ಭರತ್ ಠಾಕೂರ್ ಬೆಂಗಳೂರು ಮೂಲದ ಪ್ರಸಿದ್ಧ ಚಿತ್ರ ಕಲಾವಿದ ಮತ್ತು ಯೋಗ ಗುರು. 4 ವರ್ಷದ ಬಾಲಕನಿದ್ದಾಗಲೇ ಸ್ವಯಂ ಸಾಕ್ಷಾತ್ಕಾರಕ್ಕಾಗಿ ಹಿಮಾಲಯಕ್ಕೆ ತೆರಳಿದ್ದ ಇವರು ಅಘೋರಿಗಳೊಂದಿಗೆ 14 ವರ್ಷಗಳನ್ನು ಕಳೆದಿದ್ದರು. ಇದೀಗ ಕಲೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಅವರು ತಮ್ಮ ಚಿತ್ರಗಳಲ್ಲಿ ಆಧ್ಯಾತ್ಮವನ್ನು ಮೂಡಿಸುತ್ತಾರೆ.
ಇತ್ತೀಚಿಗೆ ಅವರು ಹಮ್ಮಿಕೊಂಡಿದ್ದ ಆರ್ಟ್ ಶೋ ‘ಆರೆಯೋಲ-ದಿ ಕಲರ್ಸ್ ಯೂ ಆರ್’ನಲ್ಲಿ ಅವರು ಶಿವನ ಅಲೆಮಾರಿ ಭಕ್ತರ ಬದುಕುಗಳನ್ನು ಚಿತ್ರಿಸಿದ್ದಾರೆ. ಪ್ರತಿ ಐದು ವರ್ಷಗಳಿಗೊಮ್ಮೆ ಅಘೋರಿಗಳನ್ನು ಭೇಟಿಯಾಗಿ ಅವರ ಆಧ್ಯಾತ್ಮದಲ್ಲಿ ಯಾವ ಬದಲಾವಣೆಗಳಾಗಿವೆ ಎಂಬುದನ್ನು ತಿಳಿದುಕೊಳ್ಳುತ್ತಾರೆ.
ಆಧ್ಯಾತ್ಮ ಮಾತ್ರವಲ್ಲ ಯೋಗವನ್ನೂ ಅವರಿಂದ ಕರಗತ ಮಾಡಿಕೊಂಡಿರುವ ಭರತ್, ಶಿವನನ್ನು ನೇರವಾಗಿ ಸಂಪರ್ಕಿಸುವ ಅಘೋರಿಗಳ ಶಕ್ತಿಯನ್ನೂ ಅವರು ತನ್ನೊಳಗಿಳಿಸಿದ್ದಾರೆ. ಅವರೆಲ್ಲಾ ಕಲಾ ಕಾರ್ಯ ಶಿವನಿಗೆ ಸಂಬಂಧಿಸಿದ್ದೇ ಆಗಿರುತ್ತದೆ. ಆದಿ ಯೋಗಿಯಿಂದಲೇ ನನಗೆ ಪ್ರೇರಣೆ ಸಿಗುತ್ತದೆ ಎಂಬುದು ಅವರ ಮಾತು.
ಅವರ ‘ತಪಸ್ಯಾ’ ಚಿತ್ರ ಶಾಂತನಾದ ಶಿವನ ಆಳ ಗಮನವನ್ನು ಕೇಂದ್ರೀಕರಿಸಿದರೆ, ’ಶೂನ್ಯ’ ಚಿತ್ರ ಭಾವನಾರಹಿತ ಶಿವನನ್ನು ಬಿಂಬಿಸುತ್ತದೆ. ಒಟ್ಟಿನಲ್ಲಿ ಭರತ್ ಆಧ್ಯಾತ್ಮವನ್ನು ಒಳಪಡಿಸಿದ ಅನನ್ಯ ಚಿತ್ರಕಾರ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.