40 ರಿಂದ 50 ಮಹಿಳೆಯರಿಗೆ ಇದು ಜೀವನ ಕಲ್ಪಿಸಿಕೊಟ್ಟಿದೆ
ದೇಗುಲದಲ್ಲಿ ದಿನನಿತ್ಯ ಕೆಜಿಗಟ್ಟಲೆ ಹೂವುಗಳ ತ್ಯಾಜ್ಯಗಳು ಸೃಷ್ಟಿಯಾಗುತ್ತವೆ. ಭಕ್ತಾದಿಗಳು ದೇವರಿಗೆಂದು ತರುವ, ದೇವರಕ್ಕೆ ಅಲಂಕಾರಕ್ಕೆ ಬಳಸಲಾದ ಹೂವುಗಳು ಮರುದಿನ ಬಾಡಿ ಕಸದ ಬುಟ್ಟಿಯನ್ನು ಸೇರುತ್ತವೆ. ಈ ತ್ಯಾಜ್ಯಗಳನ್ನು ಕೆರೆ, ಬಾವಿಯ ನೀರುಗಳಲ್ಲಿ ತೇಲಿ ಬಿಡಲಾಗುತ್ತದೆ. ಇದರಿಂದ ನೀರುಗಳು ಮಲಿನವಾಗುತ್ತದೆ.
ಆದರೆ ಹೂಗಳ ಈ ತ್ಯಾಜ್ಯದಿಂದಲೂ ಊದುಬತ್ತಿಯನ್ನು ತಯಾರಿಸುವ ಅದ್ಭುತ ಕಲೆಯನ್ನು ಕರಗತ ಮಾಡಿಕೊಂಡಿದ್ದಾರೆ ಮುಂಬಯಿಯ ಯುವಕ. 26 ವರ್ಷದ ನಿಖಿಲ್ ಗಂಪಾ ದೇಗುಲಗಳಲ್ಲಿನ ಹೂಗಳ ತ್ಯಾಜ್ಯಗಳಿಗೆ ಮರುಜೀವ ನೀಡುವ ಕಾಯಕದಲ್ಲಿ ನಿರತರಾಗಿದ್ದಾರೆ. ಈ ತ್ಯಾಜ್ಯಗಳನ್ನು ಮರುಬಳಕೆ ಮಾಡಿ ಸದ್ಭಳಕೆ ಮಾಡುತ್ತಿದ್ದಾರೆ. ಈ ಮೂಲಕ ಹಲವಾರು ಮಹಿಳೆಯರಿಗೂ ಉದ್ಯೋಗ ಕಲ್ಪಿಸಿಕೊಟ್ಟಿದ್ದಾರೆ.
ದೇಗುಲದ ತ್ಯಾಜ್ಯಗಳು ಪವಿತ್ರ ಎಂದು ಪರಿಗಣಿಸಲಾಗುತ್ತದೆ. ಇವುಗಳನ್ನು ಇತರ ತ್ಯಾಜ್ಯಗಳೊಂದಿಗೆ ಸೇರಿಸಿ ಬಿಸಾಡಲಾಗುವುದಿಲ್ಲ. ಹೀಗಾಗಿಯೇ ನಿಖಿಲ್ ಅವುಗಳಿಂದ ಊದುಬತ್ತಿ ತಯಾರಿಸುವ ತಂತ್ರಗಾರಿಕೆಯನ್ನು ಕಲಿತುಕೊಂಡರು.
ಹೂವುಗಳಲ್ಲಿ ಕಾರ್ಬನ್ ಅಂಶ ಇರುವುದರಿಂದ ಅವುಗಳು ಅಷ್ಟು ಸುಲಭದಲ್ಲಿ ಮಣ್ಣಿನಲ್ಲಿ ಕರಗುವುದಿಲ್ಲ. ಕೆಲ ಹೂವುಗಳು ವಿಷಕಾರಿಯೂ ಆಗಿದೆ ಎಂಬುದನ್ನು ಎಂಜಿನಿಯರಿಂಗ್ ಪದವೀಧರನಾಗಿದ್ದ ಕಾಂಬ ಅರಿತಿದ್ದರು. ಹೀಗಾಗಿಯೇ ಈ ಹೂವುಗಳನ್ನು ಒಣಗಿಸಿ ಬಳಿಕ ಅದನ್ನು ಪೌಡರ್ ಮಾಡಿ ಬಿದಿರಿನ ಕಡ್ಡಿಗಳಿಗೆ ಅವುಗಳನ್ನು ಲೇಪನ ಮಾಡಿ ಊದುಕಡ್ಡಿಯನ್ನು ತಯಾರಿಕೆ ಮಾಡುವುದನ್ನು ಆರಂಭಿಸಿದರು. ಈ ಬಗ್ಗೆ ಮಹಿಳೆಯರಿಗೂ ತರಬೇತಿ ನೀಡಿದರು.
ಇದೀಗ ಗ್ರೀನ್ ವೇವ್ ಪ್ರೊಡಕ್ಟ್ ಅಡಿ ನಿರ್ಮಲ್ಯ ಎಂಬ ಹೆಸರಿನಲ್ಲಿ ಊದುಕಡ್ಡಿಯನ್ನು ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾಗುತ್ತಿದೆ. ದಿನಕ್ಕೆ 300 ಕೆಜಿಯಿಂದ 400 ಕೆಜಿ ಹೂಗಳ ತ್ಯಾಜ್ಯದಿಂದ 100ಕೆಜಿಯಿಂದ 150 ಕೆಜಿ ಊದುಬತ್ತಿಯನ್ನು ತಯಾರಿಸಲಾಗುತ್ತಿದೆ. 40 ರಿಂದ 50 ಮಹಿಳೆಯರಿಗೆ ಇದು ಜೀವನ ಕಲ್ಪಿಸಿಕೊಟ್ಟಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.