ನಾನು ನಿಮ್ಮ ಪುಣ್ಯಕೋಟಿ ನನ್ನ ನೋವಿನ ಕಥೆ ನಿಮಗೆ ಹೇಳಬೇಕೆಂದು ನಿಮ್ಮ ಮನೆ ಬಾಗಿಲಿಗೆ ಬಂದಿರುವೆ.
ಐದು ವರುಷದ ಹಿಂದೆ ಕರ್ನಾಟಕ ಎಂಬ ಪುಣ್ಯಭೂಮಿಯಲ್ಲಿ ನಾನು-ನನ್ನವರು ಸ್ವಚ್ಛಂದವಾಗಿ ತಿರುಗಾಡುತ್ತಿದ್ದೆವು. ನಾವೂ ಇಲ್ಲಿನ ರೈತರ ಜೀವನಾಡಿಯಾಗಿದ್ದೆವು. ನನ್ನ ಸಂತತಿಯ ಉಳಿವಿಗಾಗಿ ಇಲ್ಲಿನ ನಾಡದೊರೆ ಗೋ ಹತ್ಯೆಯನ್ನು ನಿಷೇಧಿಸಿದ್ದರು. ಆಗಿನ ಕರುನಾಡಿನಲ್ಲಿ ನೆಮ್ಮದಿಯಿತ್ತು- ನಮ್ಮನ್ನು ಪೂಜ್ಯನೀಯವಾಗಿ ಆರಾಧಿಸುತ್ತಿದ್ದರು.
ಆದರೆ ವಿಧಿಬರಹ ಬೇರೆಯಾಗಿತ್ತು ಕೆಲ ವರುಷದ ಬಳಿಕ ಪಾಪಿ ತುಘಲಕ್ ಸರಕಾರ ಅಧಿಕಾರಕ್ಕೆ ಬಂತು. ಅಧಿಕಾರಕ್ಕೆ ಬಂದ ತಕ್ಷಣ ಗೋಹತ್ಯೆ ನಿಷೇಧ ಕಾನೂನು ರದ್ದುಗೊಳಿಸಿದರು. ಅಲ್ಲಿಂದ ಶುರುವಾಯಿತು ನನ್ನವರ ವ್ಯಥೆ !! ಹಟ್ಟಿಯಿಂದ ನನ್ನವರನ್ನು ಬಲವಂತವಾಗಿ ಎಳೆದುಕೊಂಡು ಹೋದರು, ರಸ್ತೆಯಲ್ಲಿ ಹೊಟ್ಟೆಪಾಡಿಗಾಗಿ ಮೇಯುತ್ತಿದ್ದಾಗ ಪಾಪಿಗಳು ಚಿತ್ರಹಿಂಸೆ ನೀಡಿ ಎಳೆದುಕೊಂಡು ವಾಹನಕ್ಕೆ ತುಂಬಿಸಿದರು, ನೆಮ್ಮದಿಯಿಂದ ದೇವಸ್ಥಾನದ ವಠಾರದಲ್ಲಿ ಮಲಗಿರುವಾಗ ತಲವಾರು ತೋರಿಸಿ ಕೈ ಕಾಲು ತುಂಡರಿಸಿ ಕಸಾಯಿಖಾನೆಯಲ್ಲಿ ನನ್ನವರ ಕುತ್ತಿಗೆಯ ಸೀಳಿದರು !
ಬಳಿಕ ಗಲ್ಲಿ- ಗಲ್ಲಿಗಳಲ್ಲಿ ಅಕ್ರಮವಾಗಿ ಗೋ ಹತ್ಯೆ ಆರಂಭವಾಯಿತು. ನನ್ನವರೆಲ್ಲರೂ ಸಾಲು ಸಾಲಾಗಿ ಮತಾಂಧರ ತಲವಾರಿನ ಏಟಿಗೆ ಬಲಿಯಾಗುತ್ತಾ ಹೋದರು. ನನ್ನ ಹತ್ಯೆಗೈಯುವ ರಕ್ಕಸರ ಮಾಂಸದಂಗಡಿಗೆ ಈ ಪಾಪಿ ಸರಕಾರ ಬಜೆಟ್ನಲ್ಲಿ ಸಹಾಯಧನ ಘೋಷಿಸಿತು. ನನ್ನ ಪರವಾಗಿ ಧ್ವನಿ ಎತ್ತಿದ್ದವರನ್ನು ನಕಲಿ ಕೇಸುಗಳಲ್ಲಿ ಜೈಲಿಗಟ್ಟಿದ್ದರು! ನನ್ನ ಉಳಿವಿಗಾಗಿ ಅಭಯದಾಕ್ಷರ ಬೇಡಿದವರ ತೇಜೋವಧೆ ಮಾಡಿದರು, ನನ್ನ ಪರವಾಗಿ ಹೋರಾಡಿದ ಪ್ರಶಾಂತ್ ಪೂಜಾರಿಯಂತಹ ದೇಶಭಕ್ತರು ಮಣ್ಣಲ್ಲಿ ಮಣ್ಣಾಗಿ ಹೋದರು !! ನನ್ನವರನ್ನು ನಾನು ಕಳೆದುಕೊಳ್ಳುತ್ತಿದ್ದೇನೆ !! ನನ್ನ ಉಳಿವಿಗೆ, ನನ್ನವರ ಉಳಿವಿಗಾಗಿ ಈಗ ನಿಮ್ಮ ಮನೆ ಬಾಗಿಲಿಗೆ ಬಂದಿರುವೆ ! ಹಿಂದೆ ಮಾಡಿದ ತಪ್ಪು ಮತ್ತೆ ಮಾಡದಿರಿ ನಮ್ಮನ್ನು ಉಳಿಸಿ.!!
– ಪ್ರಶಾಂತ್ ಎಂ ಉಪ್ಪಿನಂಗಡಿ
ಚಿತ್ರ ಕೃಪೆ: ವಸಂತ್ ಬಂಟಕಲ್
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.