ಬೆಂಗಳೂರು: ಕರ್ನಾಟಕದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯಲು ಶತ ಪ್ರಯತ್ನ ನಡೆಸುತ್ತಿರುವ ಬಿಜೆಪಿ, ಶುಕ್ರವಾರ ತನ್ನ ಬಹುನಿರೀಕ್ಷಿತ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆಗೊಳಿಸಿದೆ.
ರಾಷ್ಟ್ರೀಕೃತ ಬ್ಯಾಂಕುಗಳಲ್ಲಿನ ರೈತರ ಒಂದೂವರೆ ಲಕ್ಷದವರೆಗಿನ ಸಾಲವನ್ನು ಮನ್ನಾ ಮಾಡಲಾಗುವುದು, ಬಿಪಿಎಲ್ ಮಹಿಳೆಯರಿಗೆ ಸ್ಮಾರ್ಟ್ ಫೋನ್, ಗೋ ಹತ್ಯೆ ನಿಷೇಧ ಕಾಯ್ದೆ ಜಾರಿ, ಗೋಸೇವಾ ಆಯೋಗ ಪುನರಾರಂಭ, ರೂ.75 ಸಾವಿರದಿಂದ ರೂ.1 ಲಕ್ಷದವರೆಗೆ ರೇಷ್ಮೆ ಸಬ್ಸಿಡಿ ಮುಂತಾದ ಮಹತ್ತರ ಅಂಶಗಳನ್ನು ಪ್ರಣಾಳಿಕೆಯಲ್ಲಿ ಸೇರಿಸಲಾಗಿದೆ.
ರಾಜ್ಯ ಬಿಜೆಪಿ ಅಧ್ಯಕ್ಷ ಯಡಿಯೂರಪ್ಪ, ನಾಯಕರಾದ ಜಗದೀಶ್ ಶೆಟ್ಟರ್, ಬಿಜೆಪಿ ರಾಜ್ಯ ಉಸ್ತುವಾರಿ ಪ್ರಕಾಶ್ ಜಾವ್ಡೇಕರ್, ಮುರಳೀಧರ್ ರಾವ್ ಸೇರಿದಂತೆ ಅನೇಕ ಗಣ್ಯರು ಪ್ರಣಾಳಿಕೆ ಬಿಡುಗಡೆಯ ವೇಳೆ ಉಪಸ್ಥಿತರಿದ್ದರು.
ಪ್ರಣಾಳಿಕೆಯ ಮುಖ್ಯಾಂಶಗಳು :
ರೈತರ ಕಲ್ಯಾಣ ರಾಜ್ಯದ ಕಲ್ಯಾಣ
- ನಮ್ಮ ಸರಕಾರದ ಮೊದಲ ಸಚಿವ ಸಂಪುಟ ಸಭೆಯಲ್ಲಿಯೇ ರಾಷ್ಟ್ರೀಕೃತ ಬ್ಯಾಂಕು ಮತ್ತು ಸಹಕಾರಿ ಸಂಘಗಳಲ್ಲಿ ಇರುವ ರೂ. 1 ಲಕ್ಷದವರೆಗೆ ರೈತರ ಬೆಳೆ ಸಾಲ ಮನ್ನಾ ಮಾಡಲಾಗುವುದು.
- 20 ಲಕ್ಷ ಸಣ್ಣ ಮತ್ತು ಅತಿ ಸಣ್ಣ ಒಣ ಭೂಮಿ ರೈತರಿಗೆ ತಲಾ 10,000 ಆರ್ಥಿಕ ನೆರವು ನೀಡಲಿದೆ ನೇಗಿಲ ಯೋಗಿ ಯೋಜನೆ.
- ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರೈತರಿಗೆ, ಬೆಳೆಯ ಒಂದೂವರೆ ಪಟ್ಟು ಆದಾಯ ನೀಡಲಾಗುವುದು.
- ಬೆಲೆ ವ್ಯತ್ಯಯದ ಸಂದರ್ಭದಲ್ಲಿ ರೈತರ ಬೆಂಬಲಕ್ಕಾಗಿ ರೂ. 5,೦೦೦ ಕೋಟಿ ರೈತ ಬಂಧು ಆವರ್ತ ನಿಧಿ.
- ರೈತ ಸ್ನೇಹಿ ಯೋಜನೆಗಳ ಅನುಷ್ಠಾನದ ಸೂಕ್ತ ಮೇಲ್ವಿಚಾರಣೆಗಾಗಿ ಮುಖ್ಯಮಂತ್ರಿ ಕಚೇರಿಯಡಿ ರೈತಬಂಧು ವಿಭಾಗ.
- ಭೂರಹಿತ ಕೃಷಿ ಕಾರ್ಮಿಕರಿಗೆ ಮುಖ್ಯಮಂತ್ರಿ ರೈತ ಸುರಕ್ಷಾ ವಿಮೆ ಯೋಜನೆ ಉಚಿತ ರೂ. 2 ಲಕ್ಷದಷ್ಟು ಅಪಘಾತ ವಿಮೆ.
- ರಾಜ್ಯದಲ್ಲಿ ಎಲ್ಲಾ ನೀರಾವರಿ ಯೋಜನೆಗಳನ್ನು 2023 ರ ಒಳಗೆ ಪೂರ್ಣಗೊಳಿಸಲು ರೂ. 1.5 ಲಕ್ಷ ಕೋಟಿಯ ಸುಜಲಾಂ ಸುಫಲಾಂ ಕರ್ನಾಟಕ.
- ರಾಜ್ಯದಲ್ಲಿರುವ ಎಲ್ಲಾ ಕೆರೆಗಳ ಪುನಶ್ಚೇತನಕ್ಕಾಗಿ ಮಿಶನ್ ಕಲ್ಯಾಣಿ ಯೋಜನೆ.
- ರೈತರ ಪಂಪ್ಸೆಟ್ಗೆ ಪ್ರತಿ ದಿನ 10 ಗಂಟೆಗಳ ಕಾಲ ತ್ರೀ ಫೇಸ್ ವಿದ್ಯುತ್ ಪೂರೈಕೆ.
- ಕೃಷಿ ಸಂಬಂಧಿತ ತರಬೇತಿ ಪಡೆಯುವ ರೈತರ ಮಕ್ಕಳಿಗಾಗಿ ರೂ. 100 ಕೋಟಿ ಮೊತ್ತದ ರೈತಬಂಧು ವಿದ್ಯಾರ್ಥಿ ವೇತನ.
- ಮುಖ್ಯಮಂತ್ರಿಗಳ ಕೃಷಿ ಫೆಲೊಶಿಪ್ ಅಡಿ ಕೃಷಿಯ ಅತ್ಯುತ್ತಮ ಪದ್ಧತಿ ಅರಿಯಲು ಪ್ರತಿ ವರ್ಷ 1,000 ರೈತರು ಇಸ್ರೇಲ್ ಮತ್ತು ಚೀನಾ ಭೇಟಿಗೆ ವ್ಯವಸ್ಥೆ.
