ಪುತ್ತೂರು : ಚೀನಾದ ಆಕ್ರಮಣಕಾರಿ ನೀತಿಯನ್ನು ವಿರೋಧಿಸಿ, ಚೀನಾದ ವಸ್ತುಗಳನ್ನು ಬಹಿಷ್ಕರಿಸುವುದರ ಮೂಲಕ, ಸ್ವದೇಶೀ ವಸ್ತುಗಳನ್ನು ಬಳಸುವಂತೆ ಜನಜಾಗೃತಿ ಜಾಥಾ ಜನ ಸಂಪರ್ಕ ಅಭಿಯಾನಕ್ಕೆ ಸ್ವಾತಂತ್ರೋತ್ಸವದಿನದಂದು ಪುತ್ತೂರು ನಗರದ ದರ್ಬೆಯಲ್ಲಿ ಚಾಲನೆ ನೀಡಲಾಯಿತು.
ವಿಧಾನಪರಿಷತ್ ಮುಖ್ಯಸಚೇತಕ, ನಿವೃತ್ತ ಸೇನಾನಿ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಅವರು ಭಾರತಮಾತೆಗೆ ಪುಷ್ಪಾರ್ಚನೆ ಮಾಡುವ ಮೂಲಕ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿದರು. ವಿದ್ಯಾರ್ಥಿಗಳಲ್ಲಿ ದೇಶಭಕ್ತಿ, ಸ್ವದೇಶೀ ಭಾವನೆಗಳು ಬೆಳೆಯಬೇಕು ಮತ್ತು ಸಮಾಜವನ್ನು ಯುವಕರು – ವಿದ್ಯಾರ್ಥಿಗಳು ಜಾಗೃತಗೊಳಿಸಿ ದೇಶದ ಸೇವೆಗೆ ಸದಾ ಸಿದ್ಧರಾಗಿರಬೇಕೆಂದು ಕರೆ ನೀಡಿದರು.
ಈ ಜಾಥಾದಲ್ಲಿ ನರೇಂದ್ರ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಭಾರತದ ತ್ರಿವರ್ಣಧ್ವಜವನ್ನು ಹಿಡಿದು, ಮುಖ್ಯ ರಸ್ತೆಯ ಇಕ್ಕೆಲೆಗಳಲ್ಲಿರುವ ಅಂಗಡಿಗಳು ಮತ್ತು ಜನರಿಗೆ ಸ್ವದೇಶೀ ಜಾಗೃತಿ ಅಭಿಯಾನದ ಕರಪತ್ರಗಳನ್ನು ನೀಡಿ ಜನರನ್ನು ಚೀನಾವಸ್ತುಗಳನ್ನು ಬಹಿಷ್ಕರಿಸುವಂತೆ ಮನವಿ ಸಲ್ಲಿಸಿದರು.
ಚೀನಾ ವಿರುದ್ಧ ನಡೆದ ಜಾಗೃತಿ ಜಾಥಾಕ್ಕೆ ಸಾರ್ವಜನಿಕರು ಉತ್ತಮ ಪ್ರತಿಕ್ರಿಯೆ ನೀಡಿದರು. ಉತ್ತಮ ರೀತಿಯಲ್ಲಿ ಸಹಕಾರ ನೀಡಿದರು. ದಾರಿಯುದ್ದಕ್ಕೂ ಸಿಹಿತಿಂಡಿ, ಪಾನೀಯದ ವ್ಯವಸ್ಥೆ ಮಾಡಿದ್ದರು, ಈ ಜಾಥದಿಂದ ಪುತ್ತೂರಿನ ಮುಖ್ಯರಸ್ತೆಯಲ್ಲಿ ಸ್ವದೇಶೀ ಭಾವನೆಯನ್ನು ಜಾಗೃತಗೊಳಿಸುವಲ್ಲಿ ವಿದ್ಯಾರ್ಥಿಗಳು ಉತ್ಸಾಹದಿಂದ ಘೋಷಣೆ ಕೂಗುತ್ತಿದ್ದರು. ಸುಮಾರು ಮೂರು ಗಂಟೆಗಳ ಕಾಲ ಪುತ್ತೂರು ನಗರದ ಬೀದಿಗಳಲ್ಲಿ ಕಾಲ್ನಡಿಗೆಯ ಮೂಲಕ ರಾಷ್ಟ್ರೀಯ ವಿಚಾರಕ್ಕೋಸ್ಕರ ವಿದ್ಯಾರ್ಥಿಗಳು ಜಾಥಾ ನಡೆಸಿದ್ದನ್ನು ಶ್ಲಾಘಿಸಿದರು.
ವಿವೇಕಾನಂದ ವಿದ್ಯಾವರ್ಧಕಸಂಘದ ಕಾರ್ಯದರ್ಶಿ ಕೃಷ್ಣಭಟ್, ನರೇಂದ್ರ ಪದವಿಪೂರ್ವ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷರಾದ ರೂಪಲೇಖ, ಸಂಚಾಲಕರಾದ ವಿಜಯಕೃಷ್ಣ ಭಟ್, ಸದಸ್ಯರಾದ ಸಾಜರಾಧಾಕೃಷ್ಣ ಆಳ್ವ, ಅರುಣ್ಬಿಕೆ, ವಿವೇಕಾನಂದ ಪದವಿಪೂರ್ವ ಕಾಲೇಜಿನ ಆಡಳಿತಮಂಡಳಿ ಸದಸ್ಯರಾದ ರವಿ ಮುಂಗ್ಲಿಮನೆ, ಶೋಭಾ ಕೊಳತ್ತಾಯ, ನರೇಂದ್ರ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಅನಿಲ್ ಕುಮಾರ್, ಉಪನ್ಯಾಸಕ ವೃಂದದವರು, ಕಾಲೇಜಿನ ಸಿಬ್ಬಂದಿಗಳು ಜಾಥಾದಲ್ಲಿ ಭಾಗವಹಿಸಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.