ಅಂಗಾಂಗ ದಾನದ ಮಹತ್ವದ ಬಗ್ಗೆ ಹೆಚ್ಚಿನ ಭಾರತೀಯರಿಗೆ ಇನ್ನೂ ತಿಳಿದಿಲ್ಲ. ಆದರೂ ಅಲ್ಲಲ್ಲಿ ಜನರು ತಮ್ಮನ್ನಗಲಿದವರ ಅಂಗಾಂಗಗಳನ್ನು ದಾನ ಮಾಡಿ ಮತ್ತೊಬ್ಬರ ಜೀವ ಉಳಿಸುತ್ತಾರೆ. ಮಾತ್ರವಲ್ಲ ತಮ್ಮ ಪ್ರೀತಿ ಪಾತ್ರರ ಅಂಗ ಇನ್ನೊಬ್ಬರ ದೇಹದಲ್ಲಿ ಜೀವಂತವಾಗಿರುವುದನ್ನು ಕಂಡು ತುಸು ನೆಮ್ಮದಿ ಕಾಣುತ್ತಾರೆ.
ಸೂರತ್ನ 14 ತಿಂಗಳ ಪುಟಾಣಿ ಸೋಮನಾಥ್ ಶಾ ಸೆ.2ರಂದು ಮನೆಯಲ್ಲಿ ಏಣಿಯೇರಿ ಆಟವಾಡುತ್ತಿದ್ದ ವೇಳೆ ಕೆಳಕ್ಕೆ ಬಿದ್ದು ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆ ಪಾಲಾಗಿದ್ದ. ತಲೆಗೆ ತೀವ್ರ ಸ್ವರೂಪದ ಪೆಟ್ಟು ಬಿದ್ದ ಕಾರಣ ಬದುಕುಳಿಯಲಿಲ್ಲ. ವೈದ್ಯರ ಸಲಹೆಯಾದ ಆ ಮಗುವಿನ ಅಂಗಾಂಗ ದಾನಕ್ಕೆ ಪೋಷಕರು ಒಪ್ಪಿದ್ದಾರೆ. ಈ ಕಾರಣದಿಂದಾಗಿ ಇಂದು ಮೂವರ ಜೀವ ಉಳಿದುಕೊಂಡಿದೆ.
ಮೃತಪಟ್ಟ ಪುಟಾಣಿಯ ಹೃದಯವನ್ನು ಮೂರು ವರ್ಷದ ಬಾಲಕಿಗೆ ಅಳವಡಿಸಲಾಗಿದೆ. ಹೃದಯ ಕಾಯಿಲೆಯಿಂದ ಬಳಲುತ್ತಿದ್ದ ನವಿ ಮುಂಬಯಿಯ ಆರಾಧ್ಯ ಯೋಗೇಶ್ ಮುಲೆ ಹೃದಯ ಪಡೆದುಕೊಂಡಿದ್ದಾಳೆ. ಹೀಗಾಗಿ ಮಗು ದೂರವಾದರೂ ಆತನ ಹೃದಯ ಮತ್ತೊಬ್ಬಳ ದೇಹದಲ್ಲಿ ಮಿಡಿಯುತ್ತಿದೆ ಎಂಬ ನೆಮ್ಮದಿ ಪೋಷಕರದ್ದು.
ಸೋಮನಾಥ್ ಶಾನ ಕಿಡ್ನಿಯನ್ನು 15 ವರ್ಷದ ಬಾಲಕನಿಗೆ ಅಳವಡಿಸಲಾಗಿದೆ. ಈತ 10 ವರ್ಷಗಳಿಂದ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ.
ಇದೀಗ ಸೋಮನಾಥ್ ಶಾ ಅಂಗಾಂಗ ದಾನ ಮಾಡಿದ ಪಶ್ಚಿ ಭಾರತದ ಅತೀ ಕಿರಿಯ ಎಂಬ ಹೆಸರು ಪಡೆದಿದ್ದಾನೆ. ಈ ಮೂಲಕ ಸಾವಿನಲ್ಲೂ ಸಾರ್ಥಕತೆಯನ್ನು ಪಡೆದುಕೊಂಡಿದ್ದಾನೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.