ನವದೆಹಲಿ: ಹಲವು ವರ್ಷಗಳ ಹಿಂದೆ ನಡೆದಿರುವ ಬೋಫೋರ್ಸ್ ಹಗರಣದ ಮರು ತನಿಖೆಗೆ ಅವಕಾಶ ಕಲ್ಪಿಸಬೇಕು ಎಂದು ಸಿಬಿಐ ಕೇಂದ್ರ ಸರ್ಕಾರವನ್ನು ಮನವಿ ಮಾಡಿಕೊಂಡಿದೆ.
2005ರ ತನ್ನ ಆದೇಶವನ್ನು ಮರುಪರಿಶೀಲನೆ ಮಾಡುಸವಂತೆ ಹಾಗೂ ಹಗರಣದ ಬಗೆಗಿನ ಎಫ್ಐಆರ್ನ್ನು ತೆಗೆದು ಹಾಕಿದ ಬಗ್ಗೆ ಸುಪ್ರೀಂಕೋರ್ಟ್ಗೆ ಸ್ಪೆಷಲ್ ಲೀವ್ ಪಿಟಿಷನ್ ಹಾಕಲು ಅವಕಾಶ ನೀಡುವಂತೆ ಸರ್ಕಾರವನ್ನು ಮನವಿ ಮಾಡಿಕೊಂಡಿದೆ.
2005ರಲ್ಲೇ ಸಿಬಿಐ ಸ್ಪೆಷಲ್ ಲೀವ್ ಪಿಟಿಷನ್ ಸಲ್ಲಿಸಲು ಮುಂದಾಗಿತ್ತು, ಆದರೆ ಅಂದಿನ ಯುಪಿಎ ಸರ್ಕಾರ ಇದಕ್ಕೆ ಅವಕಾಶ ನೀಡಲಿಲ್ಲ ಎಂದು ಅದು ಹೇಳಿದೆ.
ಸಿಬಿಐ ಸರ್ಕಾರಕ್ಕೆ ಬೋಫೋರ್ಸ್ ಮರು ತನಿಖೆಯ ಅವಕಾಶ ಕೋರಿ ಅರ್ಜಿ ಸಲ್ಲಿಸಿರುವುದು ಕಾಂಗ್ರೆಸ್ಗೆ ದೊಡ್ಡ ತಲೆನೋವಾಗಿ ಪರಿಣಮಿಸುವ ಸಾಧ್ಯತೆ ಇದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.