“ದುಷ್ಮನೋಂಕೆ ಗೋಲಿಯೋಂ ಸೇ ಮೈ ಸಾಮನಾ ಕರೂಂಗಾ ಆಝಾದ್ ಹೂಂ ಮೈ ಆಝಾದ್ ಹೀ ರಹೂಂಗಾ”…
ಹೀಗೆಂದು ನ್ಯಾಯಾಲಯದಲ್ಲಿ ಭೂರ್ಗರೆದ ಚಿರಂಜೀವಿ ಯುವಕನ ಒಂದು ನೆನಪು……
ಮಧ್ಯಪ್ರದೇಶದ ಅಲಿರಾಜಪುರ ಜಿಲ್ಲೆಯ ಭಾವರಾ ಎಂಬ ಸ್ಥಳದಲ್ಲಿ, ಪಂಡಿತ ಸೀತಾರಾಮ್ ತಿವಾರಿ ಮತ್ತು ಜಗರಾಣಿ ದೇವಿಯವರ ಎರಡನೆಯ ಮಗನಾಗಿ ಜುಲೈ 23, 1906 ರಲ್ಲಿ ಜನಿಸಿದ ಬಾಲಕ ಚಂದ್ರಶೇಖರ; ಭಾವರಾ ಮತ್ತು ವಾರಾಣಸಿಯ ಸಂಸ್ಕೃತ ಪಾಠಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದರು.
ಅದು 1919ರ ಸಮಯ, ಅಮೃತಸರದಲ್ಲಿ ನಡೆದ ಜಲಿಯನ್ ವಾಲಬಾಗ್ ಹತ್ಯಾಕಾಂಡದ ಘಟನೆಯಿಂದ ಚಂದ್ರಶೇಖರವರು ಮಾನಸಿಕವಾಗಿ ನೊಂದಿದ್ದ. ಮಹಾತ್ಮಾ ಗಾಂಧಿಯವರು 1921ರಲ್ಲಿ ಅಸಹಕಾರ ಚಳುವಳಿಯನ್ನು ಹಮ್ಮಿಕೊಂಡಾಗ, ನಡೆದ ಪ್ರತಿಭಟನೆಗಳಲ್ಲಿ ಸಕ್ರಿಯವಾಗಿ ತೊಡಗಿಕೊಂಡಿದ್ದ ಈ ತರಹದ ನಾಗರಿಕ ಶಾಸನಭಂಗಕ್ಕಾಗಿ ಅವನು ಬಂಧಿತರಾದುದಲ್ಲದೇ, ತನ್ನ ಹದಿನೈದನೇ ವಯಸ್ಸಿನಲ್ಲಿಯೇ ಪ್ರಥಮವಾಗಿ ಶಿಕ್ಷೆಗೆ ಗುರಿಯಾದ. ಮ್ಯಾಜಿಸ್ಟ್ರೇಟರು ಅವನ ಹೆಸರೇನೆಂದು ಕೇಳಿದಾಗ, “ಆಜಾದ್ ” ಎಂದು ಎದೆ ತಟ್ಟಿ ಧೈರ್ಯದಿಂದ ಹೇಳಿದ ಆಜಾದ್ ಎಂದರೆ ಸ್ವತಂತ್ರ ವ್ಯಕ್ತಿ ಎಂದು ಅರ್ಥ. ಈ ಉದ್ಧಟತನ(ಅವರ ಪ್ರಕಾರ)ಕ್ಕಾಗಿ ಅವನಿಗೆ ಹದಿನೈದು ಛಡಿಏಟುಗಳ ಶಿಕ್ಷೆಯನ್ನು ನೀಡಲಾಯಿತು. ಛಾಟಿಯಿಂದ ಹೊಡೆದ ಪ್ರತಿ ಏಟಿಗೂ “ಯುವಕ ಚಂದ್ರಶೇಖರ “ಭಾರತ್ ಮಾತಾ ಕಿ ಜೈ ಎಂದು ಹೇಳುತಿದ್ದ.
