ಸ್ವತಃ ರಸ್ತೆ ನಿರ್ಮಾಣ ಮಾಡುವುದರಿಂದ ಹಿಡಿದು ಗೋಡಂಬಿ ಗ್ರೇಡಿಂಗ್ ಮೆಶಿನ್ ಅಭಿವೃದ್ಧಿಪಡಿಸುವವರೆಗೆ ಕಾರ್ಯ ಮಾಡಿದ ಅನುಪ್ ವಿಜಾಪುರ್ ಒರ್ವ ಅದ್ಭುತ, ಹೊಸ ಕಲ್ಪನೆಯ ಆವಿಷ್ಕಾರಿ.
ವೃತ್ತಿಯಲ್ಲಿ ಮೆಕಾನಿಕಲ್ ಎಂಜಿನಿಯರ್ ಆಗಿದ್ದರೂ ಇವರಿಗೆ ಕಂಪ್ಯೂಟರ್, ತಂತ್ರಜ್ಞಾನದ ಮೇಲೆ ಎಲ್ಲಿಲ್ಲದ ಪ್ರೀತಿ. ಆ ಪ್ರೀತಿಯೇ ಅವರನ್ನು ಹೊಸ ಬಗೆಯ ಆವಿಷ್ಕಾರಗಳತ್ತ ಕೊಂಡೊಯ್ಯಿತು. ಕಾಲೇಜು ವಿದ್ಯಾರ್ಥಿಯಾಗಿದ್ದಾಗಲೇ ಇವರು ಹೊಸರೋಡ್ನ ಗುಂಡಿ ಬಿದ್ದ ರಸ್ತೆಯನ್ನು ತಾವಾಗಿಯೇ ಬಂದು ಬಂದು ಮರು ನಿರ್ಮಿಸಿದ್ದರು.
ಅಲ್ಲದೇ ಕಾಲೇಜು ಪ್ರಾಜೆಕ್ಟ್ಗಾಗಿ ಇವರು ತಯಾರಿಸಿದ್ದ ಚಲಿಸುವ ರೈಲಿನ ಗಾಳಿಯಿಂದ ವಿದ್ಯುತ್ ತಯಾರಿಸುವ ಇವರ ಮಾಡೆಲ್ಗೆ ಹಲವಾರು ಪ್ರಶಸ್ತಿಗಳು ಲಭಿಸಿದ್ದವು. ಅಲ್ಲದೇ ಉದ್ಯೋಗಕ್ಕೆ ಸೇರಿದ ಬಳಿಕ ಇವರು ವಿವಿಧ 8 ಕೆಟಗರಿಯಲ್ಲಿ ಗೋಡಂಬಿಯನ್ನು ಗ್ರೇಡ್ ಮಾಡುವಂತಹ ಕ್ಯಾಶು ನಟ್ ಗ್ರೇಡಿಂಗ್ ಮೆಶಿನ್ನನ್ನು ಅಭಿವೃದ್ಧಿಪಡಿಸಿದರು.
ಇಷ್ಟಕ್ಕೆ ಇವರ ಆವಿಷ್ಕಾರಗಳು ನಿಲ್ಲುವುದಿಲ್ಲ. ವಾಹನಗಳನ್ನು ಚಲಾವಣೆ ಮಾಡುವ ಚಾಲಕನ ನಿದ್ರೆಯ ಮಟ್ಟವನ್ನು ಪರಿಶೀಲಿಸಲೂ ಇವರು ಡಿವೈಸ್ ಕಂಡು ಹಿಡಿದಿದ್ದಾರೆ. ತಾನು ಕಾರ್ಯ ಮಾಡುತ್ತಿರುವ ನ್ಯಾನೊಪಿಕ್ಸ್ ಸಂಸ್ಥೆಯ ಜೊತೆಗೂಡಿ ಅದನ್ನು ಮತ್ತಷ್ಟು ಅಭಿವೃದ್ಧಿಪಡಿಸುವ ಕಾರ್ಯವನ್ನು ಅವರು ಮಾಡುತ್ತಿದ್ದಾರೆ.
ಚಿಕ್ಕ ವಯಸ್ಸಿನಲ್ಲೇ ಸಮಾಜಕ್ಕೆ ಕೊಡುಗೆಗಳನ್ನು ನೀಡುವ ಕಾರ್ಯವನ್ನು ಮಾಡುತ್ತಿರುವ ಅನುಪ್ ವಿಜಾಪುರ್ ಇತರರಿಗೆ ಮಾದರಿಯಾಗಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.