ನವದೆಹಲಿ: ನಾನಾ ಅಪರಾಧಗಳನ್ನು ಎಸಗಿದ ಅಪರಾಧಿಯ ಮನಃಪರಿವರ್ತನೆ ಮಾಡುವುದು ಎಲ್ಲಾ ಜೈಲುಗಳ ಕರ್ತವ್ಯ. ಪುಸ್ತಕಗಳು ಪ್ರತಿಯೊಬ್ಬ ಮನುಷ್ಯನ ಮೇಲೆ ಗಾಢವಾದ ಪ್ರಭಾವ ಬೀರುತ್ತವೆ. ಅಂತೆಯೇ ಕೈದಿಗೂ ಪುಸ್ತಕ ಮನಃಪರಿವರ್ತನೆಯ ಅಸ್ತ್ರವಾಗಬಲ್ಲದು. ಇದನ್ನು ಮನಗಂಡಿರುವ ತಿಹಾರ್ ಜೈಲು ಕೈದಿಗಳ ಓದುವಿಕೆಯ ಹವ್ಯಾಸವನ್ನು ಉತ್ತೇಜನಗೊಳಿಸುತ್ತಿದೆ.
ಈಗಾಗಲೇ ದೇಶದ ಅತಿದೊಡ್ಡ ಜೈಲು ತಿಹಾರ್ ಜೈಲಿನಲ್ಲಿ 1 ಲಕ್ಷ ಪುಸ್ತಕಗಳುಳ್ಳ ಗ್ರಾಂಥಾಲಯವಿದೆ. ಕೈದಿಗಳು ದಿನಕ್ಕೆ 4 ಗಂಟೆಗಳ ಕಾಲ ಇಲ್ಲಿ ಓದಬಹುದು. ಅಲ್ಲದೇ ಕಾರ್ಡ್ ಬಳಸಿ ತಮ್ಮ ಸೆಲ್ಗೂ ಪುಸ್ತಕವನ್ನು ಕೊಂಡೊಯ್ಯಬಹುದು.
ಎಲ್ಲಾ ಸಮಸ್ಯೆಗಳಿಗೂ ಆಧ್ಯಾತ್ಮವೆಂಬ ಸರಳ ಮಾರ್ಗದಲ್ಲಿ ಪರಿಹಾರವಿತ್ತ ಸ್ವಾಮಿ ವಿವೇಕಾನಂದ, ವೇದ, ರಾಷ್ಟ್ರಪಿತ ಮಹಾತ್ಮ ಗಾಂಧಿಯ ಪುಸ್ತಕ ಸೇರಿದಂತೆ ಹಲವು ಪ್ರೇರಣಾದಾಯಕ ಪುಸ್ತಕಗಳನ್ನು ಕೈದಿಗಳು ಹೆಚ್ಚಾಗಿ ಓದಿ ಮನಸ್ಸನ್ನು ಹಗುರಗೊಳಿಸುತ್ತಾರೆ ಎಂದು ತಿಹಾರ್ ಜೈಲಿನ ಅಧೀಕ್ಷಕ ಸುನೀಲ್ ಗುಪ್ತಾ ಹೇಳುತ್ತಾರೆ.
ಎನ್ಜಿಓಗಳು, ನಾಗರಿಕರು ಪುಸ್ತಕಗಳನ್ನು ಇಲ್ಲಿಗೆ ದಾನವಾಗಿ ಕೊಡುತ್ತಾರೆ. ಡಿಸ್ಕೌಂಟ್ನಲ್ಲಿ, ಉತ್ಸವಗಳಲ್ಲಿ ಪುಸ್ತಕಗಳನ್ನು ಖರೀದಿಸಲಾಗುತ್ತದೆ. ಕೆಲವೊಂದು ಬಾರಿ ಕೈದಿಗಳೇ ಇಂತಹುದೇ ಪುಸ್ತಕ ತಂದುಕೊಡಿ ಎಂದು ಬೇಡಿಕೆ ಇಡುತ್ತಾರೆ ಎಂದು ಗುಪ್ತಾ ಹೇಳುತ್ತಾರೆ.
2008ರಲ್ಲಿ ಎಲ್.ಕೆ.ಅಡ್ವಾಣಿ ಅವರ ಆತ್ಮಚರಿತ್ರೆ ‘ಮೈ ಕಂಟ್ರಿ ಮೈ ಲೈಫ್’ ಬಿಡುಗಡೆಯಾದಾಗ ಹೆಚ್ಚಿನ ಕೈದಿಗಳು ಇದಕ್ಕೆ ಬೇಡಿಕೆಯಿಟ್ಟಿದ್ದರು. ಸಂಸತ್ತು ಭವನದ ದಾಳಿ ಆರೋಪಿ ಅಫ್ಜಲ್ ಗುರು ಕೂಡ ಈ ಪುಸ್ತಕವನ್ನು ಓದಿದ್ದಾನೆ.
ಇಲ್ಲಿ ಇಂದಿರಾ ಗಾಂಧೀ ನ್ಯಾಷನಲ್ ಒಪನ್ ಯೂನಿವರ್ಸಿಟಿ ಸೆಂಟರ್ ಇದ್ದು, ಕೈದಿಗಳಿಗೆ ಪದವಿ ಪಡೆಯುವ ಅವಕಾಶವೂ ಇದೆ.
ನಮ್ಮ ಮನಸ್ಸನ್ನು ಈ ಪುಸ್ತಕ ಬದಲಾಯಿಸಬಹುದು ಎಂಬ ಆಶಾವಾದದಿಂದಲೇ ಎಲ್ಲಾ ಕೈದಿಗಳು ಪುಸ್ತುಕಗಳನ್ನು ಓದುತ್ತಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.