ಮಂಗಳೂರು : ಕ್ರೀಡೆ ನಮ್ಮ ದೈಹಿಕ ಶಕ್ತಿಯನ್ನು ಹೆಚ್ಚಿಸುವುದರ ಜೊತೆಗೆ ಮಾನಸಿಕ ಮತ್ತು ಬೌದ್ಧಿಕ ಸಾಮರ್ಥ್ಯದ ವೃದ್ಧಿಗೂ ಕಾರಣವಾಗುತ್ತದೆ. ಕ್ರೀಡಾಳುಗಳು ನಿರಂತರ ಅಭ್ಯಾಸ ಮತ್ತು ಸತತ ಪ್ರಯತ್ನಗಳಿಂದ ಮಾತ್ರ ಯಶಸ್ಸು ಪಡೆಯಲು ಸಾಧ್ಯ. ಕ್ರೀಡಾಪಟುಗಳು ಕಲಿಕೆಯನ್ನು ನಿರ್ಲಕ್ಷಿಸಬಾರದು. ಕ್ರೀಡೆ ಮತ್ತು ಕಲಿಕೆ ಪರಸ್ಪರ ಪೂರಕವಾಗಿ ಸಾಗಬೇಕು ಎಂದು ಅಂತರಾಷ್ಟ್ರೀಯ ಈಜುಗಾರರೂ, ಖ್ಯಾತ ನೇತ್ರ ತಜ್ಞರೂ ಆದ ಡಾ| ಅಶುತೋಷ್ ಬೋಳೂರು ಅವರು ಅಭಿಪ್ರಾಯಪಟ್ಟರು.
ಅವರು ದ.ಕ. ಜಿಲ್ಲಾ ಪ. ಪೂ. ಶಿಕ್ಷಣ ಇಲಾಖೆ ಮತ್ತು ಶಾರದಾ ಪ. ಪೂ. ಕಾಲೇಜು, ಮಂಗಳೂರು ಇವರ ಸಹಯೋಗದಲ್ಲಿ ನಡೆಯುವ ಪ. ಪೂ. ಕಾಲೇಜುಗಳ ಜಿಲ್ಲಾ ಮಟ್ಟದ ವಾಲಿಬಾಲ್ ಪಂದ್ಯಾಟವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಶಾರದಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಪ್ರೊ. ಎಂ. ಬಿ. ಪುರಾಣಿಕ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ದ.ಕ. ಜಿಲ್ಲಾ ಪ.ಪೂ. ಕಾಲೇಜುಗಳ ಕ್ರೀಡಾ ಸಂಯೋಜಕರಾದ ಶ್ರೀ ಪ್ರೇಂನಾಥ್ ಶೆಟ್ಟಿ ಮತ್ತು ತಾಲೂಕು ಪ.ಪೂ. ಕಾಲೇಜುಗಳ ಕ್ರೀಡಾ ಸಂಯೋಜಕರಾದ ಶ್ರೀ ಶಶಿಧರ ಮಾಣಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಶಾರದಾ ಪ.ಪೂ. ಕಾಲೇಜಿನ ದೈಹಿಕ ಶಿಕ್ಷಕರಾದ ಶ್ರೀ ಸುಧಾಕರ ಶೆಟ್ಟಿ, ಶ್ರೀ ಚಂದ್ರರಾಜ್ ಜೈನ್ ಹಾಗೂ ಶ್ರೀ ದಿನೇಶ್ ಉಪಸ್ಥಿತರಿದ್ದರು.
ಶಾರದಾ ಪ.ಪೂ. ಕಾಲೇಜಿನ ವಿದ್ಯಾರ್ಥಿ ನಿಶಾನ್ ರೈಯವರ ಪ್ರಾರ್ಥನೆಯೊಂದಿಗೆ ಆರಂಭಗೊಂಡ ಕಾರ್ಯಕ್ರಮದ ಮೊದಲಿಗೆ ಶಾರದಾ ಪ. ಪೂ. ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಮಹಾಬಲೇಶ್ವರ ಭಟ್ ಅವರು ಸ್ವಾಗತಿಸಿ ಕೊನೆಯಲ್ಲಿ ಉಪಪ್ರಾಂಶುಪಾಲರಾದ ಶ್ರೀ ಪ್ರಕಾಶ್ ನಾಯ್ಕ್ ಅವರು ವಂದಿಸಿದರು. ಉಪನ್ಯಾಸಕ ಶ್ರೀ ಸತ್ಯಮೂರ್ತಿ ಕೆ. ಎಂ. ಅವರು ಕಾರ್ಯಕ್ರಮ ನಿರ್ವಹಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.