ಕೋಲ್ಕತ್ತಾ: ಬಾಂಗ್ಲಾದೇಶ, ಭೂತಾನ್, ಭಾರತ ಮತ್ತು ನೇಪಾಳದ ನಡುವಣ ಮೊದಲ ಅಂತರರಾಷ್ಟ್ರೀಯ ಬಸ್ ಸೇವೆ ಮಂಗಳವಾರ ಪಶ್ಚಿಮಬಂಗಾಳದ ಜಲ್ಪಯ್ಗುರಿಗೆ ಬಂದು ತಲುಪಿದೆ.
ಎರಡು ಪ್ಯಾಸೆಂಜರ್ ಬಸ್ಗಳ ಸೇವೆಯು ಬಾಂಗ್ಲಾದೇಶ-ಭೂತಾನ್-ಭಾರತ-ನೇಪಾಳ(ಬಿಬಿಐಎನ್)ಮೋಟಾರ್ ವೆಹ್ಹಿಕಲ್ಸ್ ಅಗ್ರಿಮೆಂಟ್ ಜೂನ್ 2015 ಅಡಿಯಲ್ಲಿ ಆರಂಭಗೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
49 ಅಧಿಕಾರಿಗಳನ್ನು ಹೊತ್ತು ಧಾಕಾದಿಂದ ಈ ಬಸ್ ನಾಲ್ಕು ದೇಶಗಳ ಪ್ರಯಾಣ ಹೊರಟಿದೆ. ನೇಪಾಳದ ಕಠ್ಮಂಡು ಮತ್ತು ಸಿಲಿಗುರಿಯ ಉತ್ತರಕನ್ಯಾದಿಂದ ಮತ್ತೆರಡು ಬಸ್ಗಳು ಪ್ರಯಾಣ ಆರಂಭಿಸಲಿದೆ.
ಪ್ರಯಾಣದುದ್ದಕ್ಕೂ ಬಸ್ನೊಳಗಿನ ನಿಯೋಗ ರಸ್ತೆ ಸಮೀಕ್ಷೆ, ವಲಸೆ ಪ್ರಕ್ರಿಯೆ, ಬಾರ್ಡರ್ ಚೆಕ್ಪಾಯಿಂಟ್ ಮತ್ತಿರ ಸೌಲಭ್ಯಗಳ ಸಮೀಕ್ಷೆ ನಡೆಸಲಿದೆ ಎಂದು ಬಾಂಗ್ಲಾ ಹೆದ್ದಾರಿ ಸಚಿವಾಲಯ ಹೇಳಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.