ಇಲ್ಲಿದೆ ನೋಡಿ ರಾಣಿ ಪದ್ಮಾವತಿಯ ನಿಜ ಇತಿಹಾಸ. ಸುಳ್ಳು ಕತೆಯನ್ನು ಹೇಳಿ ಇತಿಹಾಸವನ್ನು ತಿರಿಚುವ ಪ್ರಯತ್ನಕ್ಕೆ ಧಿಕ್ಕಾರವಿರಲಿ. ಪದ್ಮಾವತಿಯ ಸೌರ್ಯ ಸಾಹಸ ಆಕೆಯ ಜೀವನದ ನಿಜ ಸ್ವರೂಪ ಎಲ್ಲರೂ ತಿಳಿದುಕೊಳ್ಳೋಣ.
ಭಾರತದ ಇತಿಹಾಸದಲ್ಲಿ ಆಕಾಶದಲ್ಲಿ ಹೊಳೆಯುವ ತಾರೆ ಚಿತ್ತೋರಿನ ರಾಣಿ ಪದ್ಮಿನಿ.
ಆಕೆ ಭಾರತೀಯ ಆದರ್ಶ ನಾರೀತ್ವಕ್ಕೆ ಒಂದು ಉತ್ತಮ ಉದಾಹರಣೆ. ತನ್ನ ಜೀವಕ್ಕಿಂತಲೂ ತನ್ನ ಪತಿಯ ಬಗೆಗೆ, ತನ್ನ ಪ್ರಜೆಗಳ ಬಗೆಗೆ ತನ್ನ ನಾಡಿನ ಸ್ವಾತಂತ್ರ್ಯದ ಬಗೆಗೆ ಹೆಚ್ಚು ಪ್ರೀತ್ಯಾದರಗಳನ್ನು ಹೊಂದಿದವಳು. ಆಕೆಯ ಮಾನ ಮೌಲ್ಯಗಳಿಗೆ ಧಕ್ಕೆ ಉಂಟಾಗುವ ಸನ್ನಿವೇಶ ಬಂದಾಗ ಅದನ್ನು ಧೈರ್ಯ ಸ್ಥೈರ್ಯದಿಂದ ಎದುರಿಸಿ ಕಡೆಗೆ ಬೇರೆ ದಾರಿಯೇ ಇಲ್ಲದಿದ್ದಾಗ ಆತ್ಮಾರ್ಪಣೆ ಮಾಡಿಕೊಂಡ ಧೀರ ರಾಣಿ ಪದ್ಮಿನಿ.
ಅದು 1275 ರ ಸಮಯ ಆಗ ಚಿತ್ತೋರಿನ ಸಿಮ್ಹಾಸನದ ಮೇಲೆ ರಾಜಾ ಲಕ್ಷ್ಮಣ ಸಿಂಹ ಎನ್ನುವ 12 ವರ್ಷದ ಬಾಲಕ ವಿರಾಜಮಾನನಾಗಿದ್ದನು. ಈತನ ಚಿಕಪ್ಪ ರತನ್ ಸಿಂಹನು ರಾಜ್ಯಭಾರದ ವ್ಯವಸ್ಥೆಯನ್ನು ನೋಡಿಕೊಳ್ಳುತ್ತಿದ್ದನು. ಆದ್ದರಿಂದ ಆತನನ್ನು ಮಹಾರಾಜರೆಂದು ಅಲ್ಲಿನ ಜನ ಕರೆಯ ತೊಡಗಿದರು. ಈತನ ಪತ್ನಿಯೇ ‘ಪದ್ಮಿನಿ’.
ಪದ್ಮಿನಿಯು ಅಂದಿನ ಭಾರತದಲ್ಲೇ ಅತ್ಯಂತ ಸೌಂದರ್ಯವತಿ. ಸಿಂಗೋಲ ಎನ್ನುವ ಸಣ್ಣ ಸಂಸ್ಥಾನದ ಸರದಾರನ ಮಗಳು. ಅವಳ ನಡೆ ನುಡಿ ಸರಳ ಸಜ್ಜನಿಕೆಯಿಂದ ಕೂಡಿತ್ತು. ಅಷ್ಟೇ ಸಾಹಸೀ ಕೂಡ. “ಕುಸುಮಾದಪಿ ಮೃದೂನಿ ವಜ್ರಾದಪಿ ಕಠೋರಿಣಿ” ಎನ್ನುವ ಹಾಗೆ.
