ಜೋಧ್ಪುರ: ಮಹಿಳೆಯರ ವಿರುದ್ಧ ಯಾವುದೇ ದೌರ್ಜನ್ಯಗಳನ್ನು ಎಸಗುವುದಿಲ್ಲ ಎಂದು 9ರಿಂದ 12 ವರ್ಷದ ಶಾಲಾ ಬಾಲಕರಿಂದ ಕಡ್ಡಾಯವಾಗಿ ಪ್ರತಿಜ್ಞೆ ಮಾಡಿಸುವಂತೆ ಜೋಧ್ಪುರ ಜಿಲ್ಲಾಡಳಿತ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಶಾಲೆಗಳಿಗೆ ನಿರ್ದೇಶನ ನೀಡಿದೆ.
ಪ್ರತಿಜ್ಞಾ ಪಟ್ಟಿಯಲ್ಲಿ 9 ಅಂಶಗಳನ್ನು ಜಿಲ್ಲಾಡಳಿತ ಅಳವಡಿಸಿದ್ದು, ಮಹಿಳೆಯರಿಗೆ ಗೌರವದ, ಸುರಕ್ಷತೆಯ ವಾತಾವರಣವನ್ನು ದೊರಕಿಸಿಕೊಡುವ ಮಹತ್ವದ ಉದ್ದೇಶವನ್ನು ಇದು ಹೊಂದಿದೆ.
ಮಹಿಳೆಯರ ಘನತೆಗೆ ಕುತ್ತು ತರುವ ಕಾರ್ಯದಲ್ಲಿ ನೇರ ಅಥವಾ ಪರೋಕ್ಷವಾಗಿ ಭಾಗಿಯಾಗುವುದಿಲ್ಲ, ವರದಕ್ಷಿಣೆ ಪಡೆಯುವುದಿಲ್ಲ ಮತ್ತು ಈ ಪಿಡುಗಿನ ವಿರುದ್ಧ ಹೋರಾಟ ನಡೆಸುತ್ತೇನೆ ಎಂಬಿತ್ಯಾದಿ ಪ್ರಮುಖ ಅಂಶಗಳು ಇದರಲ್ಲಿವೆ.
ಈ ಕಾರ್ಯಕ್ರಮಕ್ಕೆ ಬಾಹುಬಲಿ ಸಿನಿಮಾದ ನಾಯಕ ಮತ್ತು ನಾಯಕಿ ಬಿಲ್ಲು ಬಾಣಗಳನ್ನು ಹಿಡಿದ ಪೋಸ್ಟರ್ನ್ನು ರಚನೆ ಮಾಡಿದ್ದು, ಈ ಮೂಲಕ ಪುರುಷ ಮತ್ತು ಮಹಿಳೆಯರ ನಡುವಣ ಪಾಲುದಾರತ್ವ ಸಮಾನವಾಗಿರಬೇಕು ಎಂದು ಪ್ರತಿಪಾದಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.