ಶ್ರೀನಗರ: ಜಮ್ಮು ಕಾಶ್ಮೀರದಲ್ಲಿನ ಹಿಂದೂಗಳಿಗಾಗಿ ಹೆಲ್ಪ್ಲೈನ್ ಆರಂಭಿಸಲು ವಿಶ್ವ ಹಿಂದೂ ಪರಿಷದ್ ನಿರ್ಧರಿಸಿದೆ.
ನವೆಂಬರ್ 3ರಿಂದ ವಿಎಚ್ಪಿ ಮುಖಂಡ ಪ್ರವೀಣ್ ತೊಗಾಡಿಯಾ ಅವರು ಕಾಶ್ಮೀರಕ್ಕೆ 3 ದಿನಗಳ ಪ್ರವಾಸಕೈಗೊಳ್ಳಲಿದ್ದಾರೆ. ಈ ಸಂದರ್ಭ ‘ಹಿಂದೂ ಹೆಲ್ಪ್ಲೈನ್’ಗೆ ಅವರು ಚಾಲನೆ ನೀಡಲಿದ್ದಾರೆ.
ಹಿಂದೂಗಳಿಗೆ ತೀರ್ಥಕ್ಷೇತ್ರ, ರಜಾದಿನ, ಅಪಘಾತದಂತಹ ತುರ್ತುಪರಿಸ್ಥಿತಿಗಳ ಬಗ್ಗೆ ಈ ಹೆಲ್ಪ್ಲೈನ್ ಮಾಹಿತಿ ನೀಡಲಿದೆ.
ಈ ವೇಳೆ ತೊಗಾಡಿಯಾ ಅವರು ವಿಎಸ್ಪಿಯ ಮಹಿಳಾ ಸದಸ್ಯರೊಂದಿಗೆ ಸಭೆ ನಡೆಸಲಿದ್ದಾರೆ. ಮುಖಂಡರ ಭದ್ರತೆ, ರಾಜಕೀಯ ಸ್ಥಿತಿಗತಿಗಳ ಬಗ್ಗೆ ಸಮಾಲೋಚನೆ ನಡೆಸಲಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.