ನವದೆಹಲಿ: ಕೇಂದ್ರ ಪ್ರವಾಸೋದ್ಯಮ ಸಚಿವ ಕೆಜೆ ಅಲ್ಫೋನ್ಸ್ ಅವರು ಸೋಮವಾರ ನೊಯ್ಡಾದಲ್ಲಿ ‘ಇಂಡಿಯನ್ ಕಲಿನರಿ ಇನ್ಸ್ಟಿಟ್ಯೂಟ್(ಐಸಿಐ)’ನ್ನು ಉದ್ಘಾಟನೆಗೊಳಿಸಿದ್ದಾರೆ.
ಆತಿಥ್ಯ ಮತ್ತು ಪಾಕ ಕಲೆಯ ಅಭಿವೃದ್ಧಿಗಾಗಿ ಸಂಶೋಧನೆಗಳನ್ನು ಉತ್ತೇಜಿಸುವ ಸಲುವಾಗಿ ಈ ಇನ್ಸ್ಟಿಟ್ಯೂಟ್ನ್ನು ನಿರ್ಮಾಣ ಮಾಡಲಾಗಿದೆ.
ಈ ವೇಳೆ ಮಾತನಾಡಿದ ಸಚಿವ, ‘ದೇಶದ ಪ್ರವಾಸೋದ್ಯಮದಲ್ಲಿ ಕಳೆದ ವರ್ಷದಿಂದ ಸಾಕಷ್ಟು ಬೆಳವಣಿಗೆಯಾಗಿದೆ. ಭಾರತದ ಖಾದ್ಯಗಳೂ ಇದರಲ್ಲಿ ಮಹತ್ವದ ಪಾತ್ರವಹಿಸಿವೆ’ ಎಂದಿದ್ದಾರೆ.
ದೇಶದ ಹಲವಾರು ಪ್ರಮುಖ ಚೆಫ್ಗಳ ಸಲಹೆ, ಸಹಕಾರದೊಂದಿಗೆ ನಿರ್ಮಾಣಗೊಂಡಿರುವ ಇನ್ಸ್ಟಿಟ್ಯೂಟ್, ವಿಶ್ವದ ಅತ್ಯುನ್ನತ ಸಂಸ್ಥೆಯಾಗಿ ಹೊರಹೊಮ್ಮಲಿದೆ ಎಂಬ ಭರವಸೆಯನ್ನು ಹೊಂದಿರುವುದಾಗಿ ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.