ಬಡತನದಲ್ಲಿ ಕೂಲಿ ಮಾಡುತ್ತಲೇ ಓದುತ್ತಾ ಎಂಜಿನಿಯರಿಂಗ್ ಪದವಿ ಪಡೆದ ಬಿಹಾರದ 23 ವರ್ಷದ ದಿಲೀಪ್ ಸಹ್ನಿ ಇದೀಗ ಸಿಂಗಾಪುರದಲ್ಲಿ ವಾರ್ಷಿಕ 8 ಲಕ್ಷ ವೇತನವಿರುವ ಉದ್ಯೋಗ ಪಡೆದುಕೊಂಡಿದ್ದಾರೆ. ಈ ಮೂಲಕ ತನ್ನ ಕುಟುಂಬದ ಬಡತನವನ್ನು ಅಂತ್ಯಗೊಳಿಸಿದ್ದಾರೆ.
ಪುರ್ನಿಯಾ ಜಿಲ್ಲೆಯ ಹರ್ದ್ ಕೃಷಿ ಕೂಲಿ ಮಾಡುತ್ತಿದ್ದ ಇವರ ಕುಟುಂಬದ ಆದಾಯ ಮಾಸಿಕ ರೂ.2 ಸಾವಿರದಿಂದ ರೂ.3 ಸಾವಿರ ಅಷ್ಟೇ. ಅಷ್ಟೇ ಅಲ್ಲದೇ ಇದಕ್ಕಾಗಿ ಇವರು ಕುಟುಂಬ ಸಮೇತ ವಲಸೆ ಹೋಗಬೇಕಾಗುತ್ತಿತ್ತು.
ಇಂತಹ ಸಂಕಷ್ಟದಲ್ಲೂ ಎಂಜಿನಿಯರಿಂಗ್ ಮಾಡಲೇಬೇಕೆಂದು ಪಣತೊಟ್ಟಿದ್ದ ದಿಲೀಪ್ ಸಾಲ ಕೇಳುತ್ತಾ ಬ್ಯಾಂಕ್ಗಳನ್ನು ಅಲೆದಾಡಿದರು. ಯಾವ ಬ್ಯಾಂಕ್ ಕೂಡ ಅವರಿಗೆ ಲೋನ್ ಕೊಡಲಿಲ್ಲ. ಕೊನೆಗೆ ಅವರ ಅಣ್ಣ ಚೆನ್ನೈ ನಗರಕ್ಕೆ ಬಂದು ಟೈಲ್ಸ್ ಯುನಿಟ್ನಲ್ಲಿ ಕೆಲಸಕ್ಕೆ ಸೇರಿದರು. ಕೃಷಿ ಇಲ್ಲದ ಸಂದರ್ಭ ಇವರ ತಂದೆ ನೇಪಾಳಕ್ಕೆ ಹೋಗಿ ಐಸ್ಕ್ರೀಮ್ ಮಾರಿದರು. ಅವರಿಗೆ ಬಂದ ಆದಾಯದಲ್ಲೇ ಸಹ್ನಿ ವ್ಯಾಸಂಗ ಮಾಡಿದರು. ರಜೆ ಇದ್ದ ಸಂದರ್ಭದಲ್ಲಿ ಇವರೂ ಕೂಲಿ ಮಾಡಿ ಸಂಪಾದನೆ ಮಾಡಿದರು.
ಆರ್ಥಿಕ, ಸಾಮಾಜಿಕ ಸಂಕಷ್ಟವನ್ನು ಬದಿಗೊತ್ತಿ ಕಷ್ಟಪಟ್ಟು ಓದಿದ ಪರಿಣಾಮವಾಗಿ ಇಂದು ದಿಲೀಪ್ ಕೈತುಂಬಾ ಸಂಬಳ ಪಡೆಯುವ ಎಂಜಿನಿಯರ್ ಆಗಿ ಹೊರಹೊಮ್ಮಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.