ನವದೆಹಲಿ: ಕಳಪೆ ನೆಟ್ವರ್ಕ್ ಸಮಸ್ಯೆಯಿಂದ ಜನರಿಗೆ ನಿರಾಳತೆಯನ್ನು ನೀಡುವ ಸಲುವಾಗಿ ಸರ್ಕಾರ ಇಂಟರ್ನೆಟ್ ಟೆಲಿಫೋನಿ ವ್ಯವಸ್ಥೆಯನ್ನು ಜಾರಿಗೆ ತಂದಿದೆ.
ಈ ವ್ಯವಸ್ಥೆಯ ಮೂಲಕ ಮೊಬೈಲ್ ಫೋನ್ ಬಳಕೆದಾರರು ನೆಟ್ವರ್ಕ್ ಕಳಪೆಯಿದ್ದಾಗ ಬ್ರಾಡ್ಬ್ಯಾಂಡ್ ಮೂಲಕ ಮನೆ ಅಥವಾ ಕಛೇರಿಯ ವೈಫೈ ಬಳಸಿ ಲ್ಯಾಂಡ್ಲೈನ್ ಅಥವಾ ಮೊಬೈಲ್ಗಳಿಗೆ ಕರೆ ಮಾಡಬಹುದಾಗಿದೆ.
ಶೀಘ್ರದಲ್ಲೇ ರಿಲಾಯನ್ಸ್ ಜಿಯೋ, ಏರ್ಟೆಲ್, ಬಿಎಸ್ಎನ್ಎಲ್ ಮುಂತಾದ ಟೆಲಿಫೋನ್ ಆಪರೇಟರ್ಗಳು ಇಂಟರ್ನೆಟ್ ಟೆಲಿಫೋನಿಗಾಗಿ ಲೈಸೆನ್ಸ್ ಪಡೆದುಕೊಳ್ಳಲಿದ್ದಾರೆ. ಇವರು ತಮ್ಮ ಗ್ರಾಹಕರಿಗೆ ವೈಫೈ ಮೂಲಕ ಕರೆ ಮಾಡಲು ಪರ್ಯಾಯ ನಂಬರ್ಗಳು ಸಿಮ್ ಇಲ್ಲದೆಯೇ ನೀಡಲಿದ್ದಾರೆ.
ಕಳಪೆ ನೆಟ್ವರ್ಕ್ನಿಂದ ಬಾಧಿತರಾಗಿರುವ ಜನರಿಗೆ ಪ್ರಯೋಜನವಾಗಲೆಂದು ಈ ವ್ಯವಸ್ಥೆ ಜಾರಿಗೊಳಿಸುವಂತೆ ಟ್ರಾಯ್ ಶಿಫಾರಸ್ಸು ಮಾಡಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.