ನವದೆಹಲಿ: ಸುಮಾರು 2 ಸಾವಿರ ವರ್ಷಗಳಿಂದ ಭಾರತವು ಚೀನಾದ ಮೇಲೆ ಸಾಂಸ್ಕೃತಿಕವಾಗಿ ನಿಯಂತ್ರಣ ಮತ್ತು ಪ್ರಾಬಲ್ಯವನ್ನು ಸಾಧಿಸಿದೆ ಎಂಬುದಾಗಿ ಕೇಂದ್ರ ಗೃಹಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.
ಪ್ರವಾಸೋದ್ಯಮ ಸಚಿವಾಲಯ ಆಯೋಜನೆ ಮಾಡಿದ ಪ್ರವಾಸೋದ್ಯಮ ಹಬ್ಬ ‘ಪರ್ಯಟನ್ ಪರ್ವ್’ನಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಭಾರತದ ಜಾಗತಿಕ ಪ್ರಭಾವವನ್ನು ಹೆಚ್ಚಿಸುವ ಸಲುವಾಗಿ ಪ್ರವಾಸೋದ್ಯಮವನ್ನು ಬಳಸಿಕೊಳ್ಳಬೇಕು ಎಂದರು. ಅಲ್ಲದೇ ಪ್ರವಾಸೋದ್ಯಮಕ್ಕೆ ಭಾರತವನ್ನು ಸೂಪರ್ ಪವರ್ ಮಾಡುವ ಶಕ್ತಿ ಇದೆ ಎಂದರು.
‘ಚೀನಾ ಕ್ರಾಂತಿಯ ಸಂದರ್ಭ ಪೆಕಿಂಗ್ ಯೂನಿವರ್ಸಿಟಿ ವೈಸ್ ಚಾನ್ಸಲರ್ ಆಗಿದ್ದ ಹು ಶಿಹ್ ಅವರು, ಒಬ್ಬನೇ ಒಬ್ಬ ಯೋಧನನ್ನು ಕಳುಹಿಸದೆಯೇ ಭಾರತ 2 ಸಾವಿರ ವರ್ಷಗಳ ಕಾಲ ಚೀನಾದ ಮೇಲೆ ಸಾಂಸ್ಕೃತಿಕವಾಗಿ ನಿಯಂತ್ರಣ ಮತ್ತು ಪ್ರಾಬಲ್ಯವನ್ನು ಸಾಧಿಸಿತ್ತು ಎಂದು ಹೇಳಿರುವುದನ್ನು ನಾವು ಸ್ಮರಿಸಿಕೊಳ್ಳಬೇಕು’ ಎಂದರು.
ಸಾಂಸ್ಕೃತಿಕವಾಗಿ ಚೀನಾವನ್ನು ನಿಯಂತ್ರಿಸುವ ಶಕ್ತಿ ಇರುವ ರಾಷ್ಟ್ರವೊಂದಿದ್ದರೆ ಅದು ಭಾರತ ಮಾತ್ರ, ಅದನ್ನು ಹು ಶಿಹ್ ಕೂಡ ಒಪ್ಪಿಕೊಂಡಿದ್ದರು ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.