ಒಮ್ಮೆ ಆಕೆಯ ಸೌಂದರ್ಯ ಹಾಗು ಧೈರ್ಯ ಸಾಹಸದ ಬಗ್ಗೆ ಅಲ್ಲವುದ್ದೀನನ ಆಸ್ಥಾನದಲ್ಲಿ ಚರ್ಚೆಯಾಗುತ್ತಿತ್ತು. ಅಲ್ಲಾವುದ್ದಿನ್ ಮತಾಂಧ ಸುಲ್ತಾನ. ಪ್ರಪಂಚವನ್ನೇ ಗೆದ್ದು ಎರಡನೆಯ ಸಿಕಂದರ್ ಆಗಬೇಕು ಎಂಬ ಕನಸನ್ನು ಕಾಣುತ್ತಿದ್ದ. ಆದರೆ ಅವನಿಗಿದ್ದ ಅಡ್ಡಿಯೆಂದರೆ ಒಂದು ಕಡೆ ರಣಥಂಬೂರ್ ಮತ್ತು ಚಿತ್ತೋರ. ಮತ್ತೊಂದು ದಕ್ಷಿಣದಲ್ಲಿನ ದೇವಗಿರಿ. ಈ ಎರಡೂ ರಾಜ್ಯಗಳನ್ನು ನಾಶ ಮಾಡುವುದರೊಂದಿಗೆ ಭಾರತದಲ್ಲಿನ ಹಿಂದುತ್ವವನ್ನೇ ಸಂಪೂರ್ಣವಾಗಿ ನಾಶಗೊಳಿಸಬೇಕು ಎಂದು ಪಣ ತೊಟ್ಟಿದ್ದ. ಆಕ್ರಮಿತ ರಾಜ್ಯಗಳ ಮಹಾರಾಣಿಯರನ್ನು ತಾನು ತನ್ನ ಸರದಾರರು ಪಡೆದು ಅವರ ಪಾವಿತ್ರ್ಯವನ್ನು ಭಗ್ನಗೊಳಿಸುವುದು, ಮತ್ತು ಅಲ್ಲಿನವರ ಮೇಲೆ ಇಸ್ಲಾಮಿ ಮತವನ್ನು ಹೇರುವುದು ಅವನ ಗುರಿಯಾಗಿತ್ತು.
ಇದನ್ನು ಸಾಧಿಸಲು 1303 ರಲ್ಲಿ ಚಿತ್ತೋರದ ಮೇಲೆ ದಾಳಿ ಮಾಡಿದನು. ತಮ್ಮ ಮಾತೃಭೂಮಿಯನ್ನು ರಕ್ಷಿಸಲು ರಾಜಪೂತರು ಸಿದ್ಧರಾದರು. ಚಿತ್ತೋರ ನಿರೀಕ್ಷಿಸಿದಷ್ಟು ಸುಲಭವಾಗಲಿಲ್ಲ. ಅವನು ಅನೇಕ ದಾಳಿಗಳನ್ನು ಮಾಡಿದ ತನ್ನ ಪ್ರಯತ್ನ ಒಂದಂಗುಲವೂ ಮುಂದುವರೆಯಲಿಲ್ಲ. ರಾಜಪೂತರು ಅಷ್ಟು ಸಾಹಸಿಗಳು. ಹಾಗಾಗಿ ಆತ ಒಂದು ಕಪಟ ನಾಟಕವಾಡಿ ಮೋಸದಿಂದ ಚಿತ್ತೋರವನ್ನು ವಶ ಪಶಿಸಿಕೊಳ್ಳಬೇಕು ಎಂದು ಪ್ರಯತ್ನಿಸಿದ.
