸಮಾಜಿಕ ಜಾಗೃತಿ ಮನೆಯಿಂದಲೇ ಆರಂಭಗೊಳ್ಳಬೇಕು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.