ಲಕ್ನೋ: ರಾಜಕಾರಣಿಗಳ, ಉನ್ನತ ಅಧಿಕಾರಿಗಳ ಮಕ್ಕಳು ಸೇನೆಯನ್ನು ಸೇರುವುದು ಅತಿ ವಿರಳ. ಆದರೆ ಉತ್ತರಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ ಸಹೋದರ ಭಾರತೀಯ ಸೇನೆಯಲ್ಲಿ ಸುಬೇದಾರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂಬುದು ನಿಜಕ್ಕೂ ಸಂತಸದ ವಿಷಯವಾಗಿದೆ.
ಯೋಗಿ ಅವರ ತಮ್ಮ ಸುಬೇದಾರ್ ಶೈಲೇಂದ್ರ ಮೋಹನ್ ಅವರು ಪ್ರಸ್ತುತ ಚೀನಾದೊಂದಿಗಿನ ವಾಸ್ತವ ಗಡಿ ರೇಖೆ ಸಮೀಪ ನಿಯೋಜಿತರಾಗಿದ್ದಾರೆ. ಆಕ್ರಮಣಕಾರಿ ಸ್ವಭಾವದ ನೆರೆಯ ರಾಷ್ಟ್ರ ಚೀನಾದಿಂದಾಗಿ ಈ ಪ್ರದೇಶ ಅತೀ ಸೂಕ್ಷ್ಮ ಎನಿಸಿದೆ.
ಈ ಜಾಗದಲ್ಲಿ ನಿಂತು ದೇಶದ ಕವಾಲು ಕಾಯುತ್ತಿರುವ ಹಲವು ಯೋಧರಲ್ಲಿ ಶೈಲೇಂದ್ರ ಕೂಡ ಒಬ್ಬರು. ಇತ್ತೀಚಿಗೆ ಮಾಧ್ಯಮಗಳು ಅವರನ್ನು ಮಾತನಾಡಿಸಿದಾಗ ಅವರು, ‘ವರ್ಷಪೂರ್ತಿ ಈ ಜಾಗದಲ್ಲಿ ಗಸ್ತು ತಿರುತ್ತೇವೆ. ಇದು ನಮ್ಮ ತಾಯ್ನಾಡಾಗಿದೆ. ಯಾವುದೇ ಸನ್ನಿವೇಶದಲ್ಲೂ ನಾವಿದ್ದನ್ನು ರಕ್ಷಿಸಬೇಕಿದೆ’ ಎಂದಿದ್ದಾರೆ.
ಅಣ್ಣ ಮುಖ್ಯಮಂತ್ರಿಯಾದ ಬಳಿಕ ದೆಹಲಿಯಲ್ಲಿ ಒಂದು ಬಾರಿ ಅವರನ್ನು ಭೇಟಿಯಾಗಿದ್ದೇನೆ. ಅವರ ಅನುಭವವನ್ನು ನನ್ನೊಂದಿಗೆ ಹಂಚಿಕೊಂಡಿದ್ದಾರೆ. ಅಲ್ಲದೇ ಸಾಮರ್ಥ್ಯವನ್ನು ದೇಶ ಸೇವೆಗೆ ಮುಡಿಪಾಗಿಡು ಎಂಬ ಸಂದೇಶವನ್ನು ಅವರು ನನಗೆ ನೀಡಿದ್ದಾರೆ ಎಂದಿದ್ದಾರೆ.
ಯೋಗಿ ಅವರಿಗೆ ಒಟ್ಟು ಮೂರು ಮಂದಿ ಸಹೊದರರಿದ್ದು, ಎಲ್ಲರೂ ಸಾಮಾನ್ಯ ಜೀವನವನ್ನು ನಡೆಸುತ್ತಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.