“ನನಗೆ ರಾಜ್ಯ ಮತ್ತು ಪದ್ಮಿನಿಯೂ ಬೇಡ. ಆಕೆಯ ಮುಖವನ್ನು ಒಮ್ಮೆ ನೋಡಿದರೆ ಸಾಕು ನಾನು ದೆಹೆಲಿಗೆ ಹಿಂದಿರುಗುವೆ” ಎಂದು ಹೇಳಿ ಕಳುಹಿಸಿದ. ಇದಕ್ಕೆ ರಾಜಾ ರತನ್ ಸಿಂಹ ಒಪ್ಪಲಿಲ್ಲ. ಆದರೆ ಪದ್ಮಿನಿ ದೂರದರ್ಶಿತ್ವದಿಂದ ಕೆಲಸ ಕೈ ಗೊಂಡಳು. ಕನ್ನಡಿಯಲ್ಲಿ ತನ್ನ ಮುಖವನ್ನು ತೋರಿಸಿದಳು. ಆದರೆ ಆಕೆಯ ಮುಖವನ್ನು ಕನ್ನಡಿಯಲ್ಲಿ ನೋಡಿದ ನಂತರ ಅವನಲ್ಲಿನ ಕಾಮಾಗ್ನಿಯು ಆತನ ಕೂಟ ಬುದ್ಧಿಯನ್ನು ಕೆರಳಿಸಿತು. ಕೋಟೆಯಿಂದ ಹೊರಹೊರಟ. ಹೆಬ್ಬಾಗಿಲ ಬಳಿಬಂದಾಗ ರಾಜನ ಮೇಲೆ ಮೋಸದಿಂದ ದಾಳಿ ಮಾಡಿದ ಅವನ ಸೈನಿಕರು, ರಾಣಾನನ್ನು ಹಿಡಿದು ವಾಯುವೇಗದಲ್ಲಿ ತಮ್ಮ ಠಾಣಾ ಸೇರಿದರು. ಇದನ್ನು ತಿಳಿದ ರಾಜಪೂತರಲ್ಲಿ ಹಾಹಾಕಾರ ಉಂಟಾಯಿತು. ಆದರೆ ರಾಣಿ ಪದ್ಮಾವತಿ ಸಹನೆ ಮತ್ತು ಬುದ್ಧಿಶಕ್ತಿಯಿಂದ ಒಂದು ಉಪಾಯ ಮಾಡಿದಳು. ತಾನು ತನ್ನ ಜೊತೆಗೆ 700 ಸಖಿಯರನ್ನು ಕರೆದುಕೊಂಡು ದೆಹೆಲಿಗೆ ಬರುವೆನೆಂದು ಮಹಾರಾಣಾರನ್ನು ಬಿಡಬೇಕೆಂದು ಹೇಳಿ ಕಳುಹಿಸಿದಳು. ಈ ಮಾತು ಖಿಲ್ಜಿಗೆ ತಲುಪಿತು ಪದ್ಮಿನಿಯು ಬರುತ್ತಿರುವಳು ಎಂದು ಕೇಳಿ ತಕ್ಷಣ ಒಪ್ಪಿಕೊಂಡನು. ಅಂತೆಯೇ ವೀರರಾದ ಗೋರಾ ಮತ್ತು ಬಾದಲ್ ಎನ್ನುವ ಈರ್ವರು ಸಾಹಸಿಗಳ ಸಹಾಯದಿಂದ 700 ಪಲ್ಲಕ್ಕಿಗಳಲ್ಲಿ ಸಖಿಯರಾಗಿ ವೇಷ ಬದಲಾಯಿಸಿಕೊಂಡ ಸಶಸ್ತ್ರ ಸೈನಿಕರು ಪದ್ಮಿನಿ ಸಮೇತ ಅಲ್ಲಾವುದ್ದಿನನ ವಸತಿಯನ್ನು ತಲುಪಿದರು. ರತನ್ ಸಿಂಹನನ್ನು ಬಿಡುಗಡೆ ಮಾಡಿಸಿ ಪದ್ಮಿನಿ ಚಿತ್ತೋರಿಗೆ ಮರಳಿದಳು. ಸ್ತ್ರೀ ರೂಪದಲ್ಲಿದ್ದ ಸೈನಿಕರು ಸುಲ್ತಾನನ ಸೈನ್ಯದ ಮೇಲೆ ಬಿದ್ದರು. ಈಗ ಅಲ್ಲಾವುದ್ದಿನನಿಗೆ ಜ್ಞಾನೋದಯವಾಯಿತು. ಆದರೆ ಅಷ್ಟರಲ್ಲಿ ಪದ್ಮಿನಿ ಅಲ್ಲಿಂದ ಹೊರಟೇ ಹೋಗಿದ್ದಳು. ಅಲ್ಲಾವುದ್ದಿನನ ಸೈನ್ಯ ಹೀನಾಯವಾಗಿ ಸೋತು ಹೋಗಿತ್ತು. ಈ ಸೋಲಿನಿಂದ ಚೇತರಿಸಿಕೊಳ್ಳಲು ಅಲ್ಲಾವುದ್ದಿನನಿಗೆ ಬಹಳ ಕಷ್ಟವಾಯಿತು. ಕೆಲವು ವರ್ಷಗಳ ನಂತರ ಅವನು ಭಾರೀ ಸೈನ್ಯದೊಡನೆ ಚಿತ್ತೋರಿಗೆ ಬಂದು ಭಾರಿ ದಾಳಿ ಮಾಡಿದ. ಆದರೆ ಅದು ಮೋಸದ ದಾಳಿಯೇ ಆಗಿತ್ತು. ರಾಜಪೂತರೂ ಇದಕ್ಕೆ ತಕ್ಕ ಉತ್ತರ ನೀಡಿದರು. ಖಿಲ್ಜಿ ಮೋಸದಿಂದ ರತನ್ ಸಿಂಹನನ್ನು ಕೊಂದುಹಾಕಿದ. ಅನೇಕ ರಾಜಪೂತರು ಹುತಾತ್ಮರಾದರು. ಈ ವಿಷಯ ಮಹಾರಾಣಿ ಪದ್ಮಿನಿಯ ಕಿವಿಗೆ ಬಿತ್ತು. ಆಕೆ ಒಂದು ವಿಶಾಲ ಅಗ್ನಿಕುಂಡವನ್ನು ಸಿದ್ದಮಾಡಿ ಅದರಲ್ಲಿ ತಾನು ಮೊದಲು ಪ್ರಾಣಾರ್ಪಣೆ ಮಾಡಿದಳು. ನಂತರ ಒಬ್ಬೊಬ್ಬರಾಗಿ ಸಾವಿರಾರು ಸ್ತ್ರೀಯರು ಆ ಬೆಂಕಿಗೆ ಹಾರಿ ತಮ್ಮ ಪ್ರಾಣವನ್ನು ಸಮರ್ಪಿಸಿ ತಮ್ಮ ಆತ್ಮಬಲ, ಧರ್ಮಬಲವನ್ನು ಪ್ರದರ್ಶಿಸಿದರು. ತಮ್ಮ ಕುಲಗೌರವ ಮಣ್ಣಿನ ಗೌರವವನ್ನು ಕಾಪಾಡಲು ಹೋರಾಡಿ ಶಾಶ್ವತ ಕೀರ್ತಿಯನ್ನು ಗಳಿಸಿದವರು ಇವರು.
ಮತಾಂಧ ಅಲ್ಲಾವುದ್ದಿನನು ಚಿತ್ತೋರ ಕೋಟೆಯನ್ನೇನೋ ಗೆದ್ದ. ಆದರೆ ಅಲ್ಲಿ ಅವನಿಗೆ ದೊರೆತದ್ದು ಸ್ಮಶಾನದೃಶ್ಯ, ನಿರ್ಜನ ನಗರ. ಬೂದಿಯ ದೊಡ್ಡ ರಾಶಿ. ಹೀಗೆ ತಮ್ಮ ಸರ್ವಸ್ವಗಳನ್ನೂ ರಾಜ್ಯ ಹಾಗು ಕುಲಗೌರವಗಳನ್ನು ಕಾಪಾಡಿಕೊಳ್ಳುತ್ತ ಶ್ರೇಷ್ಠ ನಾರೀಮಣಿಯಾಗಿ ರಾಣಿ ಪದ್ಮಿನಿ ಇಂದಿಗೂ ನಮಗೆ ಆದರ್ಶ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.