ಸ್ನೇಹಿತರೆ ಈ ಛಡಿ ಏಟು ಹೇಗಿರುತ್ತೆ ಗೊತ್ತಾ.? ಒಂದೊಂದು ಏಟಿಗೂ ಜೀವ ಹೋಗುವಷ್ಟು ನೋವು ಅಂತಹ 12 ಛಡಿಯೇಟು. ಪ್ರತೀ ಏಟಿಗೂ ಭಾರತ್ ಮಾತಾ ಕೀ ಜೈ ಎಂಬ ಜೈಕಾರ ದೇಹದಿಂದ ರಕ್ತ ಸುರಿದರೂ ಒಂದು ಚೂರೂ ನೋವಿಲ್ಲ ಅವನಿಗೆ. ನನಗೆ ಗೊತ್ತಿರೊ ಪ್ರಕಾರ ಈ ಶಿಕ್ಷೆ ಅನುಭವಿಸುವಾಗ ಅವರಿಗೆ ಕೇವಲ 1 5 ವರ್ಷ. ಈ ಘಟನೆಯ ನಂತರ, ಚಂದ್ರಶೇಖರರಿಗೆ “ಆಜಾದ್” ಎಂಬ ಬಿರುದು ಬಂತು. ತನ್ನ ಹೆಸರು “ಆಜಾದ್” ಆಗಿರುವುದರಿಂದ ತನ್ನನ್ನು ಪೊಲೀಸರು ಎಂದಿಗೂ ಜೀವಂತವಾಗಿ ಹಿಡಿಯಲಾರರೆಂದು ಅವನು ಒಮ್ಮೆ ಘೋಷಿಸಿಕೊಂಡ.
1925 ರ ಕಾಕೋರಿ ರೈಲು ಡಕಾಯತಿಯಲ್ಲಿ ಭಾಗವಹಿಸಿದ ಆಝಾದ್, ಆ ಮೊಕದ್ದಮೆಯಲ್ಲಿ 9 ಆರೋಪಿಗಳಲ್ಲಿ ಪೊಲೀಸರ ಕೈಗೆ ಸಿಕ್ಕಿಬೀಳದ ಏಕೈಕ ಕ್ರಾಂತಿಕಾರಿ. ಬಿಸ್ಮಿಲ್ಲರ ಬಂಧನದ ನಂತರ ಕ್ರಾಂತಿ ಸಂಘಟನೆಯ ಚುಕ್ಕಾಣಿಯನ್ನು ಹಿಡಿದು ಭಾರತಮಾತೆಯ ಸೇವೆಯನ್ನು ಮುಂದುವರಿಸಿದ ಆಝಾದ್, ಮುಂದಿನ ಕೆಲವರ್ಷಗಳಲ್ಲಿ ಭಾರತೀಯ ಸ್ವಾತಂತ್ರಸಂಗ್ರಾಮದಲ್ಲಿ ಸಂಪೂರ್ಣವಾಗಿ ಮುಳುಗಿದ. 1928 ರಲ್ಲಿ ಭಾರತಕ್ಕೆ ಆಗಮಿಸಿದ ಸೈಮನ್ ಕಮಿಷನ್ ವಿರುದ್ಧ ಪ್ರತಿಭಟಿಸುವ ವೇಳೆ ಶ್ರೀಯುತ ಲಾಲಾ ಲಜಪತರಾಯರ ಮೇಲಾದ ಕ್ರೂರ ದಬ್ಬಾಳಿಕೆಗೆ ಉತ್ತರವಾಗಿ ಆಝಾದರ ನೇತೃತ್ವದಲ್ಲಿ ಭಗತ್ ಸಿಂಗ್ ಹಾಗೂ ರಾಜಗುರು ಬ್ರಿಟಿಷ್ ಪೋಲೀಸ್ ಅಧಿಕಾರಿ ಜಾನ್ ಸೌಂಡರ್ಸ್ರನ್ನು ಹತ್ಯೆಗೈದರು.