- ಭತ್ತ, ಕಬ್ಬು, ತೆಂಗು, ಅಡಿಕೆ, ಕಾಫಿ ಸೇರಿದಂತೆ ರಾಜ್ಯದಲ್ಲಿ ವ್ಯಾಪಕವಾಗಿ ಬೆಳೆಯುವ ಎಲ್ಲಾ ಬೆಳೆಗಳಿಗೆ ನಿರ್ದಿಷ್ಟ ಕಾರ್ಯತಂತ್ರ ರಚಿಸಲಾಗುವುದು
- ಕೆಎಂಎಫ್ ಮೂಲಕ ಹಣ್ಣು ಮತ್ತು ತರಕಾರಿಗಳ ರಫ್ತಿನ ಉತ್ತೇಜನಕ್ಕಾಗಿ ರೂ. 3,೦೦೦ ಕೋಟಿ ನಿಧಿ.
- ಪಶು ಸಂಗೋಪನೆ, ಹೈನುಗಾರಿಕೆಗೆ ಬೇಕಾಗುವ ಮೂಲಸೌಕರ್ಯ ಅಭಿವೃದ್ಧಿಗೆ ರೂ. 3,೦೦೦ ಕೋಟಿಯ ಕಾಮಧೇನು ಅನುದಾನ.
- ಗ್ರಾಮೀಣ ಪ್ರದೇಶಗಳಲ್ಲಿ ದನಕರುಗಳು ಮತ್ತು ಇತರ ಪ್ರಾಣಿಗಳಿಗೆ ಕರ್ನಾಟಕ ಹಾಲು ಒಕ್ಕೂಟದ ಮೂಲಕ ಪಶುವೈದ್ಯಕೀಯ ಸೇವೆ ಒದಗಿಸಲು ರೂ. 1,೦೦೦ ಕೋಟಿ ಮೀಸಲಿಡಲಾಗುವುದು.
- ಕರ್ನಾಟಕ ಗೋಹತ್ಯೆ ನಿಷೇಧ ಮತ್ತು ಸಂರಕ್ಷಣಾ ಕಾಯಿದೆ 2012 ಕ್ಕೆ ಮರು ಚಾಲನೆ.
- ಶ್ರೀ ಬಿ ಎಸ್ ಯಡಿಯೂರಪ್ಪ ಪ್ರಾರಂಭಿಸಿದ್ದ ಗೋ ಸೇವಾ ಆಯೋಗ ಪುನರಾರಂಭ.
- ಹಾಲು ಉತ್ಪಾದನೆಯನ್ನು ಪ್ರಸ್ತುತ 77 ಲಕ್ಷ ಲೀಟರ್ಗಳಿಂದ 1 ಕೋಟಿ ಲೀಟರ್ಗೆ ಏರಿಕೆ.
- ರೇಷ್ಮೆ ಬೆಳೆಗೆ 1,೦೦೦ ಚದರ ಅಡಿ ಯೂನಿಟ್ಗೆ ರೂ. 75,೦೦೦ ದಿಂದ ರೂ. 3 ಲಕ್ಷಕ್ಕೆ ಸಬ್ಸಿಡಿ ದರ ಏರಿಸಲಾಗುವುದು ಹಾಗೂ ಕೆಳಗಿನ ಯೂನಿಟ್ಗೆ ಅನುಗುಣವಾಗಿ ಸಬ್ಸಿಡಿ ದರ ಏರಿಕೆ.
ಮಹಿಳಾ ಸಬಲೀಕರಣ
- ಮಹಿಳೆಯರೇ ನಡೆಸುವ ಅತಿದೊಡ್ಡ ಸಹಕಾರಿ ಸಂಸ್ಥೆ ಸ್ಥಾಪಿಸಿ ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಲ್ಲಿ ಅದರ ಉತ್ಪನ್ನಗಳನ್ನು ಮಾರಾಟ ಮಾಡುವ
- ಮಳಿಗೆಗಳ ನಿರ್ಮಾಣಕ್ಕೆ ರೂ. 1೦,೦೦೦ ಕೋಟಿ. ಇದಕ್ಕಾಗಿ ಸ್ತ್ರೀ ಉನ್ನತಿ ನಿಧಿ.
- ಸ್ತ್ರೀಶಕ್ತಿ ಮತ್ತು ಸ್ವಸಹಾಯ ಸಂಘಗಳ ಮಹಿಳೆಯರಿಗೆ ಶೇಕಡಾ 1 ರ ಬಡ್ಡಿದರದಲ್ಲಿ ರೂ. 2 ಲಕ್ಷದ ವರೆಗೆ ಸಾಲ.
- ರೂ. 1೦೦ ಕೋಟಿಯ ಕರ್ನಾಟಕ ಮಹಿಳಾ ಎಂಟರ್ಪ್ರೈಸಸ್ ಕ್ಲಸ್ಟರ್ ಪ್ರೋಗ್ರಾಮ್ ಸ್ಥಾಪನೆ ಮತ್ತು ಅದರ ಅಡಿಯಲ್ಲಿ ಮಹಿಳೆಯರಿಂದ ನಡೆಸಲ್ಪಡುವ ವ್ಯಾಪಾರ ಬೆಂಬಲಕ್ಕೆ 30 ಹೊಸ MSME ಮಿನಿ ಕ್ಲಸ್ಟರ್ಗಳ ಸ್ಥಾಪನೆ.
- ಹೈನುಗಾರಿಕಾ ಕ್ಷೇತ್ರದಲ್ಲಿ ಮಹಿಳೆಯರ ಪ್ರೋತ್ಸಾಹಕ್ಕಾಗಿ ರೂ. 1೦೦ ಕೋಟಿ ನಿಧಿ ಮೀಸಲಿಡಲಾಗುವುದು.
- ಮುಖ್ಯಮಂತ್ರಿ ಸ್ಮಾರ್ಟ್ಫೋನ್ ಯೋಜನೆ ಅಡಿ ಬಿಪಿಎಲ್ ಕುಟುಂಬದ ಮಹಿಳೆಯರಿಗೆ ಉಚಿತ ಸ್ಮಾರ್ಟ್ಫೋನ್.
- ಸ್ತ್ರೀ ಸುವಿಧಾ ಯೋಜನೆಯಡಿ ಬಿಪಿಎಲ್ ಕುಟುಂಬದ ಮಹಿಳೆಯರು, ವಿದ್ಯಾರ್ಥಿನಿಯರಿಗೆ ಉಚಿತ ನ್ಯಾಪ್ಕಿನ್, ಉಳಿದ ಮಹಿಳೆಯರಿಗೆ ರೂ. 1 ಕ್ಕೆ ಸ್ಯಾನಿಟರಿ ನ್ಯಾಪ್ಕಿನ್ ನೀಡಲಾಗುವುದು.
- ಭಾಗ್ಯಲಕ್ಷ್ಮೀ ಯೋಜನೆಯಡಿ ಹೆಣ್ಣುಮಕ್ಕಳಿಗೆ ನೀಡುವ ಮೊತ್ತ ರೂ. 2 ಲಕ್ಷಕ್ಕೆ ಹೆಚ್ಚಳ.
