ನವದೆಹಲಿ: ರಕ್ಷಣಾ ಸಹಕಾರವನ್ನು ವೃದ್ಧಿಸುವ ಸಲುವಾಗಿ ಭಾರತ ಮತ್ತು ರಷ್ಯಾ ಗುರುವಾರದಿಂದ ಜಂಟಿ ಭಯೋತ್ಪಾದನಾ ವಿರೋಧಿ ಸಮರಾಭ್ಯಾಸ ನಡೆಸಲಿದೆ. ಇದೇ ಮೊದಲ ಬಾರಿಗೆ ಸಮರಾಭ್ಯಾಸ ವಿದೇಶದಲ್ಲಿ ನಡೆಯಲಿದೆ.
ಜಪಾನಿನ ವ್ಲಾಡಿಯೋಸ್ಟಾಕ್ ಸಮೀಪದ ಸಮುದ್ರ ತಟದಲ್ಲಿ ಅಕ್ಟೋಬರ್ 19ರಿಂದ 11 ದಿನಗಳ ‘INDRA-2017’ ಸಮರಾಭ್ಯಾಸ ನಡೆಯಲಿದೆ.
ಭಾರತದ ಸೇನಾಪಡೆಯ 350 ಸಿಬ್ಬಂದಿ, ವಾಯುಪಡೆಯ 80 ಸಿಬ್ಬಂದಿ ಮತ್ತು ನೌಕೆಯ ಎರಡು ಐಎಲ್ 76 ಏರ್ಕ್ರಾಫ್ಟ್, 1 ಫ್ರಿಗೇಟ್, ಕಾರ್ವೆಟೆ ಇದರಲ್ಲಿ ಭಾಗಿಯಾಗಲಿದೆ. ರಷ್ಯಾದ ವಿವಿಧ ಪಡೆಗಳ 500 ಯೋಧರು ಇದರಲ್ಲಿ ಭಾಗಿಯಾಗಲಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.