ನವದೆಹಲಿ: ಭಾರತೀಯ ವಾಯುಸೇನೆಯು ಮೂರು ದಶಕಗಳಲ್ಲೇ ಅತೀದೊಡ್ಡ ಸಮರಭ್ಯಾಸ ‘ಗಗನಶಕ್ತಿ-2018’ನ್ನು ಎ.8ರಿಂದ ಎ.22ರವರೆಗೆ ಆಯೋಜನೆಗೊಳಿಸಿದ್ದು, 6 ಸಾವಿರ ಏರ್ಕ್ರಾಫ್ಟ್ಗಳನ್ನು ನಿಯೋಜನೆಗೊಳಿಸಿದೆ. ಇದರಲ್ಲಿ 1,100 ಏರ್ಕ್ರಾಫ್ಟ್ಗಳು ಫೈಟರ್ ಜೆಟ್ಗಳಾಗಿವೆ.
ಈ ಸಮರಾಭ್ಯಾಸ ಪಶ್ಚಿಮ ಗಡಿ ಮತ್ತು ಪೂರ್ವ ಗಡಿಗಳಲ್ಲಿ ಆಯೋಜನೆಗೊಂಡಿದ್ದು, ವಾಯುಪಡೆ ಸಿಬ್ಬಂದಿ ವಿವಿಧ ರೀತಿಯ ಸಮರಾಭ್ಯಾಸಗಳಲ್ಲಿ ತೊಡಗಿಕೊಂಡಿದ್ದಾರೆ.
ಚೀನಾ ಮತ್ತು ಪಾಕಿಸ್ಥಾನದೊಂದಿಗೆ ಏಕಕಾಲದಲ್ಲಿ ಯುದ್ಧ ಸಂಭವಿಸಿದಾಗ ವಾಯುಪಡೆಯ ಸಿದ್ಧತೆ ಮತ್ತು ಸಾಮರ್ಥ್ಯವನ್ನು ಪರೀಕ್ಷಿಸುವ ಸಲುವಾಗಿ ಈ ಬೃಹತ್ ಸಮರಭ್ಯಾಸವನ್ನು ಆಯೋಜನೆ ಮಾಡಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.