- ವಿವಾಹ ಮಂಗಳ ಯೋಜನೆ ಅಡಿ ಬಿಪಿಎಲ್ ಕುಟುಂಬದ ಯುವತಿಯರ ಮದುವೆಗೆ ರೂ. 25,೦೦೦ ಮತ್ತು 3 ಗ್ರಾಂ ಚಿನ್ನದ ತಾಳಿ.
- ಮಹಿಳೆಯರ ಮೇಲಿನ ಇತ್ಯರ್ಥಗೊಳ್ಳದ ದೌರ್ಜನ್ಯ ಪ್ರಕರಣಗಳ ತನಿಖೆಗೆ ಮಹಿಳಾ ಪೊಲೀಸ್ ಅಧಿಕಾರಿಯ ನೇತೃತ್ವದಲ್ಲಿ 1,೦೦೦ ಮಹಿಳಾ ಪೊಲೀಸ್ ಸಿಬ್ಬಂದಿ ಇರುವ ವಿಶೇಷ ತನಿಖಾ ತಂಡ ರಚನೆ.
ಉಜ್ವಲ ಭವಿಷ್ಯದೆಡೆಗೆ ಕರ್ನಾಟಕದ ಯುವಜನತೆ
- ಕೌಶಲ್ಯಾಭಿವೃದ್ಧಿ, ಸ್ವಯಂ ಉದ್ಯೋಗ, ಉದ್ಯೋಗ ಸೃಷ್ಟಿ ಮೂಲಕ ಪ್ರತಿಯೊಬ್ಬರಿಗೂ ಉತ್ತಮ ಉದ್ಯೋಗಾವಕಾಶ.
- ರಾಜ್ಯದಲ್ಲಿ 60 ‘ನಮ್ಮ ಬಿಪಿಓ ಸಂಕೀರ್ಣ ಸ್ಥಾಪನೆ. ಬಿಪಿಓ ಉದ್ದಿಮೆ ಸ್ಥಾಪಿಸಿ ಉದ್ಯೋಗಾವಕಾಶ ಸೃಷ್ಟಿಸಲು ಸ್ಥಳೀಯ ಉದ್ಯಮಿಗಳಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡಲು ರೂ. 250 ಕೋಟಿ.
- ಮುಖ್ಯಮಂತ್ರಿ ಲ್ಯಾಪ್ಟಾಪ್ ಯೋಜನೆಯಡಿ ಕಾಲೇಜಿಗೆ ಸೇರುವ ಪ್ರತಿ ವಿದ್ಯಾರ್ಥಿಗೆ ಉಚಿತ ಲ್ಯಾಪ್ ಟಾಪ್.
- ಹುಬ್ಬಳ್ಳಿ, ಬೆಂಗಳೂರು, ರಾಯಚೂರು, ಕಲಬುರಗಿ, ಮೈಸೂರು, ಮಂಗಳೂರಿನಲ್ಲಿ ಸ್ಟಾರ್ಟ್ಅಪ್ ಕಂಪನಿಗಳಿಗೆ ಸ್ಥಳಾವಕಾಶ ಇನ್ನಿತರ ಸೌಲಭ್ಯಗಳಿರುವ 6 ಕೆ-ಹಬ್ಗಳ ಸ್ಥಾಪನೆ.
- ಸರ್ಕಾರಿ ಶಾಲೆ ಹಾಗೂ ಕಾಲೇಜುಗಳಲ್ಲಿ ಕ್ರೀಡಾ ಸೌಕರ್ಯಗಳನ್ನು ಮೇಲ್ದರ್ಜೆಗೇರಿಸಲು ರೂ. 1೦೦ ಕೋಟಿ ನಿಧಿ.
- ಪ್ರತಿ ತಾಲೂಕಿನಲ್ಲಿ ಅಥ್ಲೆಟಿಕ್ ಟ್ರ್ಯಾಕ್, ಈಜುಕೊಳ, ಒಳಾಂಗಣ ಕ್ರೀಡಾಂಗಣದಂಥ ಸೌಲಭ್ಯಗಳಿರುವ ಯುವ ಸಮುದಾಯ ಕೇಂದ್ರಗಳ ಅಭಿವೃದ್ಧಿ.
ಎಲ್ಲರ ಜೊತೆಗೆ ಎಲ್ಲರ ವಿಕಾಸ
- ಎಲ್ಲರಿಗೂ ಆಹಾರ ಒದಗಿಸುವ ಅನ್ನದಾಸೋಹ ಯೋಜನೆ. ಬಿಪಿಎಲ್ ಕಾರ್ಡುದಾರರಿಗೆ ಆಯಾ ಪ್ರದೇಶಕ್ಕೆ ತಕ್ಕಂತೆ ಆಹಾರ ಧಾನ್ಯ ವಿತರಣೆ ಮತ್ತು ಎಪಿಎಲ್ ಕಾರ್ಡುದಾರರಿಗೆ ಕಡಿಮೆ ದರದಲ್ಲಿ ಆಹಾರ ಧಾನ್ಯ ವಿತರಣೆ.
- ಕೈಗೆಟುಕುವ ಬೆಲೆಯಲ್ಲಿ ಉತ್ತಮ ಗುಣಮಟ್ಟದ ಆಹಾರ ಒದಗಿಸಲು 30 ೦ಕ್ಕಿಂತಲೂ ಹೆಚ್ಚು ಮುಖ್ಯಮಂತ್ರಿ ಅನ್ನಪೂರ್ಣ ಕ್ಯಾಂಟೀನ್ಗಳ (ಜಿಲ್ಲಾ ಕೇಂದ್ರಗಳಲ್ಲಿ 3 ಮತ್ತು ಪ್ರತಿ ತಾಲೂಕು ಕೇಂದ್ರದಲ್ಲಿ 1) ಸ್ಥಾಪನೆ.
- ಅಸ್ತಿತ್ವದಲ್ಲಿರುವ ಎಲ್ಲಾ ಎಸ್ಟಿ ವಿದ್ಯಾರ್ಥಿ ವೇತನ ಹೆಚ್ಚಿಸಲು, 400 ಎಸ್ಟಿ ವಿದ್ಯಾರ್ಥಿಗಳು ವಿದೇಶದಲ್ಲಿ ಉನ್ನತ ಶಿಕ್ಷಣ ಪಡೆಯುವಂತಾಗಲು ಮತ್ತು ರಾಷ್ಟ್ರೀಯ ಖ್ಯಾತಿಯ ಸಂಸ್ಥೆಗಳಲ್ಲಿ ಸೇರ್ಪಡೆಯಾದ ಎಸ್ಟಿ ವಿದ್ಯಾರ್ಥಿಗಳ ಶುಲ್ಕ ಪಾವತಿಗೆ ರೂ. 1,500 ಕೋಟಿ ಮೊತ್ತದ ಮಹರ್ಷಿ ವಾಲ್ಮಿಕಿ ವಿದ್ಯಾರ್ಥಿವೇತನ ಯೋಜನೆ.
