ನವದೆಹಲಿ: ಭಾರತ ಉಪಖಂಡದ ವೈವಿಧ್ಯಮಯ ಆಹಾರ ಪದಾರ್ಥಗಳ ಬಗೆಗೆ ವಿಕಿಪಿಡಿಯಾ ಛಾಯಾಚಿತ್ರ ಸ್ಪರ್ಧೆಯನ್ನು ಏರ್ಪಡಿಸಿದೆ.
ಭಾರತೀಯ ಆಹಾರ ಪದಾರ್ಥಗಳ ಛಾಯಾಚಿತ್ರಗಳ ಗುಣಮಟ್ಟವನ್ನು ಹೆಚ್ಚಿಸುವ ಉದ್ದೇಶದಿಂದ ಮತ್ತು ಭಾರತದ ಆಹಾರ ಪದ್ಧತಿಯ ಸೌಂದರ್ಯ, ವೈವಿಧ್ಯವನ್ನು ಸಂಭ್ರಮಿಸುವುದಕ್ಕಾಗಿ ಈ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ.
ಆಸಕ್ತರು ವಿಕಿಪಿಡಿಯಾ ಅಥವಾ ವಿಕಿಮಿಡಿಯಾ ಫೌಂಡೇಶನ್ನ ಇತರ ವೆಬ್ಸೈಟ್ ಗಳಲ್ಲಿ Commons:Wiki Loves Food ಕೆಟಗರಿಯಲ್ಲಿ ತಾವು ಕ್ಲಿಕ್ಕಿಸಿದ ತಿಂಡಿ ತಿನಿಸುಗಳ ಫೋಟೋಗಳನ್ನು ಅಪ್ಲೋಡ್ ಮಾಡಬಹುದು. ಜೂನ್ 15ಫೋಟೋಗಳನ್ನು ಅಪ್ಲೋಡ್ ಮಾಡಲು ಕೊನೆಯ ದಿನವಾಗಿದೆ.
ಮೊದಲ ವಿಜೇತರಿಗೆ 20,000ರೂ, ದ್ವೀತಿಯ ವಿಜೇತರಿಗೆ 15,000 ರೂ ಮತ್ತು ತೃತೀಯ ವಿಜೇತರಿಗೆ 10,000, ಕಮ್ಯೂನಿಟಿ ಅವಾರ್ಡ್ ರೂ.5000 ನೀಡಲಾಗುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.