ಮುಂಬಯಿ: ಸಾಂಪ್ರದಾಯಿಕವಾಗಿ ಭಾರತೀಯರು ಬಂಗಾರ ಪ್ರಿಯರು. ಹಣವನ್ನು ಇತರ ಮೂಲಗಳಿಗೆ ಹೂಡುವ ಬದಲು ಬಂಗಾರವನ್ನು ಖರೀದಿಸಿ ಸಂತೋಷ ಪಡುವ ಭಾರತೀಯರ ಒಲವು ಇತ್ತೀಚಿನ ದಿನಗಳಲ್ಲಿ ಬದಲಾಗಿದೆ. ಇದರಿಂದಾಗಿಯೇ ಬಂಗಾರದ ಆಮದು ಕೂಡ ಇಳಿಮುಖವಾಗುತ್ತಿದೆ.
ಇತ್ತೀಚಿನ ದಿನಗಳಲ್ಲಿ ಅದರಲ್ಲೂ ನೋಟ್ ಬ್ಯಾನ್ ಆದ ಬಳಿಕ ಭಾರತೀಯರು ಬಂಗಾರ, ಭೂಮಿಯಂತಹ ಫಿಸಿಕಲ್ ಅಸೆಟ್ಗಳ ಮೇಲೆ ಹಣ ಹೂಡುವ ಬದಲು ಹಣಕಾಸು ಅಸೆಟ್ಗಳಾದ ಇನ್ಸುರೆನ್ಸ್ ಮುಂತಾದುವುಗಳಿಗೆ ಹಣ ಹೂಡುತ್ತಿದ್ದಾರೆ. ಅಪಾರ ಪ್ರಮಾಣದಲ್ಲಿದ್ದ ಕಪ್ಪುಹಣಗಳು ಮುಖ್ಯ ಆರ್ಥಿಕತೆಯತ್ತ ಬಂದಿರುವುದು ಕೂಡ ಇದಕ್ಕೆ ಕಾರಣ ಎನ್ನಬಹುದು.
ಮೂಲಗಳ ಪ್ರಕಾರ 4 ವರ್ಷದಲ್ಲಿ ಫಿಸಿಕಲ್ ಅಸೆಟ್ ಸೇವಿಂಗ್ಸ್ ಶೇ.67ರಿಂದ ಶೇ.56ಕ್ಕೆ ಇಳಿದಿದೆ. ಅದೇ ಫಿನಾನ್ಶಿಲ್ ಅಸೆಟ್ ಮೇಲಿನ ಸೇವಿಂಗ್ಸ್ ಶೇ.22.3ರಿಂದ ಶೇ.26.2ರಷ್ಟು ಏರಿಕೆಯಾಗಿದೆ. ಮ್ಯೂಚ್ಯುವಲ್ ಫಂಡ್ಗಳ ಮೇಲೆಯೂ ಹೆಚ್ಚಿನ ಭಾರತೀಯರು ಈಗ ಒಲವು ತೋರಿಸುತ್ತಿದ್ದಾರೆ.
ಒಟ್ಟಾರೆಯಾಗಿ ಭಾರತೀಯರು ತಮ್ಮ ಉಳಿತಾಯದ ಹವ್ಯಾಸವನ್ನು ನಿಧಾನಕ್ಕೆ ಬೇರೆ ವಿಧಾನಕ್ಕೆ ಬದಲಾವಣೆಗೊಳಿಸುತ್ತಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.