- ಪ್ರಸ್ತುತ ಇರುವ ಎಲ್ಲಾ ಎಸ್ಸಿ ವಿದ್ಯಾರ್ಥಿಗಳ ವಿದ್ಯಾರ್ಥಿವೇತನ ಹೆಚ್ಚಿಸಲು, 6೦೦ ಎಸ್ಸಿ ವಿದ್ಯಾರ್ಥಿಗಳು ವಿದೇಶದಲ್ಲಿ ಉನ್ನತ ಶಿಕ್ಷಣ ಪಡೆಯಲು ಸಹಕಾರಿಯಾಗಲು ರೂ. 3,೦೦೦ ಕೋಟಿ ಮೊತ್ತದ ಬಾಬು ಜಗಜೀವನ ರಾಮ್ ವಿದ್ಯಾರ್ಥಿವೇತನ ಯೋಜನೆ.
- 8ನೇ ತರಗತಿಯಲ್ಲಿ ಉತ್ತೀರ್ಣರಾದ ಎಸ್ಸಿ ಮತ್ತು ಎಸ್ಟಿ ವಿದ್ಯಾರ್ಥಿಗಳಿಗೆ ರೂ. 5೦೦, 9 ನೇ ತರಗತಿಯಲ್ಲಿ ಉತ್ತೀರ್ಣರಾದವರಿಗೆ ರೂ. 750, 10ನೇ ತರಗತಿಯಲ್ಲಿ ಉತ್ತೀರ್ಣರಾದವರಿಗೆ ರೂ. 1,೦೦೦ ಒಂದು ಬಾರಿಯ ನಗದು ಬಹುಮಾನ.
- ಮದಕರಿ ನಾಯಕ ವಸತಿ ಯೋಜನೆಯಡಿ ಎಸ್ಟಿ ಸಮುದಾಯಗಳಿಗೆ ವಸತಿ ನಿರ್ಮಿಸಲು ರೂ. 6,500 ಕೋಟಿ ಮೀಸಲು.
- ರೂ. 8,500 ಕೋಟಿ ಮೊತ್ತದ ಮಾದಾರ ಚೆನ್ನಯ್ಯ ವಸತಿ ಯೋಜನೆಯಡಿ ಎಸ್ಸಿ ಸಮುದಾಯಗಳಿಗೆ ಆಧುನಿಕ ಮನೆಗಳ ನಿರ್ಮಾಣ.
- ಡಾ. ಭೀಮರಾವ್ ರಾಮ್ ಜೀ ಅಂಬೇಡ್ಕರ್ ಅವರ ಬದುಕಿನ ಜತೆ ಸಂಬಂಧ ಹೊಂದಿರುವ ಸ್ಥಳಗಳಾದ ಮೌವ್, ನಾಗಪುರ, 26 ಆಲಿಪುರ ರಸ್ತೆ (ದೆಹಲಿ), ದಾದರ್ ಮತ್ತು ಲಂಡನ್ ಮುಂತಾದೆಡೆ ಭೇಟಿ ನೀಡಲು ಡಾ. ಭೀಮರಾವ್ ರಾಮ್ ಜೀ ಅಂಬೇಡ್ಕರ್ ತೀರ್ಥಸ್ಥಳ ಯಾತ್ರೆ ನಿಧಿಗೆ ಹಣ ಮೀಸಲಿಡಲಾಗುವುದು.
- ಸಾಂಪ್ರದಾಯಿಕ ಕಸುಬುಗಳನ್ನು ಲಾಭದಾಯಕವನ್ನಾಗಿಸಲು ಮತ್ತು ಸಾಂಪ್ರದಾಯಿಕ ಕಸುಬು ನಡೆಸುವವರ ಕಲ್ಯಾಣಕ್ಕಾಗಿ ಒಬಿಸಿ ನಿಧಿಯಡಿ ರೂ. 1,೦೦೦ ಕೋಟಿ ಹಣ.
- ಒಬಿಸಿಗಳಿಗೆ ಆಧುನಿಕ ಸೌಲಭ್ಯ ಹೊಂದಿರುವ ವಸತಿ ಸಂಕೀರ್ಣಗಳನ್ನು ನಿರ್ಮಿಸಲು ರೂ. 75೦೦ ಕೋಟಿ ಮೊತ್ತ ನಿಗದಿ.
- ನಮ್ಮ ಸರಕಾರ ರಚನೆಯಾದ 3 ತಿಂಗಳೊಳಗೆ ನೇಕಾರರ ರೂ. 1 ಲಕ್ಷದವರೆಗೆ ಸಾಲ ಮನ್ನಾ ಮಾಡಲಾಗುವುದು.
- ತಿಗಳ, ಸವಿತಾ ಸಮಾಜ, ಈಡಿಗ, ಬಿಲ್ಲವ ಹಾಗೂ ಯಾದವ ಸಮುದಾಯಗಳ ಕಲ್ಯಾಣಕ್ಕಾಗಿ ಕಲ್ಯಾಣ ಮಂಡಳಿ/ಅಭಿವೃದ್ಧಿ ನಿಗಮ ಸ್ಥಾಪನೆ.
- ಪ್ರತಿ ವರ್ಷ ಅಮರಶಿಲ್ಪಿ ಜಕಣಾಚಾರಿ ಜಯಂತಿ.
ದಕ್ಷ ಆಡಳಿತ – ಸುರಕ್ಷಿತ ಕರ್ನಾಟಕ
- ಕರ್ನಾಟಕ ಜ್ಞಾನ ಆಯೋಗ ಮತ್ತು ರಾಜ್ಯ ಯೋಜನಾ ಮಂಡಳಿ ಬದಲಿಸಿ ಕೀರ್ತಿ(KIRTI) ಆಯೋಗದ ಸ್ಥಾಪನೆ ಮಾಡಲಾಗುವುದು.
- ಕಾಂಗ್ರೆಸ್ ಸರ್ಕಾರ ದುರ್ಬಲಗೊಳಿಸಿದ್ದ ಸಕಾಲ ಕಾಯಿದೆಯನ್ನು ಬಲಪಡಿಸಿ ಸಕಾಲ ಕಾಯಿದೆಯ ವ್ಯಾಪ್ತಿಯನ್ನು ಎಲ್ಲಾ ಸರಕಾರಿ ಸೇವೆಗಳಿಗೆ ವಿಸ್ತರಿಸಲಾಗುವುದು.
- ಮೂಲಸೌಕರ್ಯ ಯೋಜನೆಗಳ ತ್ವರಿತ ಅನುಷ್ಠಾನಕ್ಕಾಗಿ ಮುಖ್ಯಮಂತ್ರಿ ಕಚೇರಿಯ ಅಡಿಯಲ್ಲಿ ನವ ಕರ್ನಾಟಕ ನಿರ್ಮಾಣ ಟಾಸ್ಕ್ ಫೋರ್ಸ್ ರಚಿಸಲಾಗುವುದು.
- ಸಿ ಮತ್ತು ಡಿ ವರ್ಗದ ನೌಕರರ ನೇಮಕಾತಿ ಪ್ರಕ್ರಿಯೆಯಲ್ಲಿ ಸಂದರ್ಶನ ರದ್ದುಗೊಳಿಸಲಾಗುವುದು.
