ಬೆಂಗಳೂರು: ಕರ್ನಾಟಕದಲ್ಲಿ ಚುನಾವಣಾ ರಂಗು ಗರಿಗೆದರಿದೆ, ಅಭ್ಯರ್ಥಿಗಳು ತಮ್ಮ ಕಾರ್ಯಕರ್ತರೊಂದಿಗೆ ಬಿರುಸಿನ ಪ್ರಚಾರದಲ್ಲಿ ತೊಡಗಿದ್ದಾರೆ. ಗೆಲುವೊಂದೆ ಇವರ ಸದ್ಯದ ಗುರಿ. ಜಾತಿ, ಧರ್ಮ ಮಾತ್ರವಲ್ಲದೇ ಕುಟುಂಬ ರಾಜಕಾರಣಕ್ಕೂ ಈ ಚುನಾವಣೆ ಸಾಕ್ಷಿಯಾಗಿದೆ.
ಮಾಜಿ ಮುಖ್ಯಮಂತ್ರಿಗಳ 8 ಪುತ್ರರು ಚುನಾವಣಾ ಕಣದಲ್ಲಿರುವುದು ಕುಟುಂಬ ರಾಜಕಾರಣ ಎಷ್ಟರ ಮಟ್ಟಿಗೆ ಇದೆ ಎಂಬುದಕ್ಕೆ ಸಾಕ್ಷಿ. ಸಿಎಂ ಸಿದ್ದರಾಮಯ್ಯ, ಮಾಜಿ ಸಿಎಂ ದೇವೇಗೌಡರ ಪುತ್ರರು ಹೆಚ್ಚಿನ ಗಮನವನ್ನು ಸೆಳೆದಿದ್ದಾರೆ.
ಸಿದ್ದರಾಮಯ್ಯ ಮಗ ಯತೀಂದ್ರ ವರುಣಾ ಕ್ಷೇತ್ರದಿಂದ ಕಣಕ್ಕಿಳಿಯುತ್ತಿದ್ದಾರೆ, ದೇವೇಗೌಡರ ಪುತ್ರರಾದ ಕುಮಾರಸ್ವಾಮಿ, ರೇವಣ್ಣ ಚುನಾವಣಾ ಕದನದಲ್ಲಿದ್ದಾರೆ. ಬಂಗಾರಪ್ಪ ಪುತ್ರರಾದ ಕುಮಾರ್ ಬಂಗಾರಪ್ಪ (ಬಿಜೆಪಿ) ಮತ್ತು ಮಧು ಬಂಗಾರಪ್ಪ (ಜೆಡಿಎಸ್) ಕಣದಲ್ಲಿದ್ದಾರೆ. ಜೆಎಚ್ ಪಟೇಲ್ ಅವರ ಪುತ್ರ ಮಹೀಮಾ ಪಟೇಲ್ (ಜೆಡಿಎಸ್) ಕಣದಲ್ಲಿದ್ದಾರೆ. ಧರಂ ಸಿಂಗ್ ಪುತ್ರ ಅಜಯ್ ಸಿಂಗ್(ಕಾಂಗ್ರೆಸ್) ಕಣದಲ್ಲಿದ್ದಾರೆ. ಎಸ್ಆರ್ ಬೊಮ್ಮಾಯಿ ಪುತ್ರ ಬಸವರಾಜ್ ಬೊಮ್ಮಾಯಿ(ಬಿಜೆಪಿ) ಕಣದಲ್ಲಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.