ದೇಶವನ್ನು ಸ್ವಚ್ಛವಾಗಿಸುವತ್ತ ಅಹ್ಮದಾಬಾದ್ನ 12 ವರ್ಷದ ಬಾಲಕರ ತಂಡವೊಂದು ನಿತ್ಯ ಶ್ರಮಪಡುತ್ತಿದೆ. ‘ಥಿಂಕ್ ಆಂಡ್ ಥ್ರೋ’ ಅಭಿಯಾನವನ್ನು ಆರಂಭಿಸುವ ಮೂಲಕ ತಮ್ಮ ನಗರದ ಒಣ ತ್ಯಾಜ್ಯ ನಿರ್ವಹಣೆಯನ್ನು ಯಶಸ್ವಿಯಾಗಿ ಮಾಡುತ್ತಿದೆ.
10 ಬಾಲಕರನ್ನೊಳಗೊಂಡ ರೋಬೋಟ್ರೋಬಿಕ್ಸ್ ಕ್ಲಬ್ 2015 ರಲ್ಲಿ ಮಕ್ಕಳನ್ನು ಸೈನ್ಸ್, ಟೆಕ್ನಾಲಜಿ, ಎಂಜಿನಿಯರಿಂಗ್, ಗಣಿತದತ್ತ ಆಕರ್ಷಿಸುವ ಸಲುವಾಗಿ ಆರಂಭಗೊಂಡಿತ್ತು, 2016ರಲ್ಲಿ ಯುಎಸ್ ಮೂಲದ ತ್ರ್ಯಾಶ್ ಟ್ರೆಕ್ ಸ್ಪರ್ಧೆಯಲ್ಲಿ ಭಾಗವಹಿಸಿದ ಈ ತಂಡ ರಿಸೈಕ್ಲಿಂಗ್ ವಿಷಯದ ಮೇಲೆ ಸ್ಪರ್ಧೆಯಲ್ಲಿ ಭಾಗವಹಿಸಿತ್ತು. ಇದಕ್ಕಾಗಿ ರಿಸರ್ಚ್ ನಡೆಸಿದಾಗ ಅಹ್ಮದಬಾದ್ನಲ್ಲಿ ದಿನಿತ್ಯ 4800 ಮೆಟ್ರಿಕ್ ಟನ್ ಒಣತ್ಯಾಜ್ಯ ಸೃಷ್ಟಿಯಾಗುತ್ತಿದ್ದು, ಇದರಲ್ಲಿ ಕೇವಲ ಶೇ.20ರಷ್ಟು ಮಾತ್ರ ರಿಸೈಕಲ್ ಆಗುತ್ತಿದೆ ಎಂಬುದು ಇವರ ಅರಿವಿಗೆ ಬಂತು.
ಜನರು ಒಣ ಮತ್ತು ಹಸಿ ತ್ಯಾಜ್ಯಗಳನ್ನು ವಿಂಗಡಿಸದೇ ಇರುವುದು ಕೂಡ ಇದಕ್ಕೆ ಕಾರಣವಾಗಿತ್ತು. ಹೆಚ್ಚು ಹೆಚ್ಚು ಅಧ್ಯಯನ ನಡೆಸಿದಂತೆ ಈ ಸಮಸ್ಯೆಗೆ ಏನಾದರು ಪರಿಹಾರ ಕಂಡುಹಿಡಿಲೇ ಬೇಕು ಎಂಬ ತುಡಿತ ಈ ಬಾಲಕರಿಗೆ ಹೆಚ್ಚಾಯಿತು.
ತಾವೇ ಒಣ ತ್ಯಾಜ್ಯ ಸಂಗ್ರಹಿಸಿ ಅದನ್ನು ರಿಸೈಕಲಿಂಗ್ಗೆ ಕೊಡುವುದು, ಜಾಗೃತಿ ಮೂಡಿಸಲು ಪದ್ಯ ಮತ್ತು ಸ್ಕಿಟ್ ರಚಿಸುವುದು ಹೀಗೆ ನಾನಾ ವಿಧಾನವನ್ನು ಅನುಸರಿಸಿ ಅವರು ಒಣ ತ್ಯಾಜ್ಯದ ರಿಸೈಕಲ್ ಬಗ್ಗೆ ತಮ್ಮ ಪೋಷಕರಿಗೆ, ಅಹ್ಮದಬಾದ್ ನಿವಾಸಿಗಳಿಗೆ ಅರಿವು ಮೂಡಿಸಿದರು. ಒಣ ಮತ್ತು ಹಸಿ ತ್ಯಾಜ್ಯ ವಿಂಗಡಿಸುವಂತೆ ವಿನಂತಿಸಿದರು.
ಬಳಿಕ ರಿಸೈಕಲಿಂಗ್ ಕಂಪನಿ ’ಲೆಟ್ಸ್ ರಿಸೈಕಲ್’ಗೆ ತೆರಳಿ ಅದರ ಸಹಾಯದೊಂದಿಗೆ ತಾವು ಸಂಗ್ರಹಿಸಿದ ತ್ಯಾಜ್ಯವನ್ನು ಅಲ್ಲಿ ರಿಸೈಕಲ್ ಮಾಡಿದರು. ಅಲ್ಲಿಂದ ಶಾಲೆ ಶಾಲೆಗಳಿಗೆ ತೆರಳಿ ಬರೋಬ್ಬರಿ 800 ಮಕ್ಕಳನ್ನು ತಮ್ಮ ’ಥಿಂಕ್ ಆಂಡ್ ಥ್ರೋ’ದಲ್ಲಿ ಭಾಗವಾಗಿಸಿದರು.
ತಮ್ಮ ಅಭಿಯಾನದ ಆರಂಭಿಸಿದ 20 ದಿನದೊಳಗೆ ಅವರು 1 ಟನ್ ಒಣ ತ್ಯಾಜ್ಯವನ್ನು ಸಂಗ್ರಹಿಸಿದ್ದಾರೆ. ಅದನ್ನು ರಿಸೈಕಲ್ ಮಾಡಿ ಅದರಿಂದ 20 ಸಾವಿರ ರೂಪಾಯಿ ಗಳಿಸಿದ್ದಾರೆ. ಅದನ್ನು ಅಗತ್ಯವಿರುವ ಮಕ್ಕಳ ಕೌಶಲ್ಯಾಭಿವೃದ್ಧಿಗೆ ನೀಡಿದ್ದಾರೆ.
ಈ ಮಕ್ಕಳ ಕಾರ್ಯ ಅಹ್ಮದಾಬಾದ್ ಮಾತ್ರವಲ್ಲ ಇಡೀ ದೇಶದ ಜನರಿಗೆ ಮಾದರಿ ಎನಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.