- ಸರಕಾರ ಅಸ್ತಿತ್ವಕ್ಕೆ ಬಂದ ೧೦೦ ದಿನಗಳ ಒಳಗಾಗಿ ಕಾಂಗ್ರೆಸ್ ಸರ್ಕಾರದ ಆರ್ಥಿಕ ನಿರ್ವಹಣೆ ಕುರಿತ ಶ್ವೇತ ಪತ್ರವನ್ನು ಬಿಡುಗಡೆ ಮಾಡಲಾಗುವುದು.
- ನಮ್ಮ ಮೊದಲ ಸಂಪುಟ ಸಭೆಯಲ್ಲಿ ಲೋಕಾಯುಕ್ತವನ್ನು ಅದರ ಸಂಪೂರ್ಣ ಅಧಿಕಾರದೊಂದಿಗೆ ಮರುಸ್ಥಾಪನೆಗೊಳಿಸಲಾಗುವುದು.
- ಭ್ರಷ್ಟಾಚಾರದ ವಿರುದ್ಧ ದೂರು ನೀಡಲು ನಾಗರಿಕರಿಗೆ ಸಹಾಯವಾಗುವಂತೆ ನೇರವಾಗಿ ಮುಖ್ಯಮಂತ್ರಿ ಕಚೇರಿ ಅಡಿಯಲ್ಲಿ 24×7 ಭ್ರಷ್ಟಾಚಾರ ವಿರೋಧಿ ಸಹಾಯವಾಣಿ 7 ಪ್ರಾರಂಭಿಸಲಾಗುವುದು.
ಶಿಕ್ಷಣ ಕ್ಷೇತ್ರಕ್ಕೆ ನವ ಚೈತನ್ಯ
- ಕರ್ನಾಟಕ ಶಾಲಾ-ಕಾಲೇಜು ಶುಲ್ಕನಿಯಂತ್ರಣ ಪ್ರಾಧಿಕಾರದ ಸ್ಥಾಪನೆ.
- ರೂ. 1,3೦೦ ಕೋಟಿ ಅನುದಾನದಲ್ಲಿ ಅಗತ್ಯವಿರುವ ತಾಲೂಕು ಕೇಂದ್ರಗಳಲ್ಲಿ ಹೊಸ ಪದವಿ ಪೂರ್ವ ಕಾಲೇಜುಗಳ ಸ್ಥಾಪನೆ
- ರೂ. 3,೦೦೦ ಕೋಟಿಯ ರಾಷ್ಟ್ರಕವಿ ಕುವೆಂಪು ಜ್ಞಾನ ಯೋಜನೆಯಡಿ 70 ಹೊಸ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ನಿರ್ಮಾಣ ಮತ್ತು ಆಸ್ತಿತ್ವದಲ್ಲಿರುವ ಕಾಲೇಜುಗಳು ಮೇಲ್ದರ್ಜೆಗೆ.
- ವೃತ್ತಿಪರ ಕೋರ್ಸುಗಳನ್ನು ಹೊರತುಪಡಿಸಿ ಪದವಿ ಮಟ್ಟದವರೆಗೆ ಎಲ್ಲ ವಿದ್ಯಾರ್ಥಿ- ವಿದ್ಯಾರ್ಥಿನಿಯರಿಗೆ ಸರ್ಕಾರಿ ಕಾಲೇಜುಗಳಲ್ಲಿ ಉಚಿತ ಶಿಕ್ಷಣ.
ಬಡ ಮತ್ತು ಹಿಂದುಳಿದ ವಿದ್ಯಾರ್ಥಿಗಳ ಅನುಕೂಲಕ್ಕೆ ಅತ್ಯಾಧುನಿಕ ಸೌಲಭ್ಯವಿರುವ 750 ವಸತಿ ನಿಲಯಗಳ ಸ್ಥಾಪನೆ. - ಜೆಇಇ, ಕ್ಯಾಟ್, ಕೆಪಿಎಸ್ಸಿ ಮತ್ತು ಯುಪಿಎಸ್ಸಿ ಯಂತಹ ಪ್ರವೇಶ ಪರೀಕ್ಷೆ ಬರೆಯುವ ಎಸ್ಸಿ / ಎಸ್ಟಿ / ಒಬಿಸಿ / ಬಿಪಿಎಲ್ ವಿದ್ಯಾರ್ಥಿಗಳಿಗೆ ವಿಶೇಷ ತರಬೇತಿ ಕೇಂದ್ರಗಳ ಸ್ಥಾಪನೆ.
- ಉನ್ನತ ಶಿಕ್ಷಣ ಪಡೆಯುವ ಬಿಪಿಎಲ್ ವಿದ್ಯಾರ್ಥಿಗಳಿಗೆ ಬಡ್ಡಿ ರಹಿತ ಸಾಲ. ಪದವಿ ವಿದ್ಯಾರ್ಥಿಗಳಿಗೆ ರೂ. 3 ಲಕ್ಷ ಮತ್ತು ಉನ್ನತ ಶಿಕ್ಷಣ ವಿದ್ಯಾರ್ಥಿಗಳಿಗೆ ರೂ. 5 ಲಕ್ಷದವರೆಗೂ ಸಾಲ.
ಜನರ ಆರೋಗ್ಯ ನಮ್ಮ ಆದ್ಯತೆ
- ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಏಮ್ಸ್ ಮಾದರಿಯಲ್ಲಿ 2 ಕರ್ನಾಟಕ ರಾಜ್ಯ ವೈದ್ಯಕೀಯ ವಿಜ್ಞಾನ ಸಂಸ್ಥೆಗಳ ಸ್ಥಾಪನೆ.
- ರಾಜ್ಯದಲ್ಲಿರುವ ಎಲ್ಲಾ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ (CHCs) ಜನೌಷಧಿ ಸ್ಟೋರ್ಗಳ ಸ್ಥಾಪನೆ.
- ಎಲ್ಲಾ ಬಡ ಮತ್ತು ದುರ್ಬಲ ವರ್ಗದವರ ಚಿಕಿತ್ಸೆಗಾಗಿ ರೂ. 5 ಲಕ್ಷ ವಿಮೆ ಒದಗಿಸಲು ಆಯುಷ್ಮಾನ್ ಕರ್ನಾಟಕ ಯೋಜನೆ ಜಾರಿ.
- 108 – ತುರ್ತು ವಾಹನ ಸೇವೆಯಡಿ ಇನ್ನಷ್ಟು ಅಂಬುಲೆನ್ಸ್ಗಳ ಒದಗಿಸಿ ಅತಿ ಶೀಘ್ರವಾಗಿ ರೋಗಿಗಳನ್ನು ತಲುಪುವಂತೆ ಮಾಡಲಾಗುವುದು.
- ಎಲ್ಲ ತಾಲೂಕು ಆಸ್ಪತ್ರೆಗಳಲ್ಲಿ ಆಯುಶ್ ಆರೋಗ್ಯ ಕೇಂದ್ರ.
- ಎಲ್ಲಾ ಸಾರ್ವಜನಿಕ ಆರೋಗ್ಯ ಕೇಂದ್ರಗಳಲ್ಲಿ ಮಕ್ಕಳಿಗೆ ಸೀತಾಳ ಸಿಡುಬು, ಹೆಪಟೈಟಿಸ್ ಎ, ನ್ಯುಮೋನಿಯಾಗೆ ಉಚಿತ ಲಸಿಕೆ.