ತಮಗೆ ಸಿಂಹಸ್ವಪ್ನವಾಗಿದ್ದ ಚಂದ್ರಶೇಖರ್ ಅಜಾದ್ರನ್ನು ಪೊಲೀಸರಿಗೆ ಬೇಕಾದವರಲ್ಲಿ ಬಹುಮುಖ್ಯರ ಪಟ್ಟಿಯಲ್ಲಿ ಸೇರಿಸಿ ಬ್ರಿಟಿಷರು, ಜೀವಂತವಾಗಿ ಅಥವಾ ಕೊಂದಾದರೂ ಸರಿ ಅವರನ್ನು ಬಂಧಿಸುವ ಕಾರ್ಯಕ್ಕೆ ಕೈ ಹಾಕಿದರು. ಅದರಂತೆಯೇ, ಯೋಜನೆಯ ಪ್ರಕಾರ 1931ರ ಫೆಬ್ರವರಿ 27ರಂದು ಅಲಹಾಬಾದ್ನ ಆಲ್ಫ್ರೆಡ್ ಪಾರ್ಕ್ಗೆ ಆಜಾದ್ ಬರುವ ಸುಳಿವನ್ನು ಪಡೆದ ಬ್ರಿಟೀಷ್ ಪೊಲೀಸರು ಪಾರ್ಕನ್ನು ಸುತ್ತುವರಿದು, ಅಜಾದ್ಗೆ ತಮ್ಮ ವಶವಾಗುವಂತೆ ಎಚ್ಚರಿಸಿದರು.
ಆದರೆ, ಬ್ರಿಟೀಷರ ಎಚ್ಚರಿಕೆಗೆ ಮಣಿಯದ ಅಜಾದ್, ವೀರನಂತೆ ಹೋರಾಡಿ ಮೂವರು ಪೊಲೀಸರನ್ನು ಬಲಿ ತೆಗೆದುಕೊಂಡರು. ಆದರೆ, ಮಾಹಿತಿದಾರನಿಂದ ಮೋಸಕ್ಕೊಳಗಾದ ಆಝಾದ್, 1931 ರ ಫೆಬ್ರವರಿ 27 ರಂದು ಅಲಹಾಬಾದ್ ನಗರದ ಅಲ್ ಫ್ರೆಡ್ ಪಾರ್ಕ್ನಲ್ಲಿ ಬ್ರಿಟಿಷ್ ಸೈನ್ಯದಿಂದ ಸುತ್ತುವರಿಯಲ್ಪಟ್ಟರು. ಏಕಾಂಗಿಯಾಗಿ ತಮ್ಮ ಪಿಸ್ತೂಲಿನ ಕೊನೆಯ ಗುಂಡಿನವರೆಗೂ ಹೋರಾಡಿದರು. ಯಾವ ಪರಕೀಯ ಸೈನಿಕನಿಗೂ ಶರಣಾಗದೆ ತಮ್ಮ ತಲೆಗೆ ಗುಂಡು ಹೊಡೆದುಕೊಂಡು ಆಸುನೀಗಿದರು….
ಸ್ವತಂತ್ರ್ಯನಾಗಿಯೇ ಬದುಕಿ ಸ್ವತಂತ್ರ್ಯನಾಗಿಯೇ ತಮ್ಮ ಪ್ರಾಣತ್ಯಾಗ ಮಾಡಿದರು.
ಇಂದು ಈ ಅಜೇಯ ಅಪ್ರತಿಮ ಕ್ರಾಂತಿಕಾರಿ ನಮನ್ನು ಅಗಲಿದ ದಿನ ಬನ್ನಿ ಅವನನ್ನು ಸ್ಮರಿಸೋಣ ಭಾರತಾಂಬೆಯ ಈ ವೀರ ಪುತ್ರನ ವೀರಗಾಥೆಯನ್ನು ಎಲ್ಲರಿಗೂ ತಿಳಿಸೋಣ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.