ನವದೆಹಲಿ: ಅಂತಾರಾಷ್ಟ್ರೀಯ ಒತ್ತಡಕ್ಕೆ ಮಣಿದಿರುವ ಸ್ವಿಟ್ಜರ್ಲ್ಯಾಂಡ್ ಸರ್ಕಾರ ಸ್ವೀಸ್ ಬ್ಯಾಂಕ್ನಲ್ಲಿ ಅಕೌಂಟ್ ಹೊಂದಿರುವ ಭಾರತೀಯರ ಹೆಸರನ್ನು ಬಹಿರಂಗಪಡಿಸುತ್ತಿದೆ. ಈಗಾಗಲೇ ಐವರ ಹೆಸರನ್ನು ಬಹಿರಂಗಪಡಿಸಲಾಗಿದೆ.
ಸ್ನೇಹ್ ಲತಾ ಸ್ವಹ್ನೇ, ಸಂಗೀತ ಸ್ವಹ್ನೇ, ಗುರ್ಜೀತ್ ಸಿಂಗ್ ಕೊಚ್ಚರ್, ಸೈಯದ್ ಮೊಹಮ್ಮದ್ ಮಸೂದ್, ಚೌದ್ ಕೌಸರ್ ಮೊಹಮ್ಮದ್ ಮಸೂದ್ ಇವರುಗಳ ಹೆಸರನ್ನು ಬಹಿರಂಗಪಡಿಸಲಾಗಿದೆ.
ಪಾನ್ ಕಾರ್ಡ್ ದಾಖಲೆಯ ಪ್ರಕಾರ ಇಬ್ಬರು ಮಹಿಳೆಯರು ದೆಹಲಿ ನಿವಾಸಿಗಳು ಎನ್ನಲಾಗಿದೆ.
ಅಲ್ಲದೇ ಇನ್ನು 30 ದಿನಗಳೊಳಗಾಗಿ ಫೆಡರಲ್ ಅಡ್ಮಿನಿಸ್ಟ್ರೇಟಿವ್ ನ್ಯಾಯಾಲಯದ ಮುಂದೆ ಮೇಲ್ಮನವಿಯನ್ನು ಸಲ್ಲಿಸದೇ ಹೋದರೆ ಬ್ಯಾಂಕ್ ಖಾತೆಯ ಎಲ್ಲಾ ವಿವರಗಳನ್ನು ಭಾರತೀಯ ಅಧಿಕಾರಿಗಳಿಗೆ ನೀಡುವುದಾಗಿ ಎಲ್ಲಾ ಐವರು ಭಾರತೀಯರಿಗೆ ಸ್ವಿಸ್ ಫೆಡರಲ್ ಟ್ಯಾಕ್ಸ್ ಅಡ್ಮಿನಿಸ್ಟ್ರೇಷನ್ ಎಚ್ಚರಿಕೆ ನೀಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.