- ರಾಜ್ಯದ ಪ್ರತಿ ಜಿಲ್ಲೆಯಲ್ಲಿ ಕನಿಷ್ಟ 1 ಸರ್ಕಾರಿ ವೈದ್ಯಕೀಯ ಕಾಲೇಜು ಇರುವಂತೆ ನೋಡಿಕೊಳ್ಳಲಾಗುವುದು.
- ಆಯುರ್ವೇದ, ನ್ಯಾಚುರೋಪತಿ ಮತ್ತು ಇತರ ಭಾರತೀಯ ವೈದ್ಯಕೀಯ ವ್ಯವಸ್ಥೆಗಳನ್ನೊಳಗೊಂಡ ವಿಶ್ವದರ್ಜೆಯ ಸಮಗ್ರ ಪಠ್ಯಕ್ರಮ ಇರುವ ಹೊಸ ಆಯುಶ್ ವಿಶ್ವವಿದ್ಯಾಲಯ.
ಮೂಲಭೂತ ಸೌಕರ್ಯಗಳ ವಿಸ್ತರಣೆ
- ಸೌಭಾಗ್ಯ ಯೋಜನೆ ಯಡಿಯಲ್ಲಿ ಪ್ರತಿ ಮನೆಗೆ ವಿದ್ಯುತ್ ಸಂಪರ್ಕ ಮತ್ತು 24×7 ವಿದ್ಯುಚ್ಛಕ್ತಿ ಪೂರೈಕೆ.
- ರಾಜ್ಯದಾದ್ಯಂತ ನದಿ ನೀರು ಮತ್ತು ಮೇಲ್ಮೈ ನೀರನ್ನು ಬಳಸಿ ಶುದ್ಧ ಕುಡಿಯುವ ನೀರಿನ ಯೋಜನೆ ರೂಪಿಸಲು ಹಾಗೂ ಜಾರಿಗೊಳಿಸಲು ಪ್ರತ್ಯೇಕ ಸಚಿವಾಲಯ.
- ಪ್ರಧಾನ ಮಂತ್ರಿ ಆವಾಸ್ ಯೋಜನೆಯ ಸರಿಯಾದ ಅನುಷ್ಠಾನದ ಮೂಲಕ ರಾಜ್ಯವನ್ನು ಗುಡಿಸಲು ಮತ್ತು ಕೊಳಗೇರಿ ಮುಕ್ತವಾಗಿಸಿಲು ಪ್ರತ್ಯೇಕ ಸಚಿವಾಲಯ ರಚಿಸಲಾಗುವುದು.
- ರಾಜ್ಯದ ವಿದ್ಯುತ್ ಉತ್ಪಾದನೆ ಸಾಮರ್ಥ್ಯವನ್ನು 2೦,೦೦೦ ಮೆಗಾವ್ಯಾಟ್ಗೆ ದುಪ್ಪಟ್ಟುಗೊಳಿಸಿ, ರಾಜ್ಯದ ಸೌರಶಕ್ತಿ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚುವರಿ 4,೦೦೦ ಮೆಗಾವ್ಯಾಟ್ಗೆ ಏರಿಸಲು ಕ್ರಮ.
- ರಾಜ್ಯದಲ್ಲಿನ ಎಲ್ಲಾ ಪ್ರದೇಶಗಳಿಗೆ ನೀರಿನ ಪೂರಕ ವಿತರಣೆಯನ್ನು ಖಚಿತಪಡಿಸಿಕೊಳ್ಳಲು ನೀರಿನ ಸರಬರಾಜಿಗೆಂದು ಗ್ರಿಡ್ ರಚನೆ ಮಾಡಲಾಗುವುದು.
- ಸ್ವಚ್ಛ ಭಾರತ ಅಭಿಯಾನದಲ್ಲಿ ಪ್ರತಿ ಮನೆಗೂ ಶೌಚಾಲಯದ ನಿರ್ಮಾಣ.
- ರಾಜ್ಯದ ಎಲ್ಲ ಜಿಲ್ಲೆಗಳನ್ನು ಸಂಪರ್ಕಿಸುವ ಷಟ್ಪಥ ಕರ್ನಾಟಕ ಮಾಲಾ ಹೆದ್ದಾರಿಯ ನಿರ್ಮಾಣ.
ರಾಜ್ಯದ ಆರ್ಥಿಕ ಮತ್ತು ಕೈಗಾರಿಕಾ ಅಭಿವೃದ್ಧಿಯ ಪುನಶ್ಚೇತನ
- ಯಾವುದೇ ಅಡೆತಡೆ ಇಲ್ಲದೆ, ಸರಾಗವಾಗಿ ಉದ್ಯಮಗಳನ್ನು ನಡೆಸಲು ಏಕಗವಾಕ್ಷಿ ವ್ಯವಸ್ಥೆಯ ಸುಧಾರಣೆ.
- ದೊಡ್ಡ ಮಟ್ಟದ ಸಂಸ್ಥೆಗಳಾಗಿ ಬೆಳೆದ ನಂತರವೂ ಸಣ್ಣ ಹಾಗೂ ಅತಿಸಣ್ಣ ಉದ್ದಿಮೆಗಳಿಗೆ ನೀಡುವ ಸೌಲಭ್ಯಗಳನ್ನು ಮೂರು ವರ್ಷಗಳ ಕಾಲ ಮುಂದುವರಿಸಲಾಗುವುದು.
- ಮಾನವ ಸಂಪನ್ಮೂಲ ಆಧಾರಿತ ಕೈಗಾರಿಕೆಗಳಲ್ಲಿ ಹೊಸ ಉದ್ಯೋಗ ಸೃಷ್ಟಿಗೆ ಒತ್ತು ನೀಡಲು ಸರ್ ಎಂ. ವಿಶ್ವೇಶ್ವರಯ್ಯ ಉದ್ಯೋಗ ಯೋಜನೆ ಯನ್ನು ಜಾರಿ ಮಾಡಲಾಗುವುದು.
- ಹೊಸ ಮರಳು ಗಣಿಗಾರಿಕೆ ನೀತಿ ಹಾಗೂ ಮರಳು ಗಣಿಗಾರಿಕೆ ನಿಯಂತ್ರಣ ಹಾಗೂ ಹಂಚಿಕೆಗೆ ಸೂಕ್ತ ಕ್ರಮ.
ನಷ್ಟದಲ್ಲಿರುವ ಎಂಎಸ್ಎಂಇಗಳನ್ನು ಗುರುತಿಸಿ ಅವುಗಳ ಪುನಶ್ಚೇತನಕ್ಕೆ ಕ್ರಮ ಸೂಚಿಸಲು ಎಂಎಸ್ಎಂಇ ಪುನಶ್ಚೇತನ ಕಾರ್ಯಪಡೆ ರಚನೆ ಮಾಡಲಾಗುವುದು. - ಸಣ್ಣ ವ್ಯಾಪಾರಿಗಳ ಕಲ್ಯಾಣಕ್ಕಾಗಿ ರೂ. 5೦೦ ಕೋಟಿ ಮೊತ್ತದ ಸಣ್ಣ ವ್ಯಾಪಾರಿ ಕಲ್ಯಾಣ ನಿಧಿ ಸ್ಥಾಪನೆ ಮಾಡಲಾಗುವುದು. ಈ ನಿಧಿಯಿಂದ ಸುಧಾರಿತ ತಂತ್ರಜ್ಞಾನ ಅಳವಡಿಕೆ, ಉತ್ತಮ ಮಾರುಕಟ್ಟೆ ಸೃಷ್ಟಿಗೆ ಬಡ್ಡಿರಹಿತ ಸಾಲ ಸೌಲಭ್ಯ ಹಾಗೂ ಅಗತ್ಯ ಬಂಡವಾಳ ಹೂಡಿಕೆಗೆ ಕಡಿಮೆ ಬಡ್ಡಿ ದರದ ಅಲ್ಪಾವಧಿ ಸಾಲ ಸೌಲಭ್ಯ ನೀಡಲಾಗುವುದು.
ಸಂಸ್ಕೃತಿ ಮತ್ತು ಪರಂಪರೆಯ ಸಂರಕ್ಷಣೆ
- ದೇವಸ್ಥಾನಗಳ ಆದಾಯವನ್ನು ಸಂಪೂರ್ಣವಾಗಿ ದೇವಸ್ಥಾನಗಳ ಖರ್ಚು ವೆಚ್ಚ ಮತ್ತು ಧಾರ್ಮಿಕ ಚಟುವಟಿಕೆಗಳಿಗೆ ಮಾತ್ರ ಮೀಸಲಿಡಲಾಗುವುದು.
- ದೇವಸ್ಥಾನಗಳ ಪುನರುಜ್ಜೀವನ ಹಾಗೂ ಪುನರುತ್ಥಾನಕ್ಕಾಗಿ ಮತ್ತು ಮಠಗಳ ಮೂಲಸೌಕರ್ಯಕ್ಕಾಗಿ ಆರಂಭಿಕ ರೂ. 5೦೦ ಕೋಟಿಯ ಮೂಲನಿಧಿಯೊಂದಿಗೆ ದೇವಾಲಯ ಪುನರುತ್ಥಾನ ನಿಧಿಗೆ ಚಾಲನೆ ನೀಡಲಾಗುವುದು.
- ಕನ್ನಡ ಮಾತನಾಡಲು ಬಾರದ ವಿದ್ಯಾರ್ಥಿಗಳು ಸುಲಭವಾಗಿ ಸಮ್ಮಿಳಿತಗೊಳ್ಳಲು ರಾಜ್ಯದ ಎಲ್ಲಾ ವಿಶ್ವವಿದ್ಯಾಲಯಗಳಲ್ಲಿ ಕನ್ನಡವನ್ನು ಕಡ್ಡಾಯ ಪರೀಕ್ಷಾ ರಹಿತ ಪ್ರಾಸ್ತಾವಿಕ ವಿಷಯವಾಗಿ ಅಳವಡಿಸಲಾಗುವುದು.
- ಕರ್ನಾಟಕದ ಸಂಸ್ಕೃತಿ, ಪ್ರದರ್ಶನ ಕಲೆ, ಮತ್ತು ಕಲಾ ಸಂಸ್ಕೃತಿಯ ಸಂಭ್ರಮಾಚರಣೆಗಾಗಿ ದಸರಾ ಉತ್ಸವದ ಸಂದರ್ಭದಲ್ಲಿ ಪ್ರತಿ ವರ್ಷ ಮೈಸೂರಿನಲ್ಲಿ ನವ ಕರುನಾಡೋತ್ಸವ ಹೆಸರಿನ ಬೃಹತ್ ಸಾಂಸ್ಕೃತಿಕ ಮೇಳ ಆಯೋಜಿಸಲಾಗುವುದು.
- ಬರಹಗಾರರು, ಕವಿಗಳು ಮತ್ತು ಇತರ ಸಾಹಿತ್ಯಿಕ ವ್ಯಕ್ತಿಗಳ ಬೆಂಬಲಕ್ಕಾಗಿ ಹಾಗೂ ಕಲ್ಯಾಣ ಯೋಜನೆಗಳನ್ನು ಜಾರಿಗೆ ತರಲು ನಿಧಿ ನೀಡಲಾಗುವುದು.
- ಅನುಭವ ಮಂಟಪದ ಮಾದರಿಯಲ್ಲಿ ಜಗಜ್ಯೋತಿ ಬಸವೇಶ್ವರರ ಬದುಕು, ಸಾಧನೆಗಳು ಮತ್ತು ಸಾಮಾಜಿಕ ಬದಲಾವಣೆ ಕುರಿತು ಪ್ರಚಾರ ಮಾಡಲು
- ಅಂತಾರಾಷ್ಟ್ರೀಯ ಕೇಂದ್ರ ಸೇರಿದಂತೆ ಬಸವ ಕಲ್ಯಾಣದಲ್ಲಿ ಭವ್ಯ ಸ್ಮಾರಕ ನಿರ್ಮಿಸಲಾಗುವುದು.
- ಚಿತ್ರದುರ್ಗದಲ್ಲಿ ವೀರ ಮದಕರಿ ನಾಯಕ ಸ್ಮಾರಕ ನಿರ್ಮಿಸಲಾಗುವುದು
- ಚಿತ್ರದುರ್ಗದಲ್ಲಿ ವೀರ ವನಿತೆ ಒನಕೆ ಓಬ್ಬವ್ವ ಸ್ಮಾರಕ ನಿರ್ಮಿಸಲಾಗುವುದು
- ದೇವನಹಳ್ಳಿಯಲ್ಲಿ ಡಾ. ರಾಜ್ ಕುಮಾರ್ ಮೆಗಾ ಫಿಲ್ಮ್ ಸಿಟಿ ಹೆಸರಿನಲ್ಲಿ ವಿಶ್ವ ದರ್ಜೆಯ ಫಿಲ್ಮ್ ಸಿಟಿ ನಿರ್ಮಾಣ.
- ಕನ್ನಡ ಚಿತ್ರ ರಂಗದಲ್ಲಿ ದುಡಿಯುತ್ತಿರುವ ಸಿನೆಮಾ ಕಲಾವಿದರ ಕಲ್ಯಾಣಕ್ಕಾಗಿ ಪುಟ್ಟಣ್ಣ ಕಣಗಾಲ್ ಮೂಲ ನಿಧಿ.
- ರಾಜ್ಯದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಪಡಿಸಲು ರೂ. 2,5೦೦ ಕೋಟಿ ಅನುದಾನ ನೀಡಲಾಗುವುದು.
- ದೇಗುಲ ದರ್ಶನ, ಕರಾವಳಿ ಪ್ರವಾಸೋದ್ಯಮ, ಪರಿಸರ, ಪಾರಂಪರಿಕ, ಅನುಭವ, ಆರೋಗ್ಯ, ಆಹಾರ ಪ್ರವಾಸೋದ್ಯೋಮದ ಪ್ರವರ್ತನೆಗೆ ವಿಶೇಷ ಪ್ರವಾಸೋದ್ಯಮ ವಲಯಗಳ ಅಭಿವೃದ್ಧಿ.
ರಾಜ್ಯದ ಎಲ್ಲಾ ವಲಯಗಳ ಸಮಾನ ಅಭಿವೃದ್ಧಿ
- ವಿಧಿ 371 (ಜೆ) ಪ್ರಕಾರ ನೀಡಲಾದ ವಿಶೇಷ ಸ್ಥಾನಮಾನ ಸಂಬಂಧಿತ ಸಮಗ್ರ ಬೆಳಣಿಗೆಗೆ ಕೇಂದ್ರ ಸರ್ಕಾರ ನೀಡುವ ನಿಧಿಯನ್ನು ಸಂಪೂರ್ಣವಾಗಿ ಬಳಸಲಾಗುವುದು.
- ವಿಧಿ 371 (ಜೆ) ಆಧಾರಿತ ವಿಶೇಷ ಸ್ಥಾನಮಾನ ಸಂಬಂಧಿತ ಹೈದರಾಬಾದ್ ಕರ್ನಾಟಕ ವಲಯದ ಆಯ್ದ ಒಂದು ಜಿಲ್ಲಾ ಕೇಂದ್ರದಲ್ಲಿ ವಿಶೇಷ ಕೈಗಾರಿಕಾ ಹೂಡಿಕೆ ಸಮ್ಮೇಳನವನ್ನು ಎರಡು ವರ್ಷಗಳಿಗೊಮ್ಮೆ ಆಯೋಜಿಸುವ ಮೂಲಕ ಆ ಪ್ರದೇಶಕ್ಕೆ ಹೂಡಿಕೆಯನ್ನು ಆಕರ್ಷಿಸಲಾಗುವುದು.
- ಹೊಸಪೇಟೆಯಿಂದ ಹೈದರಾಬಾದ್ವರೆಗಿನ ಕೊಪ್ಪಳ, ರಾಯಚೂರು, ಯಾದಗಿರಿ, ಕಲಬುರಗಿ ಮತ್ತು ಬೀದರ್ ಮೂಲಕ ಹಾದು ಹೋಗುವ ಹೈದರಾಬಾದ್ ಕರ್ನಾಟಕ ಕೈಗಾರಿಕಾ ಮೆಗಾ ಕಾರಿಡಾರ್ ಅನ್ನು ಸ್ಥಾಪಿಸಲಾಗುವುದು.
- ರಾಜ್ಯದ ಎಲ್ಲ ಪ್ರಾಂತ್ಯಗಳ ಅಭಿವೃದ್ಧಿಯಲ್ಲಿ ಸಮಾನತೆ ಕಾಯ್ದುಕೊಳ್ಳುವ ನಿಟ್ಟಿನಲ್ಲಿ 30 ಜಿಲ್ಲೆಗಳ- 30 ಹಬ್ ಮೆಗಾ ಅಭಿವೃದ್ಧಿ ಯೋಜನೆಯನ್ನು ಕೈಗೊಳ್ಳಲಾಗುವುದು. ಪ್ರತಿ ಹಬ್ ನಿರ್ದಿಷ್ಟ ಮತ್ತು ತುಲನಾತ್ಮಕ ಪ್ರಯೋಜನವಿರುವ ಉದ್ಯಮವನ್ನು ಅಭಿವೃದ್ಧಿಪಡಿಸುವ ಬಗ್ಗೆ ಗಮನಹರಿಸಲಿದೆ.
ಸ್ವಚ್ಛ ಮತ್ತು ಹಸಿರು ಕರ್ನಾಟಕ
- ಅರಣ್ಯ ಪ್ರದೇಶದ ಒತ್ತುವರಿಯನ್ನು ತಡೆಗಟ್ಟುವ ಮೂಲಕ ಕಾಡು ಪ್ರಾಣಿಗಳು ನಾಡಿಗೆ ನುಗ್ಗದಂತೆ ತಡೆಯಲಾಗುವುದು. ಕಾಡುಪ್ರಾಣಿಗಳಿಂದ ನಾಗರಿಕರನ್ನು ರಕ್ಷಣೆ ಮಾಡುವುದು ಮತ್ತು ತೊಂದರೆಗೊಳಗಾದ ನಾಗರಿಕರಿಗೆ ಸೂಕ್ತ ಪರಿಹಾರವನ್ನು ನೀಡಲಾಗುವುದು.
- ನಮ್ಮ ಕಾಡುಗಳ ರಕ್ಷಣೆ, ನಿರ್ವಹಣೆ ಮತ್ತು ಮೇಲ್ವಿಚಾರಣೆಗಾಗಿ ಜಿಯೋಸ್ಪೇಷಿಯಲ್ ತಾಂತ್ರಿಕತೆ ಬಳಕೆ.
- ರಾಜ್ಯದ ಎಲ್ಲಾ ನಗರ ಕೇಂದ್ರಗಳಲ್ಲಿ ಮಾಲಿನ್ಯ ರಹಿತ ನಗರ ಅಭಿಯಾನ ಕೈಗೊಳ್ಳುವುದು ಮತ್ತು ವೈಜ್ಞಾನಿಕ ವಿಧಾನಗಳ ಮೂಲಕ ನಗರ ಪ್ರದೇಶಗಳಲ್ಲಿ ಮಾಲಿನ್ಯ ತಡೆಗಟ್ಟಲು ಸಮಯ ಮಿತಿ ಆಧಾರಿತ ಯೋಜನೆ ರೂಪಿಸಲಾಗುವುದು.
- ರಾಜ್ಯದ ಪ್ರತಿಯೊಂದು ಜಿಲ್ಲಾ ಕೇಂದ್ರದಲ್ಲಿ ಲಾಲ್ ಬಾಗ್ ಉದ್ಯಾನದ ಮಾದರಿಯಲ್ಲಿ ಬೃಹತ್ ಉದ್ಯಾನಗಳ ನಿರ್ಮಾಣ.
ನವ ಬೆಂಗಳೂರಿಗೆ ನಮ್ಮ ವಚನ
ಬೆಂಗಳೂರನ್ನು ವಿಶ್ವದರ್ಜೆ ನಗರವನ್ನಾಗಿಸಲು ನಗರಕ್ಕೆ ಅತ್ಯಾಧುನಿಕ ಮೂಲಸೌಕರ್ಯ, ಗುಣಮಟ್ಟದ ಜೀವನ ಹಾಗೂ ನಾಗರಿಕರ ಆಶೋತ್ತರಗಳನ್ನು ಈಡೇರಿಸಲು ನಾನಾ ಅವಕಾಶಗಳನ್ನು ಸೃಷ್ಟಿಸಲಾಗುವುದು. ಕರ್ನಾಟಕ ಹಾಗೂ ದೇಶದ ಜನರಿಗಷ್ಟೇ ಅಲ್ಲ ವಿಶ್ವದ ಜನರಿಗೆ ಹೆಮ್ಮೆಯ ನಗರವಾಗಿ ಪರಿವರ್ತಿಸಲಾಗುವುದು.
[pdf-embedder url=”http://news13.in/wp-content/uploads/2018/05/BJP-Karnataka-2018-Manifesto-Kannada-web.pdf” title=”BJP Karnataka 2018 Manifesto Kannada-web”]
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.