ಮಕ್ಕಳ ನಾಮಕರಣವನ್ನು ಸಾವಿರಾರು ರೂಪಾಯಿ ಖರ್ಚು ಮಾಡಿ ಅದ್ಧೂರಿಯಾಗಿ ಆಚರಿಸುವವರನ್ನು ನಾವು ನೋಡಿದ್ದೇವೆ. ಆದರೆ ಈ ಅವಕಾಶವನ್ನು ಹೆಣ್ಣುಮಕ್ಕಳ ರಕ್ಷಣೆ ಮತ್ತು ಪರಿಸರ ಜಾಗೃತಿಯನ್ನು ಮೂಡಿಸಲು ಬಳಸಿಕೊಂಡಿರುವ ಪುಣೆ ಮೂಲದ ದಂಪತಿ ಇದೀಗ ಎಲ್ಲರ ಗಮನವನ್ನು ಸೆಳೆದಿದ್ದಾರೆ.
ರಂಜಿತ್ ಮತ್ತು ನೇಹಾ ನಾಯ್ಕ್ ತಮ್ಮ ಒಂದೂವರೆ ತಿಂಗಳ ಹೆಣ್ಣು ಮಗು ಅಲಿಶಾಳ ನಾಮಕರಣ ಸಮಾರಂಭವನ್ನು ಅತ್ಯಂತ ವಿಭಿನ್ನವಾಗಿ ಆಚರಿಸಿದ್ದಾರೆ. ಆಕೆಯ ಹೆಸರಲ್ಲಿ ಯವತ್ನ ಬುಲೇಶ್ವರ ದೇಗುಲ ಸಮೀಪದ ಮಲ್ಶಿರಾಸ್ ಗ್ರಾಮದಲ್ಲಿ 101 ಗಿಡಗಳನ್ನು ನೆಟ್ಟಿದ್ದಾರೆ. ಆ ಗಿಡಗಳೊಂದಿಗೆ ಆಕೆ ಬೆಳೆಯಬೇಕು ಎಂಬ ಮಹದಾಸೆ ಅವರದ್ದು.
ಅಷ್ಟೇ ಅಲ್ಲದೇ 50 ಸಾವಿರ ರೂಪಾಯಿಗಳನ್ನು ಖರ್ಚು ಮಾಡಿ ಹತ್ತಿರದ ಶಾಲೆಗೆ 50 ಗಿಡಗಳನ್ನು, ಗಿಡ ನೆಡುವ ಪರಿಕರಗಳನ್ನು ನೀಡಿದ್ದಾರೆ. ತಮ್ಮ ಸ್ನೇಹಿತರು, ಸ್ಥಳಿಯ ಆಡಳಿತ ಎಲ್ಲವನ್ನೂ ಒಗ್ಗೂಡಿಸಿ ಅವರು ಈ ಕಾರ್ಯ ಮಾಡಿದ್ದಾರೆ.
ಪರಿಸರ ಮತ್ತು ಹೆಣ್ಣು ಮಗುವಿನ ರಕ್ಷಣೆ ಇಂದಿನ ಅನಿವಾರ್ಯ ಎಂಬುದನ್ನು ಸಾಫ್ಟ್ವೇರ್ ಎಂಜಿನಿಯರ್ ರಂಜಿತ್ ಮತ್ತು ಉಪನ್ಯಾಸಕಿ ನೇಹಾ ಎಲ್ಲರಿಗೂ ತಿಳಿಸಿಕೊಟ್ಟಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.