ಹೈದರಾಬಾದ್ನಲ್ಲಿ ಆಯೋಜನೆಗೊಳಿಸಲಾದ 42 ಕಿಲೋಮೀಟರ್ ಉದ್ದದ ಮ್ಯಾರಥಾನ್ನಲ್ಲಿ 20 ಸಾವಿರ ಮಂದಿ ಭಾಗವಹಿಸಿದ್ದರು. ಎಲ್ಲರೂ ಗುರಿ ತಲುಪಲು ತಮ್ಮಿಂದಾದ ಪ್ರಯತ್ನಪಟ್ಟರು. ಕೆಲವರು ಇರದಲ್ಲಿ ಸಫಲರೂ ಆದರು. ಆದರೆ ಗುರಿ ತಲುಪುವ ಮುನ್ನವೇ ಜಯಂತಿ ಸಂಪತ್ ಕುಮಾರ್ ಎಲ್ಲರ ಗಮನವನ್ನೂ ಸೆಳೆದಿದ್ದರು.
42 ಕಿಲೋ ಮೀಟರ್ನ್ನು ಪೂರೈಸಿದರು ಎಂಬ ಕಾರಣಕ್ಕೆ ಮಾತ್ರವಲ್ಲದೇ ಸೀರೆಯುಟ್ಟು ಇಷ್ಟು ದೂರ ಓಡಿ ಗುರಿ ಮುಟ್ಟಿದರು ಎಂಬುದು ಎಲ್ಲರ ಅಚ್ಚರಿಗೆ ಕಾರಣವಾಗಿತ್ತು. ಇದೇ ಕಾರಣಕ್ಕೆ ಅವರೊಂದಿಗೆ ಎಲ್ಲರೂ ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿದರು.
ಈಗಿನ ಮಹಿಳೆಯರು ಸೀರೆಯುಟ್ಟು ಒಂದು ದಿನ ಕಳೆಯಲು ಹರಸಾಹಸ ಪಡುತ್ತಾರೆ. ಇಂತಹುದರಲ್ಲಿ ಜಯಂತಿ 45 ಕಿಲೋ ಮೀಟರ್ ಓಡಿದ್ದಾರೆ.
ಕೈಮಗ್ಗವನ್ನು ಮತ್ತು ಮಹಿಳೆಯರನ್ನು ಪ್ರೋತ್ಸಾಹಿಸುವ ಸಲುವಾಗಿ ಅವರು ಸೀರೆಯುಟ್ಟು ಮ್ಯಾರಥಾನ್ನಲ್ಲಿ ಭಾಗವಹಿಸಿದ್ದಾರೆ. ಪ್ಲಾಸ್ಟಿಕ್ ವಿರುದ್ಧ ಜಾಗೃತಿ ಮೂಡಿಸುವ ಉದ್ದೇಶವೂ ಅವರಿಗಿತ್ತು.
ಪ್ರತಿನಿತ್ಯ ಸೈಕ್ಲಿಂಗ್ ಮಾಡುವ, ನಡೆಯುವ ಅವರಿಗೆ ಸೀರೆಯುಟ್ಟು ಓಡುವುದು ಅಷ್ಟು ಕಷ್ಟವೆನಿಸಿಲ್ಲ. ಅವರ ಈ ಕಾರ್ಯಕ್ಕೆ ಎಲ್ಲರಿಂದಲೂ ಶ್ಲಾಘನೆ ವ್ಯಕ್ತವಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.