ಕಿಡ್ನಿ ವೈಫಲ್ಯದಿಂದ ತೀವ್ರವಾಗಿ ಬಳಲುತ್ತಿದ್ದ ಮುಂಬಯಿಯ ಮರಮೇಶ್ವರ್ ಪವಾರ್ ಎಂಬ 28 ವರ್ಷದ ಯುವಕನಿಕೆ ಅವರ ಅಕ್ಕ ಮರುಜೀವ ನೀಡಿದ್ದಾರೆ. ತಮ್ಮ ಒಂದು ಕಿಡ್ನಿಯನ್ನು ನೀಡುವ ಮೂಲಕ ಹಿರಾ ಧೋತ್ರೆ ತಮ್ಮ ತಮ್ಮನನ್ನು ಉಳಿಸಿಕೊಂಡಿದ್ದಾರೆ.
ಪವಾರ್ ಅವರು ರಿಯಲ್ ಎಸ್ಟೇಟ್ ಕಂಪನಿ ಉದ್ಯೋಗಿಯಾಗಿದ್ದು, 2 ವರ್ಷದ ಮಗಳನ್ನೂ ಹೊಂದಿದ್ದಾರೆ. ಕುಟುಂಬದ ಏಕೈಕ ಆಧಾರ ಸ್ತಂಭವೂ ಇವರೇ.
ಕಿಡ್ನಿಯನ್ನು ಕಸಿ ಮಾಡದ ಹೊರತು ಇವರು ಬದುಕುಳಿಯುವ ಯಾವುದೇ ಅವಕಾಶವೂ ಇರಲಿಲ್ಲ. ದಾನಿಗಳಿಗೆ ಕಾಯುತ್ತಾ ಕುಳಿತುಕೊಳ್ಳುವಂತೆಯೂ ಇರಲಿಲ್ಲ. ಆಗ ಹಿರಾ ಕಿಡ್ನಿ ನೀಡಲು ಮುಂದಾದರು. ಪವಾರ್ ಅವರಿಗೆ ಅವರ ಕಿಡ್ನಿಯೂ ಹೊಂದಿಕೆಯಾಯಿತು.
ಅಕ್ಕ ಮಾಡಿದ ತ್ಯಾಗ ತಮ್ಮನ ಜೀವ ಉಳಿಸಿತು. ಕಿಡ್ನಿ ಕಸಿ ಯಶಸ್ವಿಯೂ ಆಯಿತು. ಪವಾರ್ ಅವರು ಇದೀಗ ಆಸ್ಪತ್ರೆಯಿಂದ ಹೊರಬಂದಿದ್ದು, ಅಕ್ಕನೊಂದಿಗೆ ರಕ್ಷಾಬಂಧನವನ್ನು ವಿಶೇಷವಾಗಿ ಆಚರಿಸುತ್ತಿದ್ದಾರೆ.
ಸಹೋದರತೆ ಎಂಬುದು ಎಷ್ಟೊಂದು ಅನನ್ಯ, ಭಾವನಾತ್ಮಕ ಎಂಬುದನ್ನು ಈ ಘಟನೆ ಸಾಬೀತುಪಡಿಸುತ್ತದೆ. ಸಹೋದರತೆಯ ಪ್ರೇಮವನ್ನು ಪಸರಿಸುವ ರಕ್ಷಾಬಂಧನ ಎಷ್ಟು ಪವಿತ್ರವಾದುದು ಎಂಬೂದನ್ನು ತಿಳಿಸುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.