ನವದೆಹಲಿ: ಮೂಲ ನಿವಾಸಿಗಳ ಭೂ ಹಕ್ಕನ್ನು ಕಾಪಾಡುವ ಸಲುವಾಗಿ ಬಿಜೆಪಿ ನೇತ್ವದ ಅಸ್ಸಾಂ ಸರ್ಕಾರ ನೂತನ ಭೂ ನಿಯಮಗಳನ್ನು ಅನುಷ್ಠಾನಕ್ಕೆ ತರಲು ನಿರ್ಧರಿಸಿದೆ.
ಫೆಬ್ರವರಿಯಲ್ಲಿ ಸರ್ಕಾರ ಭೂ ನಿಯಮಗಳ ಬಗ್ಗೆ ಮಾಜಿ ಚುನಾವಣಾ ಆಯುಕ್ತ ಹರಿ ಶಂಕರ್ ಬ್ರಹ್ಮ ಅವರ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಿದ್ದು, ಈ ಸಮಿತಿ ಎರಡು ವರದಿಗಳನ್ನು ಸಲ್ಲಿಕೆ ಮಾಡಿದೆ. ವರದಿಯಲ್ಲಿನ ಅಂಶಗಳು ಇನ್ನೂ ಬಹಿರಂಗವಾಗಿಲ್ಲ.
ಬುಧವಾರ ಅಲ್ಲಿನ ಸಿಎಂ ಸರ್ಬಾನಂದ ಸೋನಾವಾಲ್ ಅವರು, ಮೂಲ ನಿವಾಸಿಗಳ ಭೂ ಹಕ್ಕನ್ನು ಕಾಯ್ದುಕೊಳ್ಳುವ ಸಲುವಾಗಿ ಸಮಿತಿ ಮಾಡಿದ ಶಿಫಾರಸ್ಸುಗಳನ್ನು ಅನುಷ್ಠಾನಕ್ಕೆ ತರುವಂತೆ ಕಂದಾಯ ಸಇಲಾಖೆಗೆ ಸೂಚಿಸಿದ್ದಾರೆ.
ಭೂಮಿ ಇಲ್ಲದವರಿಗೆ ಭೂ ಹಂಚಿಕೆ ಮಾಡುವಂತೆಯೂ ಅವರು ಸೂಚನೆ